ಏನಿದು 2-ಡಿಯೋಕ್ಸಿ-ಡಿ-ಗ್ಲೂಕೋಸ್ ? ಕ್ಲಿನಿಕಲ್ ಪ್ರಯೋಗ ಏನು ಹೇಳಿದೆ ಮತ್ತು ಈ ಔಷಧಿಯನ್ನು ಹೇಗೆ ಬಳಸಲಾಗುತ್ತದೆ

1 min read
clinical trial

ಏನಿದು 2-ಡಿಯೋಕ್ಸಿ-ಡಿ-ಗ್ಲೂಕೋಸ್ ? ಕ್ಲಿನಿಕಲ್ ಪ್ರಯೋಗ ಏನು ಹೇಳಿದೆ ಮತ್ತು ಈ ಔಷಧಿಯನ್ನು ಹೇಗೆ ಬಳಸಲಾಗುತ್ತದೆ

ಕೊರೋನಾ ಎರಡನೇ ಅಲೆಯಿಂದ ತತ್ತರಿಸಿದ ಭಾರತಕ್ಕೆ ಸಂಜೀವಿನಿ ಸಿಕ್ಕಿದೆ. ಡಿಆರ್‌ಡಿಒ ತಯಾರಿಸಿದ ಕೋವಿಡ್ -19 ಔಷಧಿ 2-ಡಿಜಿ ಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ದೆಹಲಿಯಲ್ಲಿ ಬಿಡುಗಡೆ ಮಾಡಿದ್ದಾರೆ. ಕೋವಿಡ್ -19 ಸೋಂಕಿನ ಮಧ್ಯಮ ಮತ್ತು ತೀವ್ರ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳ ಚಿಕಿತ್ಸೆಗಾಗಿ ಭಾರತದ ಡ್ರಗ್ ಕಂಟ್ರೋಲರ್ ಜನರಲ್ ಈ ತಿಂಗಳ ಆರಂಭದಲ್ಲಿ ಅಂದರೆ ಮೇ 1 ರಂದು 2-ಡಿಜಿ ಔಷಧಿಯನ್ನು ಬಳಸಲು ಅನುಮೋದನೆ ನೀಡಿತು
ಇದು ಪುಡಿ ರೂಪದಲ್ಲಿದ್ದು, ಜನರು ಸುಲಭವಾಗಿ ನೀರಿನೊಂದಿಗೆ ಬೆರೆಸಿ ಒಆರ್‌ಎಸ್‌ನಂತೆ ಬಳಸಬಹುದು ಎಂದು ಹೇಳಲಾಗಿದೆ.
ಏನಿದು 2-ಡಿಜಿ ? ಇದು ಹೇಗೆ ಕೆಲಸ ಮಾಡುತ್ತದೆ ? ಕ್ಲಿನಿಕಲ್ ಪ್ರಯೋಗಗಳು ಏನು ಹೇಳಿದೆ ಮತ್ತು ಈ ಔಷಧಿಯನ್ನು ಹೇಗೆ ಬಳಸಲಾಗುತ್ತದೆ ಎಂಬ ಬಗ್ಗೆ ಇಲ್ಲಿದೆ ವರದಿ
2dg clinical trial

2-ಡಿಜಿ ಹೇಗೆ ಕೆಲಸ ಮಾಡುತ್ತದೆ?

ಹೈದರಾಬಾದ್‌ನ ಡಾ. ರೆಡ್ಡಿ ಪ್ರಯೋಗಾಲಯದ ಸಹಯೋಗದೊಂದಿಗೆ ಡಿಆರ್‌ಡಿಒ ಪ್ರಯೋಗಾಲಯವಾದ ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಅಲೈಡ್ ಸೈನ್ಸಸ್ ನಲ್ಲಿ ಈ ಔಷಧಿಯನ್ನು ಅಭಿವೃದ್ಧಿಪಡಿಸಲಾಗಿದೆ

2-ಡಿಯೋಕ್ಸಿ-ಡಿ-ಗ್ಲೂಕೋಸ್ ಅಥವಾ 2-ಡಿಜಿ ಯ ಕ್ಲಿನಿಕಲ್ ಪ್ರಯೋಗಗಳು ಆಸ್ಪತ್ರೆಗೆ ದಾಖಲಾದ ರೋಗಿಗಳ ಆಮ್ಲಜನಕದ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತೋರಿಸಿದೆ. ಅಲ್ಲದೆ, ರೋಗಿಗಳು ಈ ಔಷಧಿ ಸೇವನೆಯಿಂದ ವೇಗವಾಗಿ ಚೇತರಿಸಿಕೊಳ್ಳುತ್ತಾರೆ‌ ಎಂದು ತೋರಿಸಿದೆ.

ಕೊರೊನಾ ವೈರಾಣುಗಳು ದಾಳಿ ಮಾಡಿರುವ ಜೀವಕೋಶಗಳಿಗೆ 2-ಡಿಜಿ ಔಷಧದ ಕಣಗಳು ಲಗ್ಗೆಯಿಡುತ್ತದೆ. ಸಿಂಥೆಸಿಸ್ ಮೂಲಕ ವೈರಸ್‌ನ ಬೆಳವಣಿಗೆಯನ್ನು ತಡೆಯುತ್ತದೆ ಮತ್ತು
ಕೋವಿಡ್ ಸೋಂಕಿತ ಕೋಶಗಳ ಮೇಲೆ ಕಾರ್ಯನಿರ್ವಹಿಸುತ್ತದೆ.
ಸಂಶೋಧಕರ ಪ್ರಕಾರ, ಈ ಹಿಂದೆ ಕ್ಯಾನ್ಸರ್ ಗಡ್ಡೆಯ ಕೋಶಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತಿದ್ದ ಔಷಧವು 2-ಡಿಜಿ ಅಣುವನ್ನು ಹೊಂದಿತ್ತು. ಈ ಔಷಧವು ದೇಹದಲ್ಲಿ ವೈರಲ್ ಬೆಳವಣಿಗೆಯನ್ನು ನಿಲ್ಲಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ. ಯಾವುದೇ ವೈರಸ್ ಬದುಕಲು ಮತ್ತು ಅಭಿವೃದ್ಧಿ ಹೊಂದಲು ಗ್ಲೂಕೋಸ್ ಅಗತ್ಯವಿದೆ. ದೇಹಕ್ಕೆ ಔಷಧಿಯನ್ನು ನೀಡಿದಾಗ, ಅದು ಸ್ವತಃ ವೈರಸ್‌ಗೆ ಅಂಟಿಕೊಳ್ಳುತ್ತದೆ ಮತ್ತು ವೈರಸ್ ಬೆಳವಣಿಗೆಯನ್ನು ನಿಲ್ಲಿಸಿ ದೇಹದಲ್ಲಿ ಮತ್ತಷ್ಟು ಹರಡುವುದನ್ನು ತಡೆಯುತ್ತದೆ. ಇದರಿಂದಾಗಿ ವೈರಸ್ ಉಂಟುಮಾಡುವ ತೊಂದರೆಗಳು ಮತ್ತು ತೀವ್ರತೆಯನ್ನು ನಿಯಂತ್ರಿಸಲು ಕೆಲಸ ಮಾಡುತ್ತದೆ.
ದೇಹದಲ್ಲಿ ಹೆಚ್ಚಿನ ವೈರಲ್ ಹರಡುವಿಕೆ ಇದ್ದಾಗ ಆಮ್ಲಜನಕದ ಅಭಾವ ಹೆಚ್ಚಾಗುತ್ತದೆ ಆದರೆ 2 ಡಿಜಿ ಔಷಧವು ವೈರಲ್ ಬೆಳವಣಿಗೆಯನ್ನು ತಡೆಯುತ್ತದೆ ಮತ್ತು ದೇಹದ ಮತ್ತಷ್ಟು ಆಮ್ಲಜನಕದ ಅಗತ್ಯವನ್ನು ಕಡಿಮೆ ಮಾಡುತ್ತದೆ.

ಔಷಧಿಯನ್ನು ಹೇಗೆ ಬಳಸಲಾಗುತ್ತದೆ

2-ಡಿಜಿ ಔಷಧಿ ಒಂದು ಪ್ಯಾಕೆಟ್‌ನಲ್ಲಿ ಪುಡಿ ರೂಪದಲ್ಲಿ ಬರುತ್ತದೆ, ಅದನ್ನು ನೀರಿನಲ್ಲಿ ಕರಗಿಸಿ ಪಾನೀಯ ಮಾಡಬೇಕು. ಈ ಔಷಧಿಯನ್ನು ಬೆಳಿಗ್ಗೆ ಮತ್ತು ಸಂಜೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ. ಬೆಲೆಗಳ ಬಗ್ಗೆ ಇಲ್ಲಿಯವರೆಗೆ ಏನೂ ತಿಳಿದು ಬಂದಿಲ್ಲ.

ಕ್ಲಿನಿಕಲ್ ಪ್ರಯೋಗಗಳು ಏನು ತೋರಿಸಿದೆ?

ಕ್ಲಿನಿಕಲ್ ಪ್ರಯೋಗದ ಫಲಿತಾಂಶಗಳ ಪ್ರಕಾರ, ಆಸ್ಪತ್ರೆಗೆ ದಾಖಲಾದ ರೋಗಿಗಳು ಈ ಔಷಧಿಯಿಂದ ಶೀಘ್ರವಾಗಿ ಚೇತರಿಸಿಕೊಂಡಿರುವುದನ್ನು ಮತ್ತು ಆಮ್ಲಜನಕದ ಮೇಲಿನ ಅವಲಂಬನೆಯೂ ಕಡಿಮೆಯಾಗಿರುದನ್ನು ತೋರಿಸಿದೆ.

ಕಳೆದ ವರ್ಷದ ಆರಂಭದಲ್ಲಿ ಸಾಂಕ್ರಾಮಿಕ ರೋಗ ಪ್ರಾರಂಭವಾದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಕೊರೋನಾ ಔಷಧಿಗಳನ್ನು ತಯಾರಿಸುವಂತೆ ಮನವಿ ಮಾಡಿದರು. ನಂತರ ಡಿಆರ್‌ಡಿಒ ಈ ಯೋಜನೆಯನ್ನು ಪ್ರಾರಂಭಿಸಿತು.

ಐಎನ್‌ಎಂಎಎಸ್-ಡಿಆರ್‌ಡಿಒ ವಿಜ್ಞಾನಿಗಳು ಹೈದರಾಬಾದ್‌ನ ಸೆಲ್ಯುಲಾರ್ ಮತ್ತು ಆಣ್ವಿಕ ಜೀವಶಾಸ್ತ್ರ ಕೇಂದ್ರದ ಸಹಾಯದಿಂದ ಪ್ರಯೋಗಗಳನ್ನು ನಡೆಸಿದರು ಮತ್ತು ಈ ಅಣುವು SARS-CoV-2 ವೈರಸ್ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ವೈರಲ್ ಬೆಳವಣಿಗೆಯನ್ನು ಪ್ರತಿಬಂಧಿಸುತ್ತದೆ ಎಂದು ತೋರಿಸಿದೆ.

ಡಿಸಿಜಿಐನ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಔಷಧದ ಪರಿಣಾಮ ಮತ್ತು ಸುರಕ್ಷತೆಯನ್ನು ಪರಿಶೀಲಿಸಿದ ನಂತರ, 2020 ರ ಮೇ ನಿಂದ ಅಕ್ಟೋಬರ್ ವರೆಗೆ ಎರಡನೇ ಹಂತದ ಪರೀಕ್ಷೆಯನ್ನು ನಡೆಸಲಾಯಿತು ಮತ್ತು ಕೋವಿಡ್ -19 ರೋಗಿಗಳು ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಸುರಕ್ಷಿತವಾಗಿರಲು ಸಹಾಯ ಮಾಡುತ್ತದೆ ಎಂದು ಅದರಲ್ಲಿ ಕಂಡುಬಂದಿದೆ. ಯಶಸ್ವಿ ಫಲಿತಾಂಶಗಳ ನಂತರ, ಡಿಸಿಜಿಐ ನವೆಂಬರ್ 2020 ರಲ್ಲಿ ಮೂರನೇ ಹಂತದ ಪ್ರಯೋಗವನ್ನು ಅನುಮೋದಿಸಿತು.
ಮೂರನೇ ಹಂತದ ಪ್ರಯೋಗವನ್ನು ಡಿಸೆಂಬರ್ 2020 ಮತ್ತು ಮಾರ್ಚ್ 2021 ರ ನಡುವೆ ದೆಹಲಿ, ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮ ಬಂಗಾಳ, ಗುಜರಾತ್, ರಾಜಸ್ಥಾನ ಸೇರಿದಂತೆ ದೇಶದ 27 ಆಸ್ಪತ್ರೆಗಳ 220 ರೋಗಿಗಳ ಮೇಲೆ ನಡೆಸಲಾಯಿತು. ಫಲಿತಾಂಶಗಳ ಪ್ರಕಾರ, 2-ಡಿಜಿ ಔಷಧವು ರೋಗಲಕ್ಷಣದ ರೋಗಿಗಳಲ್ಲಿ ಉತ್ತಮ ಸುಧಾರಣೆಯನ್ನು ತೋರಿಸಿದೆ ಮತ್ತು ಮೂರನೇ ದಿನದಿಂದ, ಈ ಔಷಧಿಯು ಆಮ್ಲಜನಕದ ಅವಲಂಬನೆಯನ್ನು ಸಂಪೂರ್ಣವಾಗಿ ತೆಗೆದುಹಾಕಿರುವುದನ್ನು ತೋರಿಸಿದೆ.

ಮೇ 1 ರಂದು ಕೋವಿಡ್ ಚಿಕಿತ್ಸೆ ಗೆ 2-ಡಿಜಿ ಔಷಧಿಯನ್ನು ಬಳಸಲು ಭಾರತದ ಡ್ರಗ್ ಕಂಟ್ರೋಲರ್ ಜನರಲ್ ಅನುಮೋದನೆ ನೀಡಿದೆ.
ರಕ್ಷಣಾ ಸಚಿವರು ಸೋಮವಾರ ಈ ಔಷಧಿಯನ್ನು ಬಿಡುಗಡೆ ಮಾಡಿದ್ದು, ಜೂನ್ ಮೊದಲ ವಾರದ ನಂತರ ದೇಶದ ಎಲ್ಲಾ ಆಸ್ಪತ್ರೆಗಳಲ್ಲಿ ಈ ಔಷಧಿ ಲಭ್ಯವಾಗಲಿದೆ. ಕೊರೋನಾ ವೈರಸ್ ಸಾಂಕ್ರಾಮಿಕ ರೋಗದಿಂದ ಭಾರತವು ತತ್ತರಿಸಿರುವ ಸಮಯದಲ್ಲಿ ಮತ್ತು ದೇಶದ ಆರೋಗ್ಯ ಮೂಲಸೌಕರ್ಯವು ತೀವ್ರ ಒತ್ತಡದಲ್ಲಿರುವ ಸಮಯದಲ್ಲಿ ಈ ಔಷಧಿಯನ್ನು ಅನುಮೋದಿಸಲಾಗಿದ್ದು, ರೋಗಿಗಳು ಈ ಔಷಧಿ ಸೇವನೆಯಿಂದ ವೇಗವಾಗಿ ಚೇತರಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿದೆ.
wearing masks

ಎಚ್ಚರಿಕೆ – ದೇಶಾದ್ಯಂತ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ. ನಮ್ಮ ಮತ್ತು ನಮ್ಮ ‌ಕುಟುಂಬದ ಆರೋಗ್ಯ ನಮ್ಮ ‌ಕೈಯಲ್ಲಿದೆ. ಇದು ‌ಸಾಕ್ಷಾಟಿವಿ ಕಳಕಳಿ.

#2DG #clinicaltrial

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd