ನವದೆಹಲಿ : ಮೋದಿ ಲಾಕ್ ಡೌನ್ 3.0 ಅವಧಿ ಮುಕ್ತಾಯಕ್ಕೆ ಇನ್ನೂ 2 ದಿನಗಳು ಮಾತ್ರ ಬಾಕಿಯಿದ್ದು, ಲಾಕ್ ಡೌನ್ 4.0 ಹೇಗಿರಲಿದೆ ಎನ್ನುವ ಚರ್ಚೆ ಸಾರ್ವಜನಿಕ ವಲಯದಲ್ಲಿ ಶುರುವಾಗಿದೆ.
ಮೊನ್ನೆ ದೇಶವನ್ನುದ್ದೇಶಿಸಿ ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರು, ನಾಲ್ಕನೇ ಹಂತದ ಲಾಕ್ ಡೌನ್ ವಿಭಿನ್ನವಾಗಿರಲಿದೆ ಎಂದು ಹೇಳುವ ಮೂಲಕ ಕುತೂಹಲ ಹೆಚ್ಚಿಸಿದ್ದರು. ಲಾಕ್ ಡೌನ್ 4.0 ಹೇಗಿರಲಿದೆ.. ಏನಿರುತ್ತೆ.. ಏನಿರಲ್ಲ.. ಬಸ್ ಸಂಚಾರಕ್ಕೆ ಅವಕಾಶ ಸಿಗುತ್ತಾ.. ಸಿನಿಮಾ ಮಾಲ್ ಗಳು ಓಪನ್ ಆಗುತ್ವಾ ಎಂದು ಜನರು ತಲೆ ಕೆಡಿಸಿಕೊಂಡಿದ್ದಾರೆ.
ಇನ್ನು ಈ ಲಾಕ್ ಡೌನ್ 4.0 ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಪರಿಷ್ಕೃತ ಮಾರ್ಗಸೂಚಿಗಳು ಪ್ರಕಟವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಹಾಗಾದ್ರೆ ನಮೋ ಲಾಕ್ ಡೌನ್ 4.0 ನಲ್ಲಿ ಏನಿರುತ್ತೆ..? ಏನಿರಲ್ಲ..?
ಏನಿರಬಹುದು..?
* ಕಂಟೈನ್ಮೆಂಟ್ ಝೋನ್ ಗಳನ್ನು ಬಿಟ್ಟು ಎಲ್ಲಾ ಭಾಗಗಳಲ್ಲೂ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ
* ಎಲ್ಲಾ ಕಡೆ ಬಸ್ ಸಂಚಾರಕ್ಕೆ ಅನುಮತಿ
* ರೆಡ್ ಝೋನ್ ನಲ್ಲಿ ಆಟೋ, ಕ್ಯಾಬ್ ಗೆ ಅವಕಾಶ
* ಹಂತ ಹಂತವಾಗಿ ರೈಲು, ದೇಶಿಯ ವಿಮಾನ
* ರೆಡ್ ಝೋನ್ ನಲ್ಲಿ ಸಲೂನ್, ಸ್ಪಾಗೆ ಅನುಮತಿ
* ಐಟಿ, ಎಂಎನ್ ಸಿ ಕಂಪನಿಗಳಲ್ಲಿ ಪೂರ್ಣ ಸಿಬ್ಬಂದಿಯೊಂದಿಗೆ ಕೆಲಸ
* ರಾತ್ರಿ ಸಂಚಾರದ ಮೇಲಿನ ಕರ್ಫ್ಯೂ ತೆರವು
* ದೊಡ್ಡ ಕಾರ್ಯಕ್ರಮಗಳಿಗೆ ಅನುಮತಿ (ಷರತ್ತುಗಳು ಅನ್ವಯ)
* ಅಂತರ್ ರಾಜ್ಯ ಸಂಚಾರಕ್ಕೆ ಅವಕಾಶ (ಪಾಸ್ ಕಡ್ಡಾಯ)
ಏನಿರಲ್ಲ..?
* ಶಾಪಿಂಗ್ ಮಾಲ್, ಕಾಂಪ್ಲೆಕ್ಸ್, ಸ್ಪೋರ್ಟ್ಸ್, ಕಾಂಪ್ಲೆಕ್ಸ್, ಥಿಯೇಟರ್
* ದೇಗುಲ, ಜಾತ್ರೆ, ಸಂತೆ, ಉತ್ಸವ ಧಾರ್ಮಿಕ, ರಾಜಕೀಯ, ಸಾಂಸ್ಕೃತಿಕ ಕಾರ್ಯಕ್ರಮ
* ಹೋಟೆಲ್ ಗಳಲ್ಲಿ ಪಾರ್ಸೆಲ್ ಗಷ್ಟೇ ಅವಕಾಶ
ಲಾಕ್ ಡೌನ್ 4.0 ನ ಮಾರ್ಗಸೂಚಿಗಳನ್ನು ಇಂದು ಪ್ರಕಟಿಸಲಾಗುತ್ತೆ ಎನ್ನಲಾಗಿದ್ದು, ಇಂದು ಸಂಜೆ ವೇಳೆ ಹೊಸ ನಿಯಮಗಳು ಬಿಡುಗಡೆಯಾಗುವ ನಿರೀಕ್ಷೆಗಳಿವೆ.








