ಬೀದರ್ : ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಯತ್ತಿದೆ. ಇದನ್ನು ನಿಯಂತ್ರಿಸಬೇಕಾದ ಆಡಳಿತ ಸರ್ಕಾರ ಆಂತರಿಕ ಜಗಳದಲ್ಲಿ ತಲ್ಲೀನವಾಗಿದೆ. ಇದಕ್ಕೆ ವಿರೋಧ ಪಕ್ಷ ಕಾಂಗ್ರೆಸ್ ಸಹ ಇದೆ ಮಾದರಿಯ ಒಳ ಜಗಳಗಳಲ್ಲಿ ಬ್ಯೂಸಿ ಆಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕೆಪಿಸಿಸಿ ಅಧ್ಯಕ್ಷ ಕಾರ್ಯಾಧ್ಯಕ್ಷರ ಪದಗ್ರಹಣಕ್ಕೂ ಮುನ್ನ ಅಸಮಾಧಾನ ಸ್ಫೋಟವಾಗಿದೆ.
ಇಂದು ಬೀದರ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆದಿತ್ತು. ಸಭೆಯಲ್ಲಿ ಮಾತನಾಡಿದ ಬಸವಕಲ್ಯಾಣ ಶಾಸಕ ಬಿ.ನಾರಾಯಣ್,ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಮ್ಮ ಕೈಗೆ ಸಿಗಾಂಗಿಲ್ಲ .ಅವರ ಎದುರು ನಿಂತರು ನಮ್ಮನ ನೊಡುವುದಿಲ್ಲಾ. ಮಾಜಿ ಮಂತ್ರಿಗಳಾದ ರಾಜಶೇಖರ ಪಾಟೀಲ್,ರಹೀಂ ಖಾನ್ ಹಾಗೂ ಕೆಪಿಸಿಸಿ ಕಾರ್ಯಾದ್ಯಕ್ಷ ಖಂಡ್ರೆ ವಿರುದ್ದ ಕೂಡ ಅಸಮಾಧಾನ ಹೊರ ಹಾಕಿದ್ದಾರೆ.
ಇದೆ ವೇಳೆ ಮಾತು ಮುಂದುವರೆಸಿದ ಅವರು, ಯಾವ ಸೂ.ಮಗನು ನಮ್ಮನು ಖರಿದಿ ಮಾಡೊಕಾಗಲ್ಲಾ ಎನ್ನುವ ಮೂಲಕ ತುಂಬಿದ ಸಭೆಯಲ್ಲಿ ಅವಾಚ್ಯಶಬ್ದಗಳಿಂದ ನಿಂದಿಸಿದ್ದಾರೆ.








