ಬೆಂಗಳೂರು : ತನಗೆ ಕೈ ಕೊಟ್ಟು ಮತ್ತೊಬ್ಬ ಯುವಕನ ಜೊತೆ ಸುತ್ತಾಡುತ್ತಿದ್ದ ಪ್ರೇಯಸಿಗೆ ಪ್ರಿಯಕರ ಹೆಲ್ಮೆಟ್ ನಿಂದ ಹೊಡೆದು ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಬಿತ್ ಎಂಬ ಯುವಕ ಹಲ್ಲೆ ಮಾಡಿದವ ಎಂದು ಗುರುತಿಸಲಾಗಿದೆ. ಕಳೆದ 4 ವರ್ಷಗಳಿಂದ ಆರೋಪಿ ಬಬಿತ್ ಯುವತಿಯನ್ನ ಪ್ರೀತಿ ಮಾಡುತ್ತಿದ್ದ. ಆದರೆ, ಕೆಲ ದಿನಗಳ ಹಿಂದೆ ಇಬ್ಪರ ಲವ್ ಬ್ರೇಕ್ ಅಪ್ ಆಗಿ ಬೇರೆ ಬೇರೆಯಾಗಿದ್ದರು. ಆದರೆ, ಯವತಿಯ ನೆನಪಲ್ಲೇ ಇದ್ದ ಬಬಿತ್ ಗೆ ಆಕೆಯನ್ನ ಮರೆಯಲು ಸಾಧ್ಯವಾಗಿಲ್ಲ. ಈ ಮಧ್ಯೆ ಯುವತಿ ಇತ್ತ ಬಬಿತ್ ನ ಬಿಟ್ಟು ರಾಹುಲ್ ಎಂಬ ಹುಡುಗನ ಜೊತೆ ಪ್ರೇಮ ಸಲ್ಲಾಪದಲ್ಲಿದ್ದಳು. ಇದರಿಂದ ಕೋಪಗೊಂಡ ಬಬಿತ್ ನೇರವಾಗಿ ರಾಹುಲ್ ಮನೆಗೆ ತೆರಳಿ ಒಮ್ಮೆ ವಾರ್ನ್ ಮಾಡಿ ಗಲಾಟೆ ಮಾಡಿದ್ದಾನೆ.
ಇದನ್ನ ಲೆಕ್ಕಿಸದ ರಾಹುಲ್ ಮತ್ತೆ ಆಕೆಯೊಂದಿಗೆ ಸುತ್ತಾಡಿದ್ದಾನೆ. ಇಬ್ಬರನ್ನ ಒಟ್ಟಿಗೆ ನೋಡಿದ್ದ ಬಬಿತ್ ಪ್ರಿಯತಮೆ ಮೇಲೆ ಮತ್ತಷ್ಟು ಕೋಪಗೊಂಡಿದ್ದ. ನಂತ್ರ ಯುವತಿಯನ್ನ ಕರೆದು ವಾರ್ನ್ ಮಾಡಿದ್ದ, ಮತ್ತೆ ಯುವತಿ ಮಾತು ಕೇಳದೇ ಇರುವ ಕಾರಣ ಎರಡು ಮೂರು ಬಾರಿ ಆಕೆಯ ತಲೆಗೆ ಹೆಲ್ಮೆಟ್ ನಿಂದ ಕೋಪದಲ್ಲಿ ಮನಬಂದಂತೆ ಹಲ್ಲೆ ಮಾಡಿ ಅಲ್ಲಿಂದ ಪರಾರಿ ಆಗಿದ್ದಾನೆ.
ಸದ್ಯ ಹಲ್ಲೆಗೆ ಒಳಗಾದ ಯುವತಿಯನ್ನ ಸಪ್ತಗಿರಿ ಆಸ್ಪತ್ರೆಗೆ ದಾಖಲು ಮಾಡಿದ್ದು,ಯುವತಿಯ ಆರೋಗ್ಯದ ಸ್ಥಿತಿ ಗಂಭೀರವಾಗಿದೆ. ಸೋಲದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ಸದ್ಯ ಇಬ್ಬರು ಹುಡುಗರನ್ನ ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಿದ್ದಾರೆ.