ರಾಜ್ಯದಲ್ಲಿ ಅನ್ ಲಾಕ್ ಬಗ್ಗೆ ಸುಧಾಕರ್ ಹೇಳಿದ್ದೇನು..?
ಬೆಂಗಳೂರು : ಜೂನ್ ಏಳರ ಬಳಿಕ ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಣೆಯೋ ಅಥವಾ ಅನ್ ಲಾಕ್ ಮಾಡಲಾಗುತ್ತದೆಯೋ ಎಂಬ ಚರ್ಚೆಗಳು ಸದ್ಯ ಭಾರಿ ಸದ್ದು ಮಾಡುತ್ತಿವೆ.
ಈ ಮಧ್ಯೆ ಈ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ಇದು ಸಾಂಕ್ರಾಮಿಕ ರೋಗ. ನಾವು ಬಹಳ ಎಚ್ಚರಿಕೆಯಿಂದ ಇರಬೇಕು. ತಜ್ಞರ ವರದಿ ಪರಿಶೀಲನೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಸಾಂಕ್ರಾಮಿಕ ರೋಗ, ನಾವು ಬಹಳ ಎಚ್ಚರಿಕೆಯಿಂದ ಇರಬೇಕು. ತಜ್ಞರ ವರದಿ ಪರಿಶೀಲನೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕು.
ಕೆಲವೇ ಹೊತ್ತಲ್ಲಿ ಲಾಕ್‍ಡೌನ್ ವರದಿ ಸಿಎಂ ಕೈ ಸೇರಲಿದೆ. ತಜ್ಞರು ತಡರಾತ್ರಿಯವರೆಗೂ ಸಭೆ ಮಾಡಿದ್ದಾರೆ. ಹೀಗಾಗಿ ರಿಪೋರ್ಟ್ ಎಲ್ಲಾ ಸಿದ್ಧವಾಗಿದೆ.
ಆ ಬಗ್ಗೆ ಸಿಎಂ ಬಳಿ ಚರ್ಚೆ ಮಾಡುತ್ತೇನೆ. ಸಂಪುಟದಲ್ಲೂ ಕೂಡಾ ಈ ಬಗ್ಗೆ ಚರ್ಚೆಯಾಗಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಇನ್ನು ಸಚಿವರು ಅನ್ ಲಾಕ್ ಬಗ್ಗೆ ಮಾತನಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ನಾವು ವಾಸ್ತವ ವಿಚಾರವನ್ನು ಸಚಿವ ಗಮನಕ್ಕೆ ತರುತ್ತೇನೆ.
ಸಚಿವರಿಗೆ ತಜ್ಞರ ವರದಿ ಗಮನಕ್ಕೆ ಬರದೇ ಇರಬಹುದು. ಹೀಗಾಗಿ ಅವರಿಗೆ ತಜ್ಞರು ವರದಿ ತಿಳಿಸುವ ಕೆಲಸ ಮಾಡುತ್ತೇನೆ ಎಂದರು.
ನಾಯಕತ್ವ ಬದಲಾವಣೆ ವಿಚಾರ ಮಾತನಾಡಿ, ಈ ಸಂದರ್ಭದಲ್ಲಿ ರಾಜಕೀಯ ಮಾತಾಡೋದು ಸರಿಯಲ್ಲ.
ಖುರ್ಚಿ ಖಾಲಿ ಇಲ್ಲದ ಮೇಲೆ ಈ ಸಂಬಂಧ ಮಾತಾಡೋದು ಅಪ್ರಸ್ತುತ. ಸಿಎಂ ಸ್ಥಾನದಲ್ಲಿ ಯಡಿಯೂರಪ್ಪ ಅವರು ಇರೋದ್ರಿಂದ ಇದು ಸರಿಯಾದ ಸಮಯ ಅಲ್ಲ ಎಂದರು.