WhatsApp : “ಶೆಡ್ಯೂಲ್ ಗ್ರೂಪ್ ಕಾಲ್” ಹೊಸ ಫೀಚರ್ ಪರಿಚಯಿಸಿದ ವಾಟ್ಸಾಪ್
ತ್ವರಿತವಾಗಿ ಮೆಸೆಜ್ ಕಳುಹಿಸಲು, ಗ್ರೂಪ್ ಚಾಟ್, ಗ್ರೂಪ್ ವಿಡಿಯೋ ಕಾಲ್ ಈ ರೀತಿ ಹಲವು ಸೌಲಭ್ಯಗಳನ್ನ ನೀಡುತ್ತಿರುವ ಮೆಸೆಜಿಂಗ್ ಆಪ್ ಗಳಲ್ಲಿ ವಾಟ್ಸಪ್ ಮೊದಲ ಸ್ಥಾನದಲ್ಲಿ ನಿಲ್ಲುತ್ತೆ. ಮೆಟಾ ಒಡೆತನದ ವಾಟ್ಸಾಪ್ ಇತ್ತೀಚೆಗೆ ಒಂದೇ ಬಾರಿಗೆ 32 ಜನರಿಗೆ ಗ್ರೂಪ್ ವಿಡಿಯೋ ಕಾಲ್ ಮಾಡುವ ಫೀಚರ್ಸ್ ಅನ್ನ ಬಿಡುಗಡೆ ಮಾಡಿತ್ತು.
ಇದೀಗ ಮತ್ತುಷ್ಟು ಹೊಸತನವನ್ನ ನೀಡಲು ವಾಟ್ಸಪ್ ಮುಂದಾಗುತ್ತಿದೆ. ಬಳಕೆದಾರರ ಗ್ರೂಪ್ ಕರೆಗಳನ್ನ ಶೇಡ್ಯೂಲ್ ಮಾಡುವ ಮೂಲಕ ಸಮುಯನ್ನ ನಿಗದಿಪಡಿಸಲು ಈ ಅಪ್ಡೇಟ್ ಸಹಾಯ ಮಾಡಲಿದೆ. WAbetainfo ಪ್ರಕಾರ, WhatsApp ಹೊಸ ‘ಶೆಡ್ಯೂಲ್ ಗ್ರೂಪ್ ಕರೆ’ ಫೀಚರ್ ಅನ್ನ ಅಭಿವೃದ್ದಿ ಪಡಿಸಲಾಗುತ್ತಿದ್ದು, ಶೀಘ್ರದಲ್ಲೆ ಇದು ಬಳಕೆದಾರರಿಗೆ ಲಭ್ಯವಾಗಲಿದೆ. ಸಧ್ಯಕ್ಕೆ ಇದು ಬೀಟಾ ಪರೀಕ್ಷೆಯಲ್ಲಿದೆ.
ಈ ಬೀಟಾ ಪ್ರೋಗ್ರಾಂನ ಭಾಗವಾಗಿರುವ ಬಳಕೆದಾರರು iOS 23.4.0 ನೊಂದಿಗೆ WhatsApp ಅನ್ನು ನವೀಕರಿಸುವ ಮೂಲಕ ತಮ್ಮ ಐಫೋನ್ಗಳಲ್ಲಿ ಹೊಸ ವೈಶಿಷ್ಟ್ಯವನ್ನು ಬಳಸಬಹುದು.
ಗ್ರೂಪ್ ಕಾಲ್ ಗಳಿಗಾಗಿ ಕಾಲ್ ಬಟನ್ ಮೇಲೆ ಟ್ಯಾಪ್ ಮಾಡಿದ ನಂತರ ಮೆನುವಿನಲ್ಲಿ ಶೇಡ್ಯೂಲ್ ಕಾಲ್ ಆಯ್ಕೆಯನ್ನ ನೋಡುತ್ತೀರ ಅಲ್ಲಿ ನೀವು ಗ್ರೂಪ್ ಕರೆಯನ್ನ ಯಾವಾಗ ಮತ್ತು ಯಾವ ಜೊತೆಗೆ ಕರೆ ಮಾಡುಲು ಬಯುಸುತ್ತೀರ ಎನ್ನುವುದನ್ನ ಆಯ್ಕೆಮಾಡಿಕೊಳ್ಳಬಹುದು. ಈ ಗ್ರೂಪ್ ಕಾಲ್ ಗಳನ್ನ ನೆನಪಿಸಲು ಇದರ ಲಿಂಕ್ ಗಳನ್ನ ನೀವು ಹಂಚಿಕೊಳ್ಳಬಹುದು.
WhatsApp: “Schedule Group Call” is a new feature introduced by WhatsApp