ದುಬೈ: ವಿಶ್ವ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಲವಾರು ಸಲಹೆಗಳನ್ನು ನೀಡಿದ್ದಾರೆ.
ಸರ್ಕಾರಕ್ಕೆ ಎದುರಾಗಿರುವ ಸವಾಲುಗಳನ್ನು ಎದುರಿಸುವಲ್ಲಿ ನಿರ್ಣಾಯಕವಾಗಿ ಭ್ರಷ್ಟಾಚಾರ ರಹಿತ ಮತ್ತು ಪಾರದರ್ಶಕ ಆಡಳಿತದ ಮಹತ್ವದ ಕುರಿತು ಹೇಳಿದರು. ಈ ವೇಳೆ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅವರ ಕ್ರಿಯಾತ್ಮಕ ನಾಯಕತ್ವ ಕೊಂಡಾಡಿದ್ದಾರೆ.
ಜಗತ್ತಿಗೆ ಸ್ಮಾರ್ಟ್ ಸರ್ಕಾರದ ಅಗತ್ಯವಿದೆ. ಒಂದೆಡೆ ಜಗತ್ತು ಆಧುನಿಕತೆಯನ್ನು ಅಪ್ಪಿಕೊಳ್ಳುತ್ತಿದೆ. ಇನ್ನೊಂದೆಡೆ, ಕಳೆದ ಶತಮಾನದಿಂದ ಹೊರಹೊಮ್ಮುತ್ತಿರುವ ಸವಾಲುಗಳು ನಿರಂತರವಾಗಿ ಏರುತ್ತಿವೆ. ಆಹಾರ ಭದ್ರತೆ, ಆರೋಗ್ಯ ಭದ್ರತೆ, ನೀರಿನ ಭದ್ರತೆ, ಇಂಧನ ಭದ್ರತೆ, ಶಿಕ್ಷಣ ಅಥವಾ ಅಂತರ್ಗತ ಸಮಾಜ ನಿರ್ಮಿಸುವುದು, ಪ್ರತಿ ಸರ್ಕಾರವು ತನ್ನ ನಾಗರಿಕರ ಅನೇಕ ಜವಾಬ್ದಾರಿಗಳಿಂದ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಅಬುಧಾಬಿಯ ಮೊದಲ ಹಿಂದೂ ದೇವಾಲಯವಾ ಉದ್ಘಾಟನೆ ಸಮಾರಂಭಕ್ಕಾಗಿ ಪ್ರಧಾನಿ ಮೋದಿ ಅವರು ಯುಎಇಗೆ ತೆರಳಿದ್ದರು.








