ಚಳಿಗಾಲದಲ್ಲಿ ದಟ್ಟವಾದ ಮಂಜು ದೇಶದ ಹಲವೆಡೆಗಳಲ್ಲಿ ಸಂಚಾರ ವ್ಯವಸ್ಥೆಗೆ ದೊಡ್ಡ ಅಡಚಣೆಯನ್ನು ಉಂಟುಮಾಡುತ್ತದೆ. ವಿಶೇಷವಾಗಿ, ಉತ್ತರ ಭಾರತದ ರೈಲ್ವೆ ಜಾಲದಲ್ಲಿ ಮಂಜಿನ ಪರಿಣಾಮವೇ ಹೆಚ್ಚು. ಉತ್ತರ ರೈಲ್ವೆ ವಲಯ, ದೆಹಲಿ, ಲಕ್ಕನೌ ಮತ್ತು ಮೊರಾದಾಬಾದ್ ಪ್ರದೇಶಗಳು ಈ ಅಡಚಣೆಯಿಂದ ಹೆಚ್ಚು ಬಾಧಿತವಾಗುತ್ತವೆ.ಮತ್ತು ಆಗಿವೆ ಕೂಡ
ಪರಿಣಾಮಗಳು:
1. ರೈಲು ರದ್ದು: ದಟ್ಟವಾದ ಮಂಜು ಸಾರಿಗೆಗೆ ಅಪಾಯಕಾರಿಯಾಗಿದೆ, ದಟ್ಟವಾದ ಮಂಜಿನ ಪರಿಣಾಮ ದೃಶ್ಯತೆಯ ಕೊರತೆಯಿಂದ ಅಪಘಾತ ಸಂಭವಿಸಬಹುದು. ಇದನ್ನು ತಡೆಯಲು 30ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಲಾಗಿದೆ.
2. ಮಾರ್ಗ ಬದಲಾವಣೆ: ಇತರ ಕೆಲವು ರೈಲುಗಳು ದಟ್ಟ ಮಂಜಿನ ಪ್ರದೇಶಗಳನ್ನು ತಪ್ಪಿಸಲು ಬದಲಿಯಾದ ಮಾರ್ಗಗಳಲ್ಲಿ ಸಂಚರಿಸುತ್ತಿವೆ.
ಸಲಹೆಗಳು
ಪ್ರಯಾಣಿಕರು ರೈಲುಗಳ ಸ್ಥಿತಿಗತಿಗಳ ಮತ್ತು ಸಮಯದ ಬಗ್ಗೆ NTES (National Train Enquiry System) ಅಥವಾ IRCTC ಆ್ಯಪ್ ಬಳಸಿ ಮಾಹಿತಿ ಪಡೆಯುವುದು ಉತ್ತಮ.
ಮಧ್ಯರಾತ್ರಿ ಅಥವಾ ಪ್ರಾತಃಕಾಲದ ರೈಲುಗಳಲ್ಲಿ ಹೆಚ್ಚು ಮಂಜು ಇರುವುದರಿಂದ, ಪ್ರಯಾಣ ಮಾಡಲು ಬೇರೆ ಆಯ್ಕೆಗಳು ಹುಡುಕುವುದು ಒಳಿತು.