Whatsapp Down | ವಾಟ್ಸಾಪ್ ಗೆ ಗ್ರಹಣ… ಮೆಸೇಜ್ ಹೋಗ್ತಿಲ್ಲಾ.. ಬರ್ತಿಲ್ಲಾ..
ಸೂರ್ಯಗ್ರಹಣದಂದು ವಿಶ್ವದಾದ್ಯಂತ ವಾಟ್ಸಾಪ್ ಗೂ ಗ್ರಹಣ ಹಿಡಿದಂತೆ ಕಾಣುತ್ತಿದೆ.
ಭಾರತದಾದ್ಯಂತ ಗ್ರಹಣದ ಬಗ್ಗೆ ಜನರು ತಲೆ ಕೆಡಿಸಿಕೊಂಡಿದ್ದರೇ ನೆಟ್ಟಿಗರು ವಾಟ್ಸಾಪ್ ಬಗ್ಗೆ ತಲೆಕಡೆಸಿಕೊಂಡಿದ್ದಾರೆ.
ವಿಶ್ವದಾದ್ಯಂತ ವಾಟ್ಸಪ್ ಡೌನ್ ಆಗಿದ್ದು, ಕಳೆದ ಮೂವತ್ತು ನಿಮಿಷಗಳಿಂದ ವಾಟ್ಸಾಪ್ ನಲ್ಲಿ ಯಾವುದೇ ಸಂದೇಶಗಳು ಹೋಗುತ್ತಿಲ್ಲ.. ಬರುತ್ತಿಲ್ಲ.. ಇದರಿಂದ ಬಳಕೆದಾರರು ಪರದಾಟ ನಡೆಸುತ್ತಿದ್ದಾರೆ.

ಆದರೆ ಈ ಬಗ್ಗೆ ವಾಟ್ಸಾಪ್ ನಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.
ಸದ್ಯ ಬಳಕೆದಾರರು ಸಂದೇಶ ಕಳುಹಿಸಲಾಗದೇ ಪರದಾಟ ನಡೆಸುತ್ತಿದ್ದಾರೆ.
ಕೆಲವರು ವಾಟ್ಸಾಪ್ ಅನ್ನು ಅನ್ ಇನ್ ಸ್ಟಾಲ್ ಮಾಡಿದ್ದು, ಮತ್ತೆ ಇನ್ ಸ್ಟಾಲ್ ಮಾಡಲಾಗದೇ ಪರದಾಟ ನಡೆಸುತ್ತಿದ್ದಾರೆ.








