`ರಾರಾ’ಜಿಸಿದ ಮುನಿ`ರತ್ನ’… ಹ್ಯಾಟ್ರಿಕ್ ಗೆಲುವಿಗೆ ಕಾರಣಗಳೇನು..?
ಬೆಂಗಳೂರು : ರಾಜರಾಜೇಶ್ವರಿ ನಗರ ಮಿನಿ ಕುರುಕ್ಷೇತ್ರದಲ್ಲಿ ಕೇಸರಿ ಪಡೆಯ ಮುನಿರತ್ನ ಜಯಭೇರಿ ಬಾರಿಸಿದ್ದಾರೆ. ಭಾರಿ ಜಿದ್ದಾಜಿದ್ದಿನಿಂದ ಕೂಡಿದ್ದ ಈ ರಣಕಣದಲ್ಲಿ ರಾರಾ ಕ್ಷೇತ್ರದ ಜನರು ಮುನಿರತ್ನ ಅವರ ಕೈ ಹಿಡಿದಿದ್ದಾರೆ. ಮತ ಎಣಿಕೆಯ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡ ಮುನಿರತ್ನ ಯಾವುದೇ ಹಂತದಲ್ಲೂ ಹಿನ್ನಡೆ ಅನುಭವಿಸಲೇ ಇಲ್ಲ..
ಪ್ರತಿ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಳ್ಳುತ್ತ ಸಾಗಿದ ಮುನಿರತ್ನ 1,25,734 ಮತಗಳನ್ನು ಪಡೆದು ಬರೋಬ್ಬರಿ 57,936 ಮತಗಳ ಭಾರಿ ಅಂತರದ ಗೆಲುವು ಸಾಧಿಸಿದ್ದಾರೆ. ಆ ಮೂಲಕ ರಾಜರಾಜೇಶ್ವರಿ ನಗರದಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದಾರೆ.
ಹಾಗಾದ್ರೆ ಮುನಿರತ್ನ ಅವರ ಗೆಲುವಿಗೆ ಕಾರಣವಾದ ಅಂಶಗಳೇನು… ಎಂಬುದನ್ನು ನೋಡೊದಾದ್ರೆ…
ಹೆಣ್ಣು ಮಗಳಿಗೆ ಕೆಟ್ಟದಾಗಿ ಬೈದಿಲ್ಲ, ಬೈಯೋದೂ ಇಲ್ಲ : ಮುನಿರತ್ನ
ಆರ್ ಆರ್ ನಗರದಲ್ಲಿ ಮುನಿರತ್ನ ತಮ್ಮದೇ ಆದ ವರ್ಚಸ್ಸು ಹೊಂದಿದ್ದಾರೆ. ಅಧಿಕಾರ ಇರಲಿ, ಇಲ್ಲದಿರಲ್ಲಿ ಮುನಿರತ್ನ ಜನರ ಬಂಧುವಾಗಿ ಕ್ಷೇತ್ರದಲ್ಲಿ ಕೆಲಸ ಮಾಡಿ ಜನರಿಗೆ ಹತ್ತಿರವಾಗಿದ್ದಾರೆ.
ಮುನಿರತ್ನ ಈ ಹಿಂದೆ ಆರ್ ಆರ್ ಕ್ಷೇತ್ರದಲ್ಲಿ ಶಾಸಕರಾಗಿ ಹಲವು ಜನಪರ ಕಾರ್ಯಗಳನ್ನು ಮಾಡಿದ್ದಾರೆ. ಇದೇ ಕಾರಣಕ್ಕೆ ಈ ಬಾರಿಯೂ ಜನ ಅವರ ಕೈ ಹಿಡಿದಿದ್ದಾರೆ. ಇದಲ್ಲದೆ ಮುನಿರತ್ನ ಅವರು ಎಂದೂ ಕ್ಷೇತ್ರರಿಂದ ದೂರ ಉಳಿದುಕೊಂಡಿಲ್ಲ. ಜನರ ಕಷ್ಟಕ್ಕೆ ಶೀಘ್ರವಾಗಿ ಸ್ಪಂದಿಸುತ್ತಾರೆ. ಅಲ್ಲದೆ ಜನರಿಗೆ ಸುಲಭವಾಗಿ ಸಿಗುತ್ತಾರೆ.
ಕೊರೊನಾ ಸಂಕಷ್ಟದಲ್ಲಿ ಜನರ ಪರ ನಿಂತಿದ್ದು ಕೂಡ ಮುನಿರತ್ನರ ಈ ಅಭೂತಪೂರ್ವ ಗೆಲುವಿಗೆ ಕಾರಣ. ಕೊರೊನಾದಂತಹ ಕಷ್ಟ ಕಾಲದಲ್ಲಿ ಸಾಕಷ್ಟು ಜನಪ್ರತಿನಿಧಿಗಳು ತಮ್ಮ ಕ್ಷೇತ್ರಗಳತ್ತ ಮುಖ ಮಾಡಿಲ್ಲ. ಆದ್ರೆ ಮುನಿರತ್ನ ಕೊರೊನಾ ಸಂಕಷ್ಟದಲ್ಲೂ ಕ್ಷೇತ್ರದ ಜನರಿಗೆ ಆಸರೆಯಾದ್ರು. ಆಹಾರ ಕಿಟ್, ಆರ್ಥಿಕ ಸಹಾಯ ಸೇರಿದಂತೆ ಹಲವಾರು ಕೆಲಸಗಳನ್ನು ಮಾಡಿದ್ರು.
ಇದಲ್ಲದೇ ಚುನಾವಣೆಯಲ್ಲಿ ಬಿಜೆಪಿ ನಾಯಕರ ಶ್ರಮ, ಸಂಘಟಿತ ಪ್ರಚಾರ, ನಟ ದರ್ಶನ್ ರ ರೋಡ್ ಶೋ ಮುನಿರತ್ನ ಅವರ ಈ ಗೆಲುವಿಗೆ ಮೆಟ್ಟಿಲುಗಳಾಗಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel