ADVERTISEMENT
Wednesday, July 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ರಾಜ್ಯಕ್ಕೆ ಮಾಡಿದ್ದೇನು?

ಉಳಿಯಿತು 10 ಜನರ ಪ್ರಾಣ

Author2 by Author2
July 1, 2024
in Cinema, Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್, ಮನರಂಜನೆ, ಮಾರ್ಜಲ ಮಂಥನ
Share on FacebookShare on TwitterShare on WhatsappShare on Telegram

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಂತೆ ಇಡೀ ಕರ್ನಾಟಕದ ಹೃದಯ ಬಡಿತವೇ ನಿಂತಂತಾಗಿತ್ತು. ಆ ನಂತರ ರಾಜ್ಯದಲ್ಲಿ ಹೃದಯದ ಕಾಳಜಿ ಹೆಚ್ಚಾಗಲು ಆರಂಭವಾಯಿತು. ಹೀಗಾಗಿ ಹೃದಯದ ಕಾಳಜಿಗಾಗಿ ರಾಜ್ಯ ಸರ್ಕಾರವು ಪುನೀತ್ ಹೃದಯ ಜ್ಯೋತಿ ಯೋಜನೆಯನ್ನು ಜಾರಿಗೆ ತಂದಿತು.

ಹಠಾತ್‌ ಹೃದಯಾಘಾತ ತಡೆಯುವುದಕ್ಕಾಗಿ ಈ ಯೋಜನೆ ಜಾರಿಗೊಳಿಸಲಾಯಿತು. ಈ ಯೋಜನೆಯಿಂದಾಗಿ ಹಲವಾರು ಜನರಿಗೆ ಉಪಯೋಗವಾಗಿದೆ. ಪುನೀತ್‌ ರಾಜಕುಮಾರ್‌ ಹೃದಯ ಜ್ಯೋತಿ ಯೋಜನೆಯಡಿ 11 ಸಾವಿರ ಜನರಲ್ಲಿ ಗಂಭೀರವಾಗಿರುವ ಸಮಸ್ಯೆ ಪತ್ತೆಯಾಗಿದ್ದು, ನಾಲ್ಕೇ ತಿಂಗಳಲ್ಲಿ 10 ಜನರ ಬದುಕು ಅರಳಿ ನಿಂತಿದೆ. ಆ ಕುಟುಂಬಸ್ಥರ ಕಣ್ಣಲ್ಲಿ ಕಾಂತಿ ಮೂಡಿದೆ.

Related posts

ವಿದ್ಯಾರ್ಥಿಗಳು ಲಾಠಿ ಏಟು ತಿನ್ನುವಾಗ ಹೋಟೆಲ್ ನಲ್ಲಿ ಬರ್ಗರ್ ಮೆಲ್ಲುತ್ತಿದ್ದ ವಕ್ತಾರ ಉಚ್ಚಾಟನೆ: ವಿಜೇತಾ ದಹಿಯಾ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ಗರಂ

ವಿದ್ಯಾರ್ಥಿಗಳು ಲಾಠಿ ಏಟು ತಿನ್ನುವಾಗ ಹೋಟೆಲ್ ನಲ್ಲಿ ಬರ್ಗರ್ ಮೆಲ್ಲುತ್ತಿದ್ದ ವಕ್ತಾರ ಉಚ್ಚಾಟನೆ: ವಿಜೇತಾ ದಹಿಯಾ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ಗರಂ

July 22, 2026
ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಏಕೆ?; ಸಂಸತ್‌ನಲ್ಲಿ ಚರ್ಚೆಗೆ ವಿರೋಧ ಪಕ್ಷ ಒತ್ತಾಯ

ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಏಕೆ?; ಸಂಸತ್‌ನಲ್ಲಿ ಚರ್ಚೆಗೆ ವಿರೋಧ ಪಕ್ಷ ಒತ್ತಾಯ

July 22, 2026

ಪುನೀತ್‌ ರಾಜಕುಮಾರ್‌ ಹೃದಯ ಜ್ಯೋತಿ ಯೋಜನೆಯಡಿ ಮೊದಲನೇ ಹಂತದಲ್ಲಿ ಹೆಸರಲ್ಲಿ ಹಬ್‌ ಸ್ಪೋಕ್‌ ಮಾದರಿಯನ್ನು ಜಯದೇವ ಹೃದ್ರೋಗ ಸಂಸ್ಥೆಯೊಂದಿಗೆ 45 ಆಸ್ಪತ್ರೆಗಳಲ್ಲಿ ಆರಂಭಿಸಲಾಗಿತ್ತು. ಮೊದಲ ಹಂತದ ಯೋಜನೆಯಲ್ಲಿ ಜೀವ ರಕ್ಷಕವಾಗಿರುವ ಟೆನೆಕ್ಟೆಪ್ಲೇಸ್‌ ಇಂಜೆಕ್ಷನ್‌ ಸಿಕ್ಕಿರಲಿಲ್ಲ. ಈ ಚುಚ್ಚು ಮದ್ದಿನ ಬೆಲೆ 25 ಸಾವಿರ. ಆದರೆ, 2024ರ ಮಾರ್ಚ್ ನಿಂದ ಈ ಚುಚ್ಚು ಮದ್ದು ಲಭ್ಯವಾಯಿತು. ಹೀಗಾಗಿ ಇಲ್ಲಿಯವರೆಗೆ 10 ಜನರಿಗೆ ಚುಚ್ಚು ಮದ್ದು ನೀಡಿ ಪ್ರಾಣ ಉಳಿಸಲಾಗಿದೆ.

ಸರ್ಕಾರವು ಹೃದಯಾಘಾತದಿಂದ ಜನರ ಪ್ರಾಣ ಉಳಿಸುವುದಕ್ಕಾಗಿ ಸಾಕಷ್ಟು ಅನುದಾನ ಮೀಸಲಿಟ್ಟಿದೆ. ಮೊದಲ ಹಂತದಲ್ಲಿ 7 ಕೋಟಿ ರೂ. ಮತ್ತು ಎರಡನೇ ಹಂತದಲ್ಲಿ 25 ಕೋಟಿ ರೂ. ಅನುದಾನ ನೀಡಲಾಗಿದೆ. ಈ ಯೋಜನೆಯಿಂದಾಗಿಯೋ ಏನೋ ಅಥವಾ ಪುನೀತ್ ಅವರ ಸಾವಿನಿಂದ ಯಾರಿಗೂ ಹೃದಯಾಘಾತವಾಗದಿರಲಿ ಎಂಬ ಜನರು ಬಯಸಿದ್ದ ಹಾರೈಕೆಯಿಂದಲೋ ಈಗ ಯೋಜನೆಯಡಿ ಬರುತ್ತಿರುವ ಜನರು ಗುಣಮುಖರಾಗುತ್ತಿದ್ದಾರೆ.
ಹೀಗಾಗಿ ಈ ಯೋಜನೆಯನ್ನು 2025ರ ಡಿಸೆಂಬರ್‌ ಅಂತ್ಯದೊಳಗೆ ಎಲ್ಲಾ ತಾಲೂಕುಗಳಿಗೆ ವಿಸ್ತರಿಸುವ ಗುರಿ ಕೂಡ ಯನ್ನು ಸರ್ಕಾರ ಮುಂದಾಗಿದೆ.

ರಾಜ್ಯದಲ್ಲಿ ಈ ಯೋಜನೆಯನ್ನು ನಾಲ್ಕು ಹಂತದಲ್ಲಿ ವಿಸ್ತರಿಸಲಾಗುತ್ತಿದೆ. 2025-26ನೇ ಸಾಲಿನೊಳಗೆ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಯೋಜನೆ ಅನುಷ್ಠಾನ ಮಾಡಲಾಗುತ್ತದೆ. ಅಷ್ಟೇ ಅಲ್ಲ, ಈ ಹೃದಯ ಜ್ಯೋತಿ ಯೂನಿಟ್‌ನಲ್ಲಿ ಕೆಲಸ ಮಾಡುವ ವೈದ್ಯರು, ದಾದಿಯರು, ಟೆಕ್ನೀಷಿಯನ್‌, ಆಂಬ್ಯುಲೆನ್ಸ್‌ ಚಾಲಕರಿಗೆ ತರಬೇತಿ ನೀಡಲಾಗಿದೆ. ಅಲ್ಲದೆ, ಜಯದೇವ ಹೃದ್ರೋಗ ಆಸ್ಪತ್ರೆ, ಇಲಾಖೆಯಿಂದಲೂ ಆನ್‌ಲೈನ್‌ ಮೂಲಕ ತರಬೇತಿ ನೀಡಲಾಗಿದೆ.
ಹಬ್‌ ಮತ್ತು ಸ್ಪೋಕ್‌ ಮಾದರಿಯಲ್ಲಿ ಈ ಹೃದಯ ಜ್ಯೋತಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಇಲ್ಲಿಯವೆಗೆ 71 ತಾಲೂಕು ಆಸ್ಪತ್ರೆಗಳೂ ಸೇರಿದಂತೆ ಒಟ್ಟು 86 ಸರಕಾರಿ ಆಸ್ಪತ್ರೆಗಳನ್ನು ಸ್ಪೋಕ್‌ ಕೇಂದ್ರಗಳನ್ನಾಗಿ ಹಾಗೂ ಜಯದೇವ ಸೇರಿದಂತೆ 11 ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಹಬ್‌ ಕೇಂದ್ರಗಳನ್ನಾಗಿ ಮಾಡಲಾಗಿದೆ.

ಹಾಗಾದರೆ ಯಾರೂ ಈ ಆಸ್ಪತ್ರೆಗೆ ಸೇರಿ ಯಾವ ರೀತಿ ಟ್ರೀಟ್ಮೆಂಟ್ ತೆಗೆದುಕೊಳ್ಳಬೇಕೆಂದರೆ, ಎದೆನೋವು ಕಾಣಿಸಿಕೊಂಡವರು ಸ್ಪೋಕ್‌ ಕೇಂದ್ರಗಳಿಗೆ ಭೇಟಿ ನೀಡುವ ವೇಳೆ 6 ನಿಮಿಷದೊಳಗೆ ಅವರ ಸ್ಥಿತಿ ಹೇಗಿದೆ ಎಂಬುವುದನ್ನು ಎಐ ತಂತ್ರಜ್ಞಾನದ ಮೂಲಕ ಪತ್ತೆಹಚ್ಚಲಾಗುತ್ತದೆ. ಸಂಸ್ಥೆಯ ಎಐ ತಂತ್ರಜ್ಞಾನದ ಮೂಲಕ ಮೇಲ್ವಿಚಾರಣೆ ನಡೆಸಿ, ಎದೆನೋವು ಕಾಣಿಸಿಕೊಂಡವರಿಗೆ ಇಸಿಜಿ ಪರೀಕ್ಷೆಯಲ್ಲಿ ತೀವ್ರ ಹೃದಯಾಘಾತವಾಗುವ ಮೂನ್ಸೂಚನೆ ಇದ್ದರೆ ತಕ್ಷಣ ಮಾಹಿತಿ ನೀಡಿ, ಚಿಕಿತ್ಸೆಗೆ ನೆರವಾಗುತ್ತಾರೆ. ಈಗಾಗಲೇ ಈ ಯೋಜನೆಯಿಂದಾಗಿ ಲಕ್ಷಾಂತರ ಜನರಿಗೆ ಅನುಕೂಲವಾಗುತ್ತಿದೆ. ಯೋಜನೆ ಆರಂಭಿಸಿದಾಗ ಟೆನೆಕ್ಟೆಪ್ಲೇಸ್‌ ಇಂಜೆಕ್ಷನ್‌ ಲಭ್ಯವಿರಲಿಲ್ಲ. ಇಸಿಜಿ ಮಾಡಿ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತಿತ್ತು. ಚುಚ್ಚುಮದ್ದು ಬಂದ ಬಳಿಕ ರೋಗಿಗಳಿಗೆ ಸಾಕಷ್ಟು ಅನುಕೂಲವಾಗಿದ್ದು, ಹೃದಯಾಘಾತದಿಂದ ಹಲವರು ಪಾರಾಗುತ್ತಿದ್ದಾರೆ. ಕರ್ನಾಟಕ ಹೃದಯಾಘಾತದಿಂದ ಪಾರಾಗಿದೆ. ಕರ್ನಾಟಕದ ಹೃದಯ ಬಡಿತ ನಿಲ್ಲುವುದಿಲ್ಲ. ಕರ್ನಾಟಕ ಆರೋಗ್ಯವಾಗಿದೆ ಎಂದು ರೋಗಿಗಳೇ ಹೇಳುವಂತಾಗಿದೆ. ಇದೇ ವರ್ಷದ ಮಾರ್ಚ್ ದಿಂದ ರಂಭವಾದ 25 ಸಾವಿರ ರೂ. ವೆಚ್ಚ ಚುಚ್ಚು ಮದ್ದು ಇಲ್ಲಿಯವರೆಗೆ 10 ಜನರಿಗೆ ನೀಡಿದ್ದು, ಎಲ್ಲರೂ ಕುಟುಂಬದೊಂದಿಗೆ ಸೌಖ್ಯವಾಗಿ ಜೀವನ ಸಾಗಿಸುತ್ತಿದ್ದಾರೆ.

Tags: What has Puneeth Rajkumar done for Hriday Jyoti Rajya?
ShareTweetSendShare
Join us on:

Related Posts

ವಿದ್ಯಾರ್ಥಿಗಳು ಲಾಠಿ ಏಟು ತಿನ್ನುವಾಗ ಹೋಟೆಲ್ ನಲ್ಲಿ ಬರ್ಗರ್ ಮೆಲ್ಲುತ್ತಿದ್ದ ವಕ್ತಾರ ಉಚ್ಚಾಟನೆ: ವಿಜೇತಾ ದಹಿಯಾ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ಗರಂ

ವಿದ್ಯಾರ್ಥಿಗಳು ಲಾಠಿ ಏಟು ತಿನ್ನುವಾಗ ಹೋಟೆಲ್ ನಲ್ಲಿ ಬರ್ಗರ್ ಮೆಲ್ಲುತ್ತಿದ್ದ ವಕ್ತಾರ ಉಚ್ಚಾಟನೆ: ವಿಜೇತಾ ದಹಿಯಾ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ಗರಂ

by Shwetha
July 22, 2026
0

ನವದೆಹಲಿ: ದೇಶಾದ್ಯಂತ ಸದ್ದು ಮಾಡುತ್ತಿರುವ ನೀಟ್ ಸೇರಿದಂತೆ ವಿವಿಧ ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನಾ ರ‍್ಯಾಲಿಯ...

ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಏಕೆ?; ಸಂಸತ್‌ನಲ್ಲಿ ಚರ್ಚೆಗೆ ವಿರೋಧ ಪಕ್ಷ ಒತ್ತಾಯ

ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಏಕೆ?; ಸಂಸತ್‌ನಲ್ಲಿ ಚರ್ಚೆಗೆ ವಿರೋಧ ಪಕ್ಷ ಒತ್ತಾಯ

by Shwetha
July 22, 2026
0

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷದ ನಾಯಕರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ...

ವಿದ್ಯಾರ್ಥಿಗಳ ಮೇಲೆ ಲಾಠಿ ಬೀಸುವವರು ರಾಕ್ಷಸರು ಸಂಸತ್ತಿನ ಆವರಣದಲ್ಲೇ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಬೆವರಿಳಿಸಿದ ರೇಣುಕಾ ಚೌಧರಿ

ವಿದ್ಯಾರ್ಥಿಗಳ ಮೇಲೆ ಲಾಠಿ ಬೀಸುವವರು ರಾಕ್ಷಸರು ಸಂಸತ್ತಿನ ಆವರಣದಲ್ಲೇ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಬೆವರಿಳಿಸಿದ ರೇಣುಕಾ ಚೌಧರಿ

by Shwetha
July 22, 2026
0

ನವದೆಹಲಿ: ಸಂಸತ್ತಿನ ಆವರಣ ಸೋಮವಾರ ಒಂದು ಹೈವೋಲ್ಟೇಜ್ ಡ್ರಾಮಾಗೆ ಸಾಕ್ಷಿಯಾಯಿತು. ದೇಶದಲ್ಲಿ ಸದ್ದು ಮಾಡುತ್ತಿರುವ ಶಿಕ್ಷಣ ಕ್ಷೇತ್ರದ ಬಿಕ್ಕಟ್ಟು ಮತ್ತು ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯದ ವಿಚಾರವಾಗಿ...

ಪ್ರಶ್ನೆಪತ್ರಿಕೆ ಸೋರಿಕೆ: ಬಿಜೆಪಿ ವಿರುದ್ಧ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ

ಪ್ರಶ್ನೆಪತ್ರಿಕೆ ಸೋರಿಕೆ: ಬಿಜೆಪಿ ವಿರುದ್ಧ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ

by Shwetha
July 22, 2026
0

ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ಕುರಿತು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ...

56 ಇಂಚಿನ ಎದೆ ಎಲ್ಲಿ ಹೋಯಿತು? ಮೋದಿಯವರೇ ಮೊದಲು ನಿಮ್ಮ ವಿಶ್ವಾಸಾರ್ಹತೆ ಸಾಬೀತುಪಡಿಸಿ: ನೀಟ್ ಮತ್ತು ರಾಮಮಂದಿರ ಹಗರಣ ಉಲ್ಲೇಖಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರೌದ್ರಾವತಾರ

56 ಇಂಚಿನ ಎದೆ ಎಲ್ಲಿ ಹೋಯಿತು? ಮೋದಿಯವರೇ ಮೊದಲು ನಿಮ್ಮ ವಿಶ್ವಾಸಾರ್ಹತೆ ಸಾಬೀತುಪಡಿಸಿ: ನೀಟ್ ಮತ್ತು ರಾಮಮಂದಿರ ಹಗರಣ ಉಲ್ಲೇಖಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರೌದ್ರಾವತಾರ

by Shwetha
July 22, 2026
0

ನವದೆಹಲಿ: ದೇಶದಲ್ಲಿ ಸದ್ದು ಮಾಡುತ್ತಿರುವ ನೀಟ್ ಪರೀಕ್ಷಾ ಅಕ್ರಮ ಮತ್ತು ಅಯೋಧ್ಯೆ ರಾಮಮಂದಿರ ದೇಣಿಗೆ ಹಗರಣಗಳ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಎಐಸಿಸಿ ಅಧ್ಯಕ್ಷ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram