ಟಿ20 ವಿಶ್ವಕಪ್ (T0 World Cup 2024) ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಈಗತಾನೇ ಐಪಿಎಲ್ ಮುಗಿಸಿರುವ ಭಾರತ ತಂಡ ಕೂಡ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡದಲ್ಲಿದೆ.
ಮುಂದಿನ ತಿಂಗಳಿನಿಂದ ಪಂದ್ಯಗಳು ಆರಂಭವಾಗಲಿವೆ. ಜೂನ್ 2 ರಿಂದ ಪ್ರಾರಂಭವಾಗುವ ವಿಶ್ವಕಪ್‌ಗೂ ಮೊದಲು ಹಲವು ತಂಡಗಳು ಅಭ್ಯಾಸ ಪಂದ್ಯಗಳು ನಡೆಯುತ್ತವೆ. ಭಾರತ ತಂಡ ಒಂದೇ ಒಂದು ಅಭ್ಯಾಸ ಪಂದ್ಯ ಆಡಲಿದೆ. ಭಾರತ ತಂಡ ಜೂನ್ 1 ರಂದು ಬಾಂಗ್ಲಾದೇಶ ವಿರುದ್ಧ (IND vs BAN) ಅಭ್ಯಾಸ ಪಂದ್ಯವನ್ನು ಆಡಲಿದೆ. ನಂತರ ಲೀಗ್ ಪಂದ್ಯಗಳು ಆರಂಭವಾಗಲಿವೆ.
ಟಿ20 ವಿಶ್ವಕಪ್ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನ ಮೊಬೈಲ್ ಅಪ್ಲಿಕೇಶನ್ ನಲ್ಲಿ ಉಚಿತವಾಗಿ ವೀಕ್ಷಿಸಬಹುದು.
ಭಾರತ ತಂಡವು ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಕೆನಡಾ, ಐರ್ಲೆಂಡ್, ಪಾಕಿಸ್ತಾನ್, ಅಮೆರಿಕ ತಂಡಗಳು ಸ್ಥಾನ ಪಡೆದಿವೆ. ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಐರ್ಲೆಂಡ್ ವಿರುದ್ಧ ಆಡಲಿದೆ. ಈ ಪಂದ್ಯ ಜೂನ್ 5 ರಂದು ರಾತ್ರಿ 8ಕ್ಕೆ ನಡೆಯಲಿದೆ. ಜೂನ್ 8 ರಂದು ಭಾರತ ಮತ್ತು ಪಾಕ್ ಮಧ್ಯೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಜೂನ್ 12 ರಂದು ಯುಎಸ್ಎ ಮತ್ತು ಜೂನ್ 15 ರಂದು ಕೆನಡಾ ವಿರುದ್ಧ ಪಂದ್ಯಗಳು ನಡೆಯಲಿವೆ.