ನಾಳೆ ಏನು ತಿಂಡಿ ಮಾಡುವೆ ?
ರಮ್ಯಾ ಇಡ್ಲಿಗೆ ಅಕ್ಕಿ ರುಬ್ಬುತ್ತಾ ಇದ್ದಳು, 8 ವರ್ಷದ ಮಗ ಸುನಿಲ್ ಒಳಗಿನಿಂದಲೇ ಕೇಳುತ್ತಾನೆ ,ನಾಳೆ ಏನು ತಿಂಡಿ ಮಾಡುವೆ? .ರಮ್ಯಾ “ಇಡ್ಲಿ” . “ಇಡ್ಲಿಗೆ ಚಟ್ನಿ ಮಾಡು .ತಿನ್ನಲು ಒಳ್ಳೆಯದಾಗುತ್ತೆ” ಎಂದು ಮಗ ಹೇಳುತಿದ್ದ . ನಾಳೆ ರವಿವಾರ ,ಆರಾಮವಾಗಿ ಕುಳಿತು ತಿನ್ನಬಹುದೆಂದು ,ಅವನ ಆಲೋಚನೆ , ಸ್ಕೂಲ್ ಟೈಂನಲ್ಲಿ ಎಲ್ಲ ಗೆಳೆಯರು ತನ್ನ ಇಡ್ಲಿ ತಿಂದು ತನಗೆ ಅವರು ಕೊಟ್ಟ ಚಪಾತಿಯೇ ಗತಿ ,ಎಂದು ಯೋಚಿಸುತಿದ್ದಾ . ರಮ್ಯಾ ಮತ್ತು ರವಿಯ ಕುಟುಂಬ ಮುಂಬೈಯ ಸಮೀಪದ ಕಿಸಾನ್ ನಗರದ ,”ಶಾಂತಿ ಅಪಾರ್ಟ್ಮೆಂಟಿನ “ಮೊದಲ ಮಾಳಿಗೆಯಲ್ಲಿ ಜೀವನ ಮಾಡುತಿದ್ದರು .ಅದೊಂದು ಮಧ್ಯಮ ಕ್ಲಾಸ್ ಉತ್ಪನ್ನವಿರುವ ಜನರು ವಾಸಿಸುವ ಸಿಟಿ ಆಗಿತ್ತು . ಮೊದಲು ಅಲ್ಲಿ ನದಿ ಇತ್ತು .ಈಗ ನದಿ ಸಣ್ಣ ಕಾಲುವೆ ಆಗಿದೆ .ಅಲ್ಲಿ ಬಿಲ್ದರ್ ನವರು ನೂರಾರು ಬಿಲ್ಡಿಂಗ್ ಕಟ್ಟಿದ್ದರು .
ರವಿ ರಾತ್ರಿ ಪಾಳಿಯ ಕೆಲಸಕ್ಕೆ ಹೋಗಿದ್ದರು . ಬೆಳಗ್ಗೆ ಎದ್ದಾ ರಮ್ಯಾ ,ಮೊದಲು ಹಾಲು ತರಲು ಡೈರಿಯ ಬಳಿ ಹೋದರು .ಮಳೆಗಾಲವಾದ್ದರಿಂದ ಹನಿ ಹನಿ ಮಳೆ ಬರುತಿತ್ತು . ಹಾಲು ಕೊಂಡು ಹಿಂದೆ ಬರುವಾಗ ಜೋರಾಗಿ ಶಬ್ದ ಕೇಳಿಸಿತು .ಯಾರೋ ಜೋರಾಗಿ ,ಬಿಲ್ಡಿಂಗ್ ಕುಸಿಯುತ್ತಿದೆ ,ಓಡಿ ಓಡಿ ಎಂದು ಕೂಗುತ್ತಿದ್ದರು . ರಮ್ಯಾ ಹೆದರಿ ತನ್ನ ಬಿಲ್ಡಿಂಗ್ ನ ಬಳಿ ಬರುತ್ತಿರುವಾಗಲೇ , ತನ್ನ ಮಗನು ಮಲಗಿರುವ ಬಿಲ್ಡಿಂಗ್ “ಶಾಂತಿ ಅಪಾರ್ಟ್ಮೆಂಟ್ ” ಬಿದ್ದಿತ್ತು . ಅಲ್ಲಿಗೆ ಕಣ್ಣು ಕತ್ತಲಾಗಿ ಬಿದ್ದಳು .
ಯಾರೋ ಮುಖಕ್ಕೆ ನೀರು ಚುಮುಕಿಸಿ ಎಚ್ಚರಿಸಿದರು . ಸುನಿಲ್, ಸುನಿಲ್ ಎನ್ನುತ್ತಾ ಬಿದ್ದ ಬಿಲ್ಡಿಂಗ್ ನ ಬಳಿ ಹೊರಟಾಗ ,ಯಾರೋ ಹೆಂಗಸರು ತಡೆದ್ದು ಕುಳ್ಳಿಸಿದರು .ರೋದನ ಮುಗಿಲು ಮುಟ್ಟುತಿತ್ತು .ಗಂಡನೂ ಬಂದಿರಲಿಲ್ಲಾ .ಯಾರೋ ಸಮಾಧಾನ ಮಾಡುತಿದ್ದರು . ಅದಾಗಲೇ ನೂರಾರು ಯುವಕರು ಬಿದ್ದ ಕಟ್ಟಡದ ಅವಶೇಷಗಳನ್ನು ತೆಗೆಯಲು ಪ್ರಾರಂಭಿಸಿದ್ದರು . ಸ್ವಲ್ಪ ಹೊತ್ತಿನಲ್ಲಿ ಅಗ್ನಿಶಾಮಕ ದಳ , ಆರಕ್ಷಕರು ,ಕ್ರೇನ್ ,ಕಟರ್ ಎಲ್ಲ ಬಂದರು . ನಾಲ್ಕನೇ ಮಳಿಗೆಯಲ್ಲಿದ್ದ .ಎಲ್ಲಾ ಕಟ್ಟಡದ ಅವಶೇಷ ತೆಗೆಯಲಾಯಿತು . ಗಾಯ ಗೊಂಡವರನ್ನು ,ಬದುಕಿಳಿದವರನ್ನು ಆಂಬುಲೆನ್ಸ್ ಸರಕಾರಿ ದಾವಾಖಾನೆಗೆ ಕೊಂಡು ಹೋಗುತಿದ್ದರು .ಯಾರೋ ಹೆಂಗಸು ಸ್ನಾನ ಮಾಡುವಾಗಲೇ ಬಿಲ್ಡಿಂಗ್ ಬಿದ್ದಿತ್ತಂತೆ . ಜನರು ಅಲ್ಲೂ ಖುಷಿ ಪಡುತ್ತಿದ್ದರು . ಸ್ವಲ್ಪ ನೋಡುತ್ತಿರುವ ಜನರು ಕಡಿಮೆಯಾಗಿದ್ದರೂ ,ಹೊಸಬರು ಕುತೂಹಲದಿಂದ ನೋಡಲು ಬರುತಿದ್ದರು .
ಮೂರನೇ ಮಾಳಿಗೆಯ ಅವಶೇಷ ತೆಗೆದಾಗ ,ಗಂಡನೂ ಬಂದರು , ಅವರನ್ನು ನೋಡಿ ರಮ್ಯಾ ಮತ್ತೊಮ್ಮೆ ಎದೆ ಬಡಿದುಕೊಂಡು ಅತ್ತಳು . ತುಳುನಾಡಿನವರು ಬಂದು ಇವರನ್ನು ಸಮಾಧಾನಿಸುತಿದ್ದರು. ರಮ್ಯಾಲಂತೂ ಅಳುತ್ತಾ ತನ್ನ ಮನೆಯ ದೈವ ದೇವರಿಗೆ ಹರಕೆ ಹೊರುತ್ತಿದ್ದಳು . ಗಂಡ ರವಿ ಕೂಡಾ ದೈವವನ್ನು ಸ್ಮರಿಸುತಿದ್ದನು . ಮೂರನೇ ಮಳಿಗೆಯಲ್ಲೂ ಒಂದಿಬ್ಬರು ಬದುಕಿ ಉಳಿದಿದ್ದರು . ಊರಿನವರು ಇವರಿಗೆ ಬೇರೆ ಮನೆ ಬಾಡಿಗೆಗೆ ರೆಡಿ ಮಾಡಿದರು .ಮಾಲೀಕ ಒಂದು ತಿಂಗಳು ಬಾಡಿಗೆ ಕೂಡಾ ಬೇಡ ಎಂದಾ. ಜನರೇನೋ ಶಕ್ತಿ ಮೀರಿ ಸಹಾಯ ಮಾಡುತಿದ್ದರು ,ಆದರೆ ದೈವ ದೇವರು ಕೈ ಬಿಟ್ಟರೆ ” ಒಂದೇ ಸಾಕೆಂದು ” ಇದ್ದವರು ಇವರು .ಎರಡೂ ಇದ್ದರೂ ಏನು ಪ್ರಯೋಜನ ದೇವರು ಕೈ ಬಿಟ್ಟು ಈ ರೀತಿ ಮಾಡಿದರೆ . ಎರಡನೇ ಮಳಿಗೆಯಲ್ಲೂ ಕೆಲವರು ಕೈ ಕಾಲು ತುಂಡಾಗಿ ಬದುಕಿ ಉಳಿದಿದ್ದರು .
ಈಗಾ ಒಂದನೇ ಮಾಳಿಗೆಯಾ ಕಟ್ಟಡ ಅವಶೇಷ ತೆಗೆಯುತ್ತಿದ್ದಾರೆ . ರಮ್ಯಾ ,ರವಿಗೆ ತಡೆಯಲಾಗುತ್ತಿಲ್ಲಾ .ಅವರನ್ನು ಯಾರೋ ಹಿಡಿದುಕೊಂಡಿದ್ದಾರೆ .ಯಾರೋ ನೀರು ಕುಡಿಸುತಿದ್ದಾರೆ. ಈಗ ತನ್ನ ಮನೆಯ ಬಳಿಯ ಕಬ್ಬಿಣದ ರೋಡ್ಗಳನ್ನು ತುಂಡರಿಸಿ ,ಅವಶೇಷ ತೆಗೆಯುತ್ತಿದ್ದಾರೆ .ಬದಿಯ ಬಿಲ್ಡಿಂಗ್ ನಲ್ಲಿ ಯಾರೋ ಕೂಗುತ್ತಿದ್ದಾರೆ, ಮಗುವಿನ ಕಾಲು ತೋರುತ್ತಿದೆ . ರಮ್ಯಾ ಹುಚ್ಚಿಯಾಗಿದ್ದಳು . ತಾಯಿಯ ಕಣ್ಣಲ್ಲಿ ಎಷ್ಟು ನೀರಿದೆಯೆಂದು ಯಾರು ಅಳತೆ ಮಾಡಿರಲಿಕ್ಕಿಲ್ಲಾ . ಆಗ ಯಾರೋ ಸುನಿಲ್ ಸತ್ತು ಶವವಾಗಿ ಬಿದ್ದಿದ್ದಾನೆ ಎಂದು ಕೂಗಿದರು .ರಮ್ಯಾ ಮತ್ತೊಮ್ಮೆ ಪ್ರಜ್ಞೆ ತಪ್ಪಿ ಬಿದ್ದಳು. ಯಾರೋ ನೀರು ಚುಮಿಕಿಸಿ ಮತ್ತೊಮ್ಮೆ ಎಚ್ಚರಿಸಿದರು .ಸುನಿಲನ ಮೇಲೆ ಬಿದ್ದಿದ್ದಾ ಕಂಬವನ್ನು ಎತ್ತಿ ಸರಿಸಿದರು . ಮೆಲ್ಲನೆ ಸುನಿಲ ನ ದೇಹವನ್ನು ಅಲುಗಾಡಿಸಿದಾಗ ,ರಮ್ಯಾ ಎಲ್ಲರ ಕೈ ತಪ್ಪಿಸಿ ಓಡಿ ಸುನಿಲನನ್ನು ಎತ್ತಿಕೊಂಡಳು .ಸುನಿಲ್ ಮಾತ್ರಾ ಆಶರ್ಯದಿಂದ ಏನಾಯಿತೆಂದು ಕೇಳಿದ .ರಮ್ಯಳ ಕಣ್ಣಿಂದ ಹರಿಯುತ್ತಿರುವ ಆನಂದ ಭಾಷ್ಪ ದ ಹನಿಗಳು ಮುತ್ತಿನಂತೆ ಹೊಳೆಯುತ್ತಿತ್ತು .
ಹೊಸ ಮನೆಗೆ ಬಂದು ಯಾರೋ ತಂದು ಕೊಟ್ಟಾ ಊಟ ಮಾಡುತ್ತಿರುವಾಗ ,ಮಗ ಕೇಳಿದ , ಇಡ್ಲಿಯ ಎಲ್ಲಾ ಹಿಟ್ಟು ಬಿದ್ದು ಹೋಗಿದೆಯಾ ….
ರಾಜು ಶೆಟ್ಟಿ








