ಪಂಜಾಬ್ ಗದ್ದುಗೆ ಏರಲು ಆಪ್ ಹೆಣೆದಿರುವ ತಂತ್ರವಾದರು ಏನು? – Saaksha Tv
ಪಂಜಾಬ್ : ಪಂಚರಾಜ್ಯಗಳಲ್ಲಿ (ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ, ಮಣಿಪುರ) ರಾಜ್ಯಗಳಲ್ಲಿ ಮೂರು ತಿಂಗಳ ಕಾಲ ಬರಪೂರ ಚುನಾವಣೆಯ ಪ್ರಚಾರದ ನಂತರ ಮತದಾನ ನಡೆದು ಗುರುವಾರ 10 ರಂದು ಪಂಚರಾಜ್ಯಗಳಲ್ಲಿ ಫಲಿತಾಂಶ ಪ್ರಕಟಗೊಂಡಿತು. ಈ ಫಲಿತಾಂಶದಲ್ಲಿ 4 ರಲ್ಲಿ ಬಿಜೆಪಿ ಮತ್ತು 1 ರಲ್ಲಿ ಆಮ್ ಆದ್ಮಿ ಪಾರ್ಟಿ ಜಯಗಳಿಸಿತು.
ಉತ್ತರಪ್ರದೇಶ, ಉತ್ತರಾಖಂಡ, ಗೋವಾ, ಮಣಿಪುರ ದಲ್ಲಿ ಬಿಜೆಪಿ ಜಯಗಳಿಸಿದರೆ, ಪಂಜಾಬ್ ನಲ್ಲಿ ಆಪ್ 92 ಕ್ಷೇತ್ರಗಳಲ್ಲಿ ಗೆಲವು ಸಾಧಿಸುವ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಪಾದಾರ್ಪಣೆ ಮಾಡಿತು. ಕೇವಲ ದೆಹಲಿಗೆ ಮಾತ್ರ ಸೀಮಿತವಾಗಿದ್ದ ಆಪ್ ಪಂಜಾಬ್ ಇಷ್ಟು ದೊಡ್ಡ ಮಟ್ಟದಲ್ಲಿ ಗೆಲವು ಸಾಧಿಸಲು ಕಾರಣವೇನು? ಚುನಾವಣಾ ರ್ಯಾಲಿಯಲ್ಲಿ ಯಾವ ಸ್ಟ್ಯಾಟರ್ಜಿ ವರ್ಕ್ ಆಯಿತು? ಆಪ್ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರ ಯಾವ ಐಡಿಯಾ ವರ್ಕ್ ಆಯಿತು ನೋಡೊಣಾ.
ಪಂಜಾಬ್ ಚುನಾವಣೆಕಿಂತ ಮುಂಚೆ ಸ್ವಲ್ಪ ಹಿಂದೆ ಹೋಗೋಣಾ ಅದು 7-8 ವರ್ಷಗಳ ಹಿಂದ 2014ರ ಲೋಕಸಭಾ ಚುನಾವಣಾ ಸಮಯ, ಆಗ ಗುಜರಾತ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಯಿತು. ಯಾವಾಗ ಮೋದಿ ಪ್ರಧಾನಿ ಅಭ್ಯರ್ಥಿ ಅಂತ ಬಿಜೆಪಿ ಘೋಷಣೆ ಮಾಡಿತು ಆಗ ದೇಶದ ತುಂಬೆಲ್ಲ ಬಿಜಪಿ ಒಂದೇ ಘೋಷ ವಾಖ್ಯದೊಂದಿಗೆ ಚುನಾವಣಾ ಪ್ರಚಾರ ಮಾಡಲು ಶುರು ಹಚ್ಚಿಕೊಂಡಿತು. ಅದು “ಗುಜರಾತ್ ಮೊಡಲ್” ಈ ಒಂದೇ ಸ್ಲೋಗನ್ ನಿಂದ ಮೋದಿಯವರು ಪ್ರಧಾನಿಯಾಗಿದ್ದು ಆಯಿತು ಅದು ಇತಿಹಾಸ.
ಇದೇ ಸ್ಟ್ಯಾಟರ್ಜಿಯನ್ನು ಅರವಿಂದ ಕೇಜ್ರಿವಾಲ್ ಪಂಜಾಬ್ ನಲ್ಲಿ ಉಪಯೋಗಿದ್ದಾರೆ. ಅದು ದೆಹಲಿ ಮೊಡಲ್. ಏನಿದು ದೆಹಲಿ ಮೊಡಲ್ ಅಂತಹ ಮಹತ್ತ ಕಾರ್ಯಗಳನ್ನು ಕೇಜ್ರಿವಾಲ್ ದೆಹಲಿಯಲ್ಲಿ ಮಾಡಿದ್ದಾದರು ಏನು. ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ಅವರು ತಮ್ಮ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು ಮುಖ್ಯವಾಗಿ ಶಿಕ್ಷಣ, ನೀರು ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ. ಈ ಮೂರು ಕ್ಷೇತ್ರಗಳಲ್ಲಿ ಅನೇಕ ಸುಧಾರಣೆಗಳನ್ನು ಮಾಡುವ ಮುಖಾಂತರ ಜನಮನ್ನಣೆ ಪಡೆದರು. ಇದೇ ಅವರ ಪಕ್ಷದ ಅಜೆಂಡ ಕೂಡಾ ಆಗಿತ್ತು.
ಕೇಜ್ರಿವಾಲ್ ತಮ್ಮ ಪ್ರತಿ ಬಜೆಟ್ ನಲ್ಲು ಶಿಕ್ಷಣಕ್ಕಾಗಿ ಗರಿಷ್ಠ ಪಾಲನ್ನು ನೀಡುತ್ತಾರೆ. ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಿಗೆ ವಿಶ್ವ ದರ್ಜೆಯ ಮೂಲಸೌಕರ್ಯ ಮತ್ತು 20,000 ಹೊಸ ತರಗತಿ ಕೊಠಡಿಗಳನ್ನು ನಿರ್ಮಿಸಿದ್ದಾರೆ. ವಿದ್ಯಾರ್ಥಿಗಳಿಗೆ ಹೊಸ ಕೌಶಲ್ಯಗಳನ್ನು ಕಲಿಸಲು ಹೊಸ ಪಠ್ಯಕ್ರಮಗಳನ್ನು ಪ್ರಾರಂಭಿಸಿದ್ದಾರೆ. ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಇದರಿಂದ ಸಾಕಷ್ಟು ಮಕ್ಕಳು ಖಾಸಗಿ ಶಾಲೆ ತೊರೆದು ಸರಕಾರಿ ಶಾಲೆಗೆ ದಾಖಲಿಸಿಕೊಂಡಿದ್ದಾರೆ.
ಆರೋಗ್ಯ ಕ್ಷೇತ್ರದಲ್ಲಿ ಪ್ರತಿ ನಗರಗಳಲ್ಲಿ ಮೊಹಲ್ಲಾ ಕ್ಲಿನಿಕ್‌ಗಳು, ಪಾಲಿಕ್ಲಿನಿಕ್‌ಗಳು ಮತ್ತು ಸರ್ಕಾರಿ ಆಸ್ಪತ್ರೆಗಳನ್ನು ಒಳಗೊಂಡ ಮೂರು ಹಂತದ ಆರೋಗ್ಯ ಭದ್ರತಾ ವಲಯವನ್ನು ನಿರ್ಮಿಸಿದ್ದಾರೆ.
ದೆಹಲಿ ಸರ್ಕಾರವು ‘ಲೈಫ್‌ಲೈನ್ ನೀರು ಸರಬರಾಜು’ — ಪ್ರತಿ ಮನೆಗೆ 20 ಕಿಲೋ ಲೀಟರ್‌ಗಳನ್ನು ಉಚಿತವಾಗಿ ನೀಡುತ್ತಿದೆ. ಹಾಗೂ 700 ಕ್ಕೂ ಹೆಚ್ಚು ಅನಧಿಕೃತ ಕಾಲೋನಿಗಳಲ್ಲಿ ಒಳಚರಂಡಿ ವ್ಯವಸ್ಥೆ ಮತ್ತು 1600 ಇತರ ಕಾಲೋನಿಗಳಿಗೆ ನೀರಿನ ಸಂಪರ್ಕವನ್ನು ಒದಗಿಸಿದೆ. ಇದೇ ರೀತಿಯಾಗಿ ಯಮುನಾ ಶುದ್ಧೀಕರಣ, ಉಚಿತ ವಿದ್ಯುತ್ ನೀಡಲಾಗಿದೆ. ಹೀಗೆ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ.
ಹಾಗೇ ಆಮ್ ಆದ್ಮಿ ಪಾರ್ಟಿಯು “ಬಾಬಾಸಾಹೇಬ್ ಡಾ ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರ ವಿಜಾರಗಳನ್ನು ಮುಂದಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ. ಇದೇ ಯೋಜನೆಗಳನ್ನು ಪಂಜಾಬ್ ನಲ್ಲಿ ಅನುಷ್ಟಾನಕ್ಕೆ ತರಲು ಮುಂದಾಗಿದ್ದು, ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ಈ ಯೋಜನೆಗಳನ್ನು ಹೇಳಿದೆ. ಅಲ್ಲದೇ ಕೃಷಿ ಮಸೂದೆ ಅಂಗಿಕಾರದ ವೀರೋಧದ ಹೋರಾಟದಲ್ಲು ರೈತರ ಪರವಾಗಿ ಕೈ ಜೋಡಿಸಿದೆ.
ಈ ಎಲ್ಲ ಕಾರಣಗಳಿಂದ ಈ ಬಾರಿಯ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಅಭೂತ ಪೂರ್ವ ಜಯಗಳಿಸಲು ಸಾಧ್ಯವಾಆಯಿತು ಎನ್ನಬಹುದು. ಆದರೆ ಪಂಜಾಬ್ ಆಪ್ ದೆಹಲಿಯಷ್ಟು ಸುಲಭವಲ್ಲ ಎನ್ನುವುದು ಮರೆಯುವಂತ ಸಂಗತಿಯಲ್ಲ.