ಏನಿದು ಪೆಗಾಸಸ್..? ಮೈತ್ರಿ ಸರ್ಕಾರ ಕೆಡವಿತೇ ಕುತಂತ್ರಾಂಶ?

1 min read
Pegasus Saaksha tv

ಏನಿದು ಪೆಗಾಸಸ್..? ಮೈತ್ರಿ ಸರ್ಕಾರ ಕೆಡವಿತೇ ಕುತಂತ್ರಾಂಶ?

ನವದೆಹಲಿ : ದೇಶದಾದ್ಯಂತ ಪೆಗಾಸಸ್ ಪದ ಭಾರಿ ಸದ್ದು ಮಾಡುತ್ತಿದೆ. ರಾಜ್ಯದಲ್ಲೂ ಈ ಬಗ್ಗೆ ಚರ್ಚೆ ಶುರುವಾಗಿದೆ. ಈ ಸಂಬಂಧ ವಿಪಕ್ಷಗಳು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿವೆ. ಹಾಗಾದ್ರೆ ಇದಕ್ಕೆ ಕಾರಣವೇನು..? ಪೆಗಾಸಸ್ ಎಂದರೇನು..?

ಮೊದಲಿಗೆ ಪೆಗಾಸಸ್ ಎಂದರೇನು..? ಅದು ಹೇಗೆ ಕೆಲಸ ಮಾಡುತ್ತೆ ಅಂತ ನೋಡೋದಾದ್ರೆ..

ಪೆಗಾಸಸ್ ಎಂಬುದು ಗೂಢಚರ್ಯೆ ನಡೆಸುವ ಒಂದು ತಂತ್ರಾಂಶ. ಇದನ್ನು ತಯಾರಿಸಿದ್ದು ಮತ್ತು ಅದರ ಲೈಸೆನ್ಸ್ ಹೊಂದಿರುವುದು ಇಸ್ರೇಲ್ ಕಂಪೆನಿಯಾದ ಎನ್ ಎಸ್ ಓ ಗ್ರೂಪ್.

ಎನ್ ಎಸ್ ಓ ಮತ್ತು ಆಂಡ್ರೈಡ್ ಈ ಎರಡೂ ಆಪರೇಟಿಂಗ್ ಸಿಸ್ಟಮ್ ಗಳಲ್ಲಿ ಕೆಲಸ ಮಾಡುವ ಸ್ಮಾರ್ಟ್ ಫೋನ್ ಗಳ ಒಳತೂರಿಕೊಳ್ಳಲು ಇದನ್ನು ಬಳಸಬಹುದು. ಆ ಮೂಲಕ ಗೂಢಚರ್ಯೆಯ ಒಂದು ಸಾಧನವಾಗಿ ಆ ಫೋನ್ ಅನ್ನು ಪರಿವರ್ತಿಸಬಹುದು.

Pegasus Saaksha tv

ಪೆಗಾಸಸ್ ನ ದಾಳಿಯ ವೈಖರಿಯನ್ನು ಝೀರೋ ಕ್ಲಿಕ್ ಅಟ್ಯಾಕ್ ಎನ್ನುತ್ತಾರೆ. ಇಲ್ಲಿ ಬಳಕೆದಾರರು ಯಾವುದೇ ಕ್ರಿಯೆ ನಡೆಸುವ ಅಗತ್ಯ ಇಲ್ಲ. ಒಂದು ಮಿಸ್ಡ್ ವಾಟ್ಸಪ್ ಕರೆಯ ಮೂಲಕವೂ ಈ ತಂತ್ರಾಂಶವು ಮೊಬೈಲ್ ಅನ್ನು ಹ್ಯಾಕ್ ಮಾಡಬಲ್ಲದು. ಇದು ಮೊಬೈಲ್ ಬಳಕೆದಾರರಿಗೆ ಅರಿವೇ ಆಗದಂತೆ ಕಾಲ್ ಲಾಗ್ ಅನ್ನು ವ್ಯತ್ಯಸ್ತಗೊಳಿಸುತ್ತದೆ.

ಒಮ್ಮೆ ಮೊಬೈಲ್ ನಲ್ಲಿ ಈ ತಂತ್ರಾಂಶ ಅನುಸ್ಥಾಪಿತವಾಯಿತು ಎಂದರೆ ಆಮೇಲೆ ಅದು ಮೆಸೇಜು, ಈಮೇಲ್ ಗಳು, ಕ್ಯಾಲೆಂಡರ್ ಗಳು, ಇಂಟರ್ ನೆಟ್ ಮಾಹಿತಿ, ಮತ್ತು ಸ್ಥಳದ ಮಾಹಿತಿ ಎಲ್ಲವನ್ನೂ ಓದಿ, ಸಂಗ್ರಹಿಸಿ ದಾಳಿಕೋರನಿಗೆ ಕಳುಹಿಸುತ್ತದೆ.

ಮೈತ್ರಿ ಸರ್ಕಾರ ಕೆಡವಿತೇ ಕುತಂತ್ರಾಂಶ?

ಹೌದು..! ಪೆಗಾಸಸ್ ಬಗ್ಗೆ ‘ವಾಷಿಂಗ್ಟನ್ ಪೋಸ್ಟ್’, ‘ದಿ ಗಾರ್ಡಿಯನ್’ ಹಾಗೂ ‘ದಿ ವೈರ್’ ವರದಿ ಮಾಡಿದೆ. ಇದರಲ್ಲಿ ಫ್ರಾನ್ಸ್‍ನ ಫಾರ್‍ಬಿಡನ್ ಸ್ಟೋರೀಸ್ ನಡೆಸಿದ ತನಿಖೆಯಿಂದ ಸಿಕ್ಕ ದತ್ತಾಂಶದ ಪ್ರಕಾರ, ಪೆಗಾಸಸ್ ಗೂಢಚರ್ಯೆಗಾಗಿ ಪಟ್ಟಿ ಮಾಡಲಾದ ಫೋನ್ ನಂಬರ್‍ಗಳಲ್ಲಿ, ಆಗ ಉಪಮುಖ್ಯಮಂತ್ರಿಯಾಗಿದ್ದ ಜಿ.ಪರಮೇಶ್ವರ, ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಆಪ್ತರು ಹಾಗೂ ಎಚ್.ಡಿ.ದೇವೇಗೌಡ ಅವರ ಭದ್ರತೆಯ ಹೊಣೆ ಹೊತ್ತಿದ್ದ ಪೊಲೀಸ್ ಸಿಬ್ಬಂದಿಯ ನಂಬರ್ ಗಳಿವೆ ಎಂದು ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಎರಡು ವರ್ಷಗಳ ಹಿಂದೆ, ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಉರುಳಿಸಲು ಪೆಗಾಸಸ್ ಗೂಢಚರ್ಯೆಯ ಕುತಂತ್ರಾಂಶ ಬಳಕೆಯಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Pegasus Saaksha tv

ಆದರೆ, ಕರ್ನಾಟಕದ ರಾಜಕಾರಣಿಗಳು ಹಾಗೂ ಅವರ ಆಪ್ತರ ಫೋನ್‍ಗಳ ಮೇಲೆ ಕಣ್ಗಾವಲು ನಡೆದಿತ್ತೇ ಅಥವಾ ಹ್ಯಾಕ್ ಮಾಡಲು ಪ್ರಯತ್ನಿಸಲಾಗಿತ್ತೇ ಎಂಬುದು ಸ್ಪಷ್ಟವಾಗಿಲ್ಲ ಎಂದೂ ವರದಿ ಮಾಡಿರುವ ‘ದಿ ವೈರ್’ ಪ್ರಕಟಿಸಿದೆ.

ಆದ್ರೆ ಕಾಂಗ್ರೆಸ್-ಜೆಡಿಎಸ್ ನಾಯಕರು ಮಾತ್ರ ರಾಜ್ಯ ಸರ್ಕಾರವನ್ನು ಕೆಡವಲು ಬಿಜೆಪಿ ಹುನ್ನಾರ ನಡೆಸುತ್ತಿರುವುದಾಗಿ ಆರೋಪ ಮಾಡಿದ್ದಾರೆ. ಅಲ್ಲದೆ ಈ ಬಗ್ಗೆ ತನಿಖೆಗೆ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd