ದೇಶದಲ್ಲಿ ಇಂದು ಪೆಟ್ರೊಲ್ ಡೀಸೆಲ್ ಬೆಲೆ ಎಷ್ಟಿದೆ?
ನವದೆಹಲಿ: ಕಳೆದ ಕೆಲ ದಿನಗಳಿಂದ ಪ್ರೆಟ್ರೋಲ್ (Petrol) , ಡೀಸೆಲ್ (Diesel) ಬೆಲೆ ಏರಿಕೆಯಾಗಿದ್ದು, ಇದೀಗ ಪ್ರೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಗೆ 111.09 ರೂ ಹಾಗೂ ಲೇಟರ್ ಡೀಸೆಲ್ ದರ 94.79 ರೂ ಇದೆ. ಇನ್ನೂ ಕೇರಳದ ತಿರುವನಂತಪುರದಲ್ಲಿ ಲೀಟರ್ ಪೆಟ್ರೋಲ್ ಗೆ 116.92 ಇದ್ದು. ಲೀಟರ್ ಡೀಸೆಲ್ ಬೆಲೆ 103.69 ರೂ ಗೆ ಮಾರಾಟವಾಗುತ್ತಿದೆ.
ಹಾಗೇ ಹೈದರಾಬಾದ್ ನಲ್ಲಿ ಲೀಟರ್ ಪೆಟ್ರೋಲ್ ಗೆ 119.49 ರೂ, ಲೀಟರ್ ಡೀಸೆಲ್ ಗೆ 105.49ರೂ ನಿಗದಿಯಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 105.41 ದ್ದು, ಲೀಟರ್ ಡೀಸೆಲ್ ಬೆಲೆ 96.67 ಇದೆ. ಚನ್ನೈನಲ್ಲಿ ಲೀಟರ್ ಗೆ 110.85 ರೂ, ಲೀಟರ್ ಡೀಸೆಲ್ ದರ 100.94 ರೂಪಾಯಿ ಇದ್ದು, ಅದೇ ರೀತಿಯಾಗಿ ಕೊಲ್ಕತ್ತಾದಲ್ಲಿ ಪೆಟ್ರೋಲ್ ಲೀ 115.12 ರೂ. ಡೀಸೆಲ್ ಬೆಲೆ ಲೀ 99.83 ರೂ ಆಗಿದೆ.
ಇನ್ನೂ ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ 120.51 ರೂ, ಡೀಸೆಲ್ 104.77 ರೂ ಗೆ ಮಾರಾಟವಾಗುತ್ತಿದೆ.