ಹೃದಯಾಘಾತ.. ಹೃದಯ ಸ್ತಂಭನ ವ್ಯತ್ಯಾಸ ಏನು..?

1 min read
Saakshatv health tips Heart Attack Symptoms before the attack

ಹೃದಯಾಘಾತ.. ಹೃದಯ ಸ್ತಂಭನ ವ್ಯತ್ಯಾಸ ಏನು..?

ಬೆಂಗಳೂರು : ಹೃದಯ ಸ್ತಂಭನದಿಂದ ಶುಕ್ರವಾರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿಧನರಾಗಿದ್ದಾರೆ. ಇಂದು ಅವರ ಅಂತ್ಯಕ್ರಿಯೆಯೂ ನಡೆದಿದೆ. ಆದ್ರೆ ಅಪ್ಪು ಇನ್ನಿಲ್ಲ ಅನ್ನೋ ಸುದ್ದಿಯನ್ನ ಅರಗಿಸಿಕೊಳ್ಳಲು ಮಾತ್ರ ಈ ಕ್ಷಣಕ್ಕು ಆಗುತ್ತಿಲ್ಲ.

ಈ ಮಧ್ಯೆ ಯಾವಾಗಲೂ ಲವಲವಿಕೆಯಿಂದ ವ್ಯಾಯಾಮ ಮಾಡಿಕೊಂಡು ಫಿಟ್ ಆಗಿದ್ದ ಪುನೀತ್ ಗೆ ಹೃದಯ ಸ್ತಂಭನವಾಗಿದ್ದಾದರೂ ಹೇಗೆ..? ಹೃದಯ ಸ್ತಂಭನ ಎಂದರೇನು..? ಹೃದಯಾಘಾತ, ಹೃದಯ ಸ್ತಂಬನಕ್ಕಿರುವ ವ್ಯತ್ಯಾಸವೇನು..? ಎಂಬ ಬಗ್ಗೆ ಇದೀಗ ಎಲ್ಲರಲ್ಲೂ ಕುತೂಹಲ ಮೂಡಿದೆ.

ಹೃದಯಾಘಾತ

ಹೃದಯಕ್ಕೆ ರಕ್ತ ಸಂಚಲನೆ ಆಗದಂತೆ ರಕ್ತನಾಳಗಳು ಬ್ಲಾಕ್ ಆಗುವುದು ಹಾಗೂ ಇದರಿಂದ ಅಭಿಧಮನಿ, ಅಪಧಮನಿಗಳಲ್ಲಿ ಅಡಚಣೆ ಉಂಟಾಗಿ ಹೃದಯ ಸ್ನಾಯು ಭಾಗಗಳು ನಿಷ್ಕ್ರಿಯವಾಗಲು ಪ್ರಾರಂಭಿಸುವುದನ್ನು ಹಾರ್ಟ್ ಅಟ್ಯಾಕ್ ಎನ್ನುತ್ತಾರೆ. ಇದು ಎದೆನೋವು, ಎಡಭಾಗದ ಸ್ನಾಯುಗಳ ನೋವು, ವಿಪರೀತ ಬೆವರುವುದು ಸೇರಿದಂತೆ ಕೆಲವೊಂದು ಮುನ್ಸೂಚನೆಗಳನ್ನು ನೀಡುತ್ತದೆ.

cardiac arrest saaksha tv

ಹೃದಯ ಸ್ತಂಭನ 

ಯಾವುದೇ ಮುನ್ಸೂಚನೆ ಇಲ್ಲದೇ ಆರೋಗ್ಯವಂತ ವ್ಯಕ್ತಿಯಲ್ಲೂ ಏಕಾಏಕಿ ಹೃದಯ ಬಡಿತ ಸ್ಥಗಿತಗೊಳ್ಳುವುದೇ ಹೃದಯ ಸ್ತಂಭನ. ಇದಕ್ಕೆ ಹೃದಯ ಸಮಸ್ಯೆಗಳ ಹಿಸ್ಟರಿಯೂ ಕಾರಣವಾಗಿರಬಹುದು, ಪ್ರತಿ ಮೂರರಲ್ಲಿ ಒಂದು ಪ್ರಕರಣದಲ್ಲಿ ಯಾವುದೇ ಮುನ್ಸೂಚನೆ ಇಲ್ಲದೇ ಏಕಾಏಕಿ ಹೃದಯ ಸ್ತಂಭನ ಉಂಟಾಗುತ್ತದೆ. ಇದು ವ್ಯಕ್ತಿಯ ಅಥಾಟ್ ಮರಣಕ್ಕೆ ಕಾರಣವಾಗುತ್ತದೆ. ಹೃದಯ ಸ್ತಂಭನವಾದಾಗ ಚಿಕಿತ್ಸೆ ನೀಡಿದರೂ ವ್ಯಕ್ತಿ ಬದುಕುವುದು ಕಷ್ಟಕರವಾಗಿರುತ್ತದೆ. ಹೃದಯ ಸ್ತಂಭನ ಅನುವಂಶಿಕ ಕಾರಣಗಳಿಂದಲೂ ಆಗಬಹುದು. ಇದನ್ನು ಸಡನ್ ಕಿಲ್ಲರ್ ಎಂದು ಕೂಡ ಕರೆಯಲಾಗುತ್ತದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd