ವಿಜಯಪುರ : ಜೈಲಿಗೆ (Jail) ಹಾಕ್ತೀವಿ ಎಂದು ಎಲ್ಲರಿಗೂ ಧಮ್ಕಿ ಕೊಡೋಕೆ ಇದೇನು ತಾಲಿಬಾನ್ (Taliban) ಅಲ್ಲ, ಕರ್ನಾಟಕ (Karnataka) ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ (MB Patil) ವಿರುದ್ಧ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಕ್ರವರ್ತಿ ಸೂಲಿಬೆಲೆಗೆ (Chakravarti Sulibele) ಸಚಿವ ಎಂಬಿ ಪಾಟೀಲ್ ಎಚ್ಚರಿಕೆ ನೀಡಿರುವ ವಿಚಾರವಾಗಿ ಟ್ವೀಟ್ ಮಾಡಿರುವ ಯತ್ನಾಳ್, ಇದು ತಾಲಿಬಾನ್ ಅಲ್ಲ, ಕರ್ನಾಟಕ. ಯಾರೇ ಮಾತಾಡಿದರೂ ಜೈಲಿಗೆ ಹಾಕುತ್ತೇವೆ ಎಂದು ಹೇಳಲು ಇದು ತಾಲಿಬಾನ್ ಅಲ್ಲ. ಕರ್ನಾಟಕ ಎನ್ನುವುದನ್ನು ಎಂಬಿ ಪಾಟೀಲ್ ಮರೆಯಬಾರದು. ಎಫ್‌ಐಆರ್ ಮಾಡಿಸ್ತೀವಿ, ಜೈಲಿಗೆ ಕಳಿಸ್ತೀವಿ ಪದೇ ಪದೇ ಅನ್ನುವುದಕ್ಕೆ ಇವರೇನು ನ್ಯಾಯಾಧೀಶರಾ? ಎಂದು ಬರೆದುಕೊಂಡಿದ್ದಾರೆ.