WhatsApp : ಕರೆಗಳನ್ನ ಇನ್ಮುಂದೆ ಶೆಡ್ಯೂಲ್ ಮಾಡಬಹುದು..!! ಹೊಸ ಫೀಚರ್ ನೊಂದಿಗೆ ಬಂದ ವಾಟ್ಸಾಪ್..!!
ವಿಶ್ವಾದ್ಯಂತ ಬಳಕೆದಾರರನ್ನ ಹೊಂದಿರುವ ಅತ್ಯಂತ ಜನಪ್ರಿಯ ಮೆಸೇಜಿಂಗ್ ಆಪ್ Whatsapp ಆಗಾಗ ತನ್ನ ಬಳಕೆದಾರರಿಗೆ ಹೊಸ ಹೊಸ ಫೀಚರ್ ಗಳನ್ನ ಪರಿಚಯ ಮಾಡುತ್ತಾ ಬಳಕೆಯನ್ನ ಇನ್ನಷ್ಟು ಉತ್ತಮಗೊಳಿಸುತ್ತಿರುತ್ತದೆ.
ಇದೀಗ ಮತ್ತೊಂದು ಹೊಸ ಫೀಚರ್ ದೇ ಎಲ್ಲೆಡೆ ಚರ್ಚೆಯಾಗ್ತಿದೆ.
ಈ ನೂತನ ಫೀಚರ್ಸ್ ಮೂಲಕ Whatsapp ಬಳಕೆದಾರರು ಕರೆಗಳನ್ನು ಶೆಡ್ಯೂಲ್ ಮಾಡಬಹುದು. ಆಂದರೆ ಗ್ರೂಪ್ ಕರೆ ಮಾಡಲು, ಮೀಟಿಂಗ್ ಮಾಡಲು, ರಿಮೈಂಡರ್ ಇಡಬೇಕಿಲ್ಲ. ಯಾವ ಸಮಯಕ್ಕೆ ಕರೆ ಮಾಡಬೇಕು ಅನ್ನೋದನ್ನು ಶೆಡ್ಯೂಲ್ ಮಾಡಿಕೊಳ್ಳಬಹುದು. ತಕ್ಕ ಸಮಯಕ್ಕೆ ಕರೆ ಕನೆಕ್ಟ್ ಆಗಲಿದೆ. ನೂತನ ಫೀಚರ್ಸ್ ಕೋಟ್ಯಾಂತರ ಬಳಕೆದಾರರಿಗೆ ಪ್ರಯೋಜನ ನೀಡಲಿದೆ.
WABetainfo ಪ್ರಕಾರ ವ್ಯಾಟ್ಸಾಪ್ ಹೊಸ ಫೀಚರ್ಸ್ ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಲಿದೆ. ಸದ್ಯ ಶೆಡ್ಯೂಲ್ ಕರೆ ಪ್ರಾಯೋಗಿಕ ಹಂತದಲ್ಲಿದೆ. ಯಶಸ್ವಿ ಪ್ರಯೋಗದ ಬಳಿಕ ಇದೀಗ Whatsapp ಬಳಕೆದಾರರಿಗೆ ಪರಿಚಯಿಸಲು ಸಜ್ಜಾಗಿದೆ. ಕಾಲ್ , ವಿಡಿಯೋ ಕಾಲ್ ಆಯ್ಕೆಗಳಿಗೂ ಶೆಡ್ಯೂಲ್ ಕರೆ ಬಳಕೆ ಮಾಡಬಹುದು. ಗ್ರೂಪ್ ಕಾಲ್, ಕೇಚೇರಿಗಳಲ್ಲಿ ಸಹದ್ಯೋಗಿಗಳ ಜೊತೆ ಮೀಟಿಂಗ್, ಪ್ರಮುಖ ಕರೆಗಳನ್ನು ಕೆಲಸದ ಒತ್ತಡದಲ್ಲಿ ಮರೆಯುವ ಸಾಧ್ಯತೆಗಳಿವೆ. ಹೀಗಾಗಿ ಕರೆಗಳನ್ನು ಯಾವ ಸಮಯಕ್ಕೆ, ಯಾವ ದಿನಾಂಕ ಮಾಡಬೇಕು ಅನ್ನೋದನ್ನು ಶೆಡ್ಯೂಲ್ ಮಾಡಬಹುದು.
ಶೆಡ್ಯೂಲ್ ಮಾಡಿದ ಬೆನ್ನಲ್ಲೇ ಯಾರಿಗೆ ಕರೆ ಮಾಡಬೇಕು, ಯಾರನ್ನು ಶೆಡ್ಯೂಲ್ ಕರೆಯಲ್ಲಿ ಸೇರಿಸಿದ್ದೀರಿ ಅವರಿಗೂ ಒಂದು ನೋಟಿಫಿಕೇಶನ್ ಹೋಗಲಿದೆ.
ನಿಗದಿ ಪಡಿಸಿದ ಸಮಯದಲ್ಲಿ ಕರೆ ಕನೆಕ್ಟ್ ಆಗಲಿದೆ. ಬ್ಯೂಸಿನೆಸ್ ಕಾರ್ಯದಲ್ಲಿ ತೊಡಗಿರುವವರಿಗೆ ಈ ಶೆಡ್ಯೂಲ್ ಕಾಲ್ ಹೆಚ್ಚಿನ ಪ್ರಯೋಜನ ನೀಡಲಿದೆ.
ಗ್ರೂಪ್ ವಿಡಿಯೋ ಕಾಲ್ ಅಥವಾ ಕೇವಲ ಧ್ವನಿ ಮೂಲಕ ಗ್ರೂಪ್ ಕಾಲ್ ಮಾಡಲು ಕ್ಲಿಕ್ ಮಾಡಿದಾಗ, ಶೆಡ್ಯೂಲ್ ಕಾಲ್ ಆಯ್ಕೆ ತೋರಿಸಲಿದೆ. ಶೆಡ್ಯೂಲ್ ಆಯ್ಕೆ ಒತ್ತಿದರೆ, ದಿನಾಂಕ, ಸಮಯ ಸೇರಿದಂತೆ ನಿಗದಿಪಡಿಸಿದರೆ ಮುಗೀತು.
ಬೇಟಾ ಟೆಸ್ಟಿಂಗ್ ನಲ್ಲಿ ಈ ಫೀಚರ್ಸ್ ಲಭ್ಯವಿದೆ. ಐಫೋನ್ ಬಳಕೆಗಾರರು ಆ್ಯಪಲ್ ಟೆಸ್ಟ್ ಫ್ಲೈಟ್ ಪೋಗ್ರಾಮ್ ಮೂಲಕ ಈ ಫೀಚರ್ಸ್ ಅನುಭಿಸಬಹದು.
WhatsApp is now introducing new feature , in which users cas schedule calls, video calls, group calls , etc