WhatsApp : ಶೀಘ್ರದಲ್ಲೇ ವಾಟ್ಸಪ್ ನಿಂದ 21 ಹೊಸ ಎಮೋಜಿ….
ಭಾರತೀಯರು ಸೇರಿದಂತೆ ಪ್ರಪಂಚದ ಹಲವು ಜನತೆ ತ್ವರಿತ ಸಂದೇಶಕ್ಕಾಗಿ, ಗ್ರೂಪ್ ಚಾಟ್ ಮತ್ತು ವಿಡಿಯೋ ಕಾಲ್ ಗೆ ಹೆಚ್ಚು ಬಳಸಲ್ಪಡುತ್ತಿರುವ ಅಪ್ಲಿಕೇಷನ್ ಎಂದರೇ ಅದು ವಾಟ್ಸಪ್ . ಮೆಟಾ ಒಡೆತನದ ವಾಟ್ಸಪ್ ಕಾಲಕ್ಕೆ ತಕ್ಕಂತೆ ಹಲವು ಫೀಚರ್ಸ್ ಗಳನ್ನ ಬಿಡುಗಡೆ ಮಾಡುತ್ತಿರುತ್ತದೆ. ಇದೀಗ ಫೇಸ್ಬುಕ್ ಮುಂಬರುವ ಅಪ್ಡೇಟ್ ನಲ್ಲಿ 21 ಹೊಸ ಎಮೋಜಿಗಳು ಮತ್ತು ಗ್ರೂಪ್ ಅಡ್ಮಿನ್ ಗಳಿಗೆ ಹೊಸ ಅಪ್ರೂವಲ್ ಫೀಚರ್ಸ್ ಗಳನ್ನ ಬಿಡುಗಡೆ ಮಾಡುತ್ತಿದೆ.
Wabetainfo ಪ್ರಕಾರ, WhatsApp ತನ್ನ Android ಬೀಟಾ ಬಳಕೆದಾರರಿಂದ 21 ಹೊಸ ಎಮೋಜಿಗಳನ್ನ ಪರೀಕ್ಷಿಸುತ್ತಿದೆ . ಹೊಸ ಬ್ಯಾಚ್ ಎಮೋಜಿಗಳೊಂದಿಗೆ ಚಾಟ್‌ನಲ್ಲಿ ಈ ಎಮೋಜಿಗಳನ್ನ ಕಳುಹಿಸಲು ಬಳಕೆದಾರರು ಪ್ರತ್ಯೇಕ ಕೀಬೋರ್ಡ್ ಬಳಸಬೇಕಾಗಿಲ್ಲ. ಶೀಘ್ರದಲ್ಲೇ ಇದು ಎಲ್ಲಾ ಬಳಕೆದಾರರಿಗೂ ಸಿಗಲಿದೆ.
ಇದಲ್ಲದೇ WhatsApp ಮತ್ತೊಂದು ಫೀಚರ್ಸ್ ಬಿಡುಗಡೆ ಮಾಡುತ್ತಿದ್ದು, ಗ್ರೂಪ್ ಅಡ್ಮಿನ್ ಆಗಿರುವ ವ್ಯಕ್ತಿ ಗ್ರೂಪ್ ಸದಸ್ಯನ ಭಾಗವಹಿಸಿಕೆಯನ್ನ ಅನುಮೋದಿಸಲು ಅನುವು ಮಾಡಿಕಕೊಡಲಿದೆ. ಇದು ಗ್ರೂಪ್ ಅಡ್ಮಿನ್ ಗೆ ಹೆಚ್ಚಿನ ನಿಯಂತ್ರಣವನ್ನ ತಂದು ಕೊಡಲಿದೆ. ಗ್ರೂಪ್ ಗೆ ಸೇರಬುಹುದಾದ ಸದಸ್ಯರನ್ನ ಮಿತಿಗೊಳಿಸಲು ಮತ್ತು ನಿಯಂತ್ರಿತಗೊಳಿಸಲು ಈ ಫೀಚರ್ ಸಹಾಯ ಮಾಡಲಿದೆ. ಈ ವೈಶಿಷ್ಟ್ಯ ಪ್ರಸ್ತುತ ಬೀಟಾ ಬಳಕೆದಾರರಿಗೆ ಮಾತ್ರ ಲಭ್ಯವಿದ್ದರೂ, ಶೀಘ್ರದಲ್ಲೇ ಇದನ್ನು ಎಲ್ಲರಿಗೂ ಬಿಡುಗಡೆ ಮಾಡಲಾಗುವುದು. ಲಭ್ಯವಾದ ಮೇಲೆ ಗ್ರೂಪ್ ಸೆಟ್ಟಿಂಗ್ ಗಳಲ್ಲಿ ಈ ಆಯ್ಕೆಗಳು ಕಾಣಿಸಿಕೊಳ್ಳಲಿವೆ.
WhatsApp : 21 new emoji from WhatsApp soon….