WhatsApp : ಡಿಸೆಂಬರ್ ನಲ್ಲಿ 36.77 ಲಕ್ಷ ಖಾತೆಗಳಿಗೆ ನಿಷೇಧ ಹೇರಿದ ವಾಟ್ಸಪ್…
ಮೆಟಾ ಒಡೆತನದ ಮೆಸೇಜಿಂಗ್ ಆಪ್ ಪ್ಲಾಟ್‌ಫಾರ್ಮ್ WhatsApp, ಡಿಸೆಂಬರ್ 2022 ರಲ್ಲಿ ಭಾರತದಾದ್ಯಂತ 36.77 ಲಕ್ಷ ಖಾತೆಗಳ ಮೇಲೆ ನಿಷೇಧ ಹೇರಿದೆ. ಮಾಹಿತಿ ತಂತ್ರಜ್ಞಾನ ನಿಯಮಗಳು 2021 ರ ಅಡಿಯಲ್ಲಿ ಪ್ರಕಟವಾದ ಡಿಸೆಂಬರ್ ಆವೃತ್ತಿಯಲ್ಲಿ ವರದಿಯಲ್ಲಿ ಇದು ಪ್ರಕಟವಾಗಿದೆ.
ವರದಿಯ ಪ್ರಕಾರ, 3,677,000 ಸ್ಥಗಿತಗೊಂಡ ಖಾತೆಗಳಲ್ಲಿ, 1,389,000 ಖಾತೆಗಳನ್ನು ಗ್ರಾಹಕರ ವರದಿಗಳ ಮೊದಲು ಪೂರ್ವಭಾವಿಯಾಗಿ ಅಮಾನತುಗೊಳಿಸಲಾಗಿದೆ ಎಂದು WhatsApp ಬಹಿರಂಗಪಡಿಸಿದೆ. ದುರುದ್ದೇಶಪೂರಿತ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಖಾತೆಗಳ ಮೇಲೆ ನಿಷೇಧ ಹೇರಲಾಸಗಿದೆ ಎಂದು ಕಂಪನಿ ಉಲ್ಲೇಖಿಸಿದೆ.
WhatsApp ಭಾರತದಾದ್ಯಂತ ಗ್ರಾಹಕರಿಂದ 1,607 ದೂರು ವರದಿಗಳನ್ನ ಸ್ವೀಕರಿಸಿದೆ ನಂತರ ಒಟ್ಟು ದೂರುಗಳ ಪೈಕಿ 166 ಮೇಲ್ಮನವಿಗಳ ವಿರುದ್ಧ ವಾಟ್ಸಾಪ್ ಕ್ರಮ ಕೈಗೊಂಡಿದೆ. ನವೆಂಬರ್ ಗೆ ಹೋಲಿಸಿದರೇ ಡಿಸೆಂಬರ್ ಅಂಕಿಅಂಶಗಳು ಕಡಿಮೆ ಇವೆ. ನವೆಂಬರ್‌ನಲ್ಲಿ, WhatsApp 37.16 ಲಕ್ಷ ಖಾತೆಗಳಿಗೆ ಸೇವೆಗಳನ್ನು ಸ್ಥಗಿತಗೊಳಿಸಿತ್ತು.
WhatsApp ಭಾರತದಲ್ಲಿ ಅತ್ಯಂತ ವಿಶ್ವಾಸಾರ್ಹ ಸಂದೇಶ ಕಳುಹಿಸುವ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಭಾರತದಲ್ಲಿ 53 ಕೋಟಿಗೂ ಹೆಚ್ಚು ಜನರು ಸಂವಹನ ಮತ್ತು ಸಾಮಾಜಿಕ ಸಂಪರ್ಕಗಳಿಗಾಗಿ WhatsApp ಅನ್ನು ಅವಲಂಬಿಸಿದ್ದಾರೆ.
WhatsApp: WhatsApp banned 36.77 lakh accounts in December…








