ಜೈಪುರ : ಹೆಮ್ಮಾರಿ ಕೊರೊನಾ ವೈರಸ್ ದೇಶದಲ್ಲಿ ಅಬ್ಬರಿಸುತ್ತಾ ಸಾಗಿದ್ದು, ಸಿಕ್ಕ ಸಿಕ್ಕವರ ದೇಹ ಹೊಕ್ಕಿ ಮರಣ ಮೃದಂಗ ಬಾರಿಸುತ್ತಿದೆ. ಇದರ ಮಧ್ಯೆ ಸರ್ಕಾರಗಳು ಕೂಡ ಜನರಿಗೆ ಕೋವಿಡ್ ತಡೆಗಟ್ಟುವ ಸಲುವಾಗಿ ಹಲವಾರು ಜಾಗೃತಿಗಳನ್ನು ಮೂಡಿಸುತ್ತಿವೆ. ಹಾಗೇ ಜೋಧ್ ಪುರದ ರೆಸ್ಟೋರೆಂಟ್ ನಲ್ಲಿ ವಿಭಿನ್ನವಾಗಿ ಜಾಗೃತಿ ಮೂಡಿಸುತ್ತಿದ್ದಾರೆ.
ಈ ರೆಸ್ಟೋರೆಂಟ್ ನಲ್ಲಿ ಸಾಂಪ್ರದಾಯಿಕ ರಾಜಸ್ಥಾನಿ ಹಾಗೂ ಉತ್ತರ ಭಾರತ ಶೈಲಿಯ ಡಿಶ್ ತಯಾರಾಗುತ್ತವೆ. ಆದರೆ ಅದರ ಜೊತೆಗೆ ಕೋವಿಡ್ ಕರಿ ಹಾಗೂ ಮಾಸ್ಕ್ ನಾನ್ ತಯಾರು ಮಾಡಿ ಉಣಬಡಿಸಲಾಗುತ್ತಿದೆ. ಈ ಮೂಲಕ ಜನರಿಗೆ ಕೋವಿಡ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಅಲ್ಲದೆ ಈ ಸಂಬಂಧ ರೆಸ್ಟೋರೆಂಟ್ ಟ್ವಿಟ್ಟರ್ ಖಾತೆಯಲ್ಲಿ ಎರಡು ಪೋಸ್ಟ್ ಗಳನ್ನು ಪೋಸ್ಟ್ ಮಾಡಲಾಗಿದೆ. ಫೋಟೊದಲ್ಲಿ ಮಾಸ್ಕ್ ರೀತಿಯಲ್ಲಿ ನಾನ್, ಕೋವಿಡ್ ನಂತೆ ಗ್ರೇವಿ ಮಾಡಿರೋದನ್ನ ನಾವು ನೋಡಬಹುದು.
Covid curry and Mask naan#covidcurry #masknaan pic.twitter.com/nuzAzmI5Ts
— Vedic (@Vedic_restro) July 31, 2020
ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಭಿನ್ನ ವಿಭಿನ್ನ ರೀತಿಯಲ್ಲಿ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.