ವಿರಾಟ್ ಕೊಹ್ಲಿ ಅನಾರೋಗ್ಯದಿಂದ ಬಳಲುತ್ತಿದ್ರಾ ? ಹಾಗಂತ ಕೊಹ್ಲಿ ಅಮ್ಮನಿಗೆ ಅನ್ನಿಸಿದ್ದು ಯಾಕೆ ?
ವಿರಾಟ್ ಕೊಹ್ಲಿ.. ಆಧುನಿಕ ಕ್ರಿಕೆಟ್ ಜಗತ್ತಿನ ಚೇಸಿಂಗ್ ಗಾಡ್… ಟೀಮ್ ಇಂಡಿಯಾದ ರನ್ ಮೆಷಿನ್.. ವಿಶ್ವ ಕ್ರಿಕೆಟ್‍ನ ದಾಖಲೆಗಳ ಸರದಾರ..ಭಾರತ ಕ್ರಿಕೆಟ್ ತಂಡದ ನಾಯಕ.. ಹೀಗೆ ವಿರಾಟ್ ಹೆಸರಿನ ಮುಂದೆ ಹಲವಾರು ಪದಗಳು ಸೇರಿಕೊಳ್ಳುತ್ತವೆ. ಇದೀಗ ಆಟದ ಜೊತೆಗೆ ವಿರಾಟ್ ಹೆಸರಿನ ಮುಂದೆ ಫಿಟ್‍ನೆಸ್ ಕೂಡ ಸೇರಿಕೊಂಡಿದೆ.
ಫಿಟ್ ನೆಸ್ ವಿಚಾರದಲ್ಲಿ ವಿರಾಟ್ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಚೆಲ್ಲಾಟವಾಡಿಕೊಂಡು ಆಟವಾಡುತ್ತಿದ್ದ ವಿರಾಟ್ ಕೊಹ್ಲಿ ಈಗ ಫಿಟ್ ನೆಸ್ ಗೆ ತುಂಬಾನೇ ಆದ್ಯತೆ ಕೊಡುತ್ತಿದ್ದಾರೆ. ಪ್ರತಿ ದಿನ ನಿಗದಿತ ಸಮಯದಲ್ಲಿ ದೈಹಿಕ ಕಸರತ್ತು ನಡೆಸುತ್ತಾರೆ. ಡಯಟ್ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ವಿಶ್ವದ ಕ್ರೀಡಾಕ್ಷೇತ್ರದಲ್ಲೇ ಫಿಟ್ ಆಗಿರುವ ಅಥ್ಲೀಟ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ.
ಆದ್ರೆ ವಿರಾಟ್ ಕೊಹ್ಲಿಯವರ ಫಿಟ್ ನೆಸ್ ಬಗ್ಗೆ ಅವರ ಅಮ್ಮ ಸರೋಜಾ ಅವರಿಗೆ ಅಷ್ಟೊಂದು ಸಮಾಧಾನವಿಲ್ಲ. ಸರೋಜಾ ಅವರು ತನ್ನ ಮಗ ಏನು ತಿನ್ನುವುದಿಲ್ಲ.. ಆತ ಅನಾರೋಗ್ಯದಿಂದ ಬಳಲುತ್ತಿದ್ದಾನೆ ಅಂತ ಪ್ರತಿ ದಿನ ಯೋಚನೆ ಮಾಡುತ್ತಿದ್ದರಂತೆ.
ಈ ವಿಚಾರವನ್ನು ಸ್ವತಃ ವಿರಾಟ್ ಕೊಹ್ಲಿಯೇ ಹೇಳಿಕೊಂಡಿದ್ದಾರೆ. ಮಯಾಂಕ್ ಅಗರ್‍ವಾಲ್ ಜೊತೆಗಿನ ಲೈವ್ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ನಿಮ್ಮ ಫಿಟ್‍ನೆಸ್ ಬಗ್ಗೆ ನಿಮ್ಮ ತಾಯಿ ಅಥವಾ ನಿಮ್ಮ ಕುಟುಂಬದ ಸದಸ್ಯರು ಏನಾದ್ರೂ ಹೇಳಿದ್ದಾರಾ ಎಂಬ ಪ್ರಶ್ನೆಗೆ ವಿರಾಟ್ ಕೊಹ್ಲಿ ಈ ರೀತಿ ಹೇಳಿದ್ದಾರೆ.
ನನ್ನ ತಾಯಿ ಯಾವಾಗಲೂ ಹೇಳುತ್ತಿದ್ದರು. ನಾನು ತುಂಬಾನೇ ವೀಕ್ ಆಗಿದ್ದೇನೆ ಅಂತ. ನನ್ನ ಪ್ರಕಾರ ಇದು ಪ್ರತಿಯೊಬ್ಬ ತಾಯಿ ಕೂಡ ತನ್ನ ಮಕ್ಕಳ ಬಗ್ಗೆ ಯೋಚನೆ ಮಾಡುತ್ತಿರುತ್ತಾರೆ. ನೀನು ತುಂಬಾ ಸಪೂರ ಇದ್ದೀಯಾ. ನೀನು ಏನನ್ನು ತಿನ್ನುವುದಿಲ್ಲ. ಇದು ವೃತ್ತಿಪರತೆ ಮತ್ತು
ಕಾಳಜಿಯಷ್ಟೇ, ಅವರಿಗೆ ಇದೆಲ್ಲಾ ತಿಳಿಯುವುದಿಲ್ಲ. ಯಾಕಂದ್ರೆ ನಾನು ಫಿಟ್ ನೆಸ್ ಮಾಡುತ್ತಿರುವುದು ವೃತ್ತಿಪರ ಆಟಕ್ಕಾಗಿ. ಹಾಗೇ ಅವರು ಹೇಳುತ್ತಿರುವುದು ನನ್ನ ಮೇಲಿನ ಕಾಳಜಿಯಿಂದ. ಮಕ್ಕಳು ದುಂಡು ದುಂಡಾಗಿರುವುದನ್ನು ಎಲ್ಲಾ ತಾಯಂದಿರು ಇಷ್ಟಪಡುತ್ತಾರೆ. ಒಂದು ವೇಳೆ ಮಕ್ಕಳು ದುಂಡು ದುಂಡಾಗದೇ ಇದ್ರೆ ಅವರಿಗೆ ಏನೋ ತೊಂದರೆ ಇದೆ. ಅನಾರೋಗ್ಯವಿದೆ ಎಂದು ಭಾವಿಸುತ್ತಾರೆ. ಹಾಗೇ ನನ್ನ ತಾಯಿ ಕೂಡ ಯೋಚನೆ ಮಾಡುತ್ತಿದ್ದರು ಎಂದು ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.
ಆದ್ರೆ ನಾನು ಯಾವುದೇ ಅನಾರೋಗ್ಯದಿಂದ ಬಳಲುತ್ತಿಲ್ಲ. ನಾನು ಆಟಕ್ಕಾಗಿ ಇದೆಲ್ಲಾ ಮಾಡುತ್ತಿದ್ದೇನೆ. ಹೀಗಾಗಿ ಅವರನ್ನು ಮನವೋಲಿಸುವುದು ನನಗೆ ತುಂಬಾನೇ ಕಷ್ಟವಾಗಿತ್ತು ಎಂದು ವಿರಾಟ್ ನೆನಪು ಮಾಡಿಕೊಂಡಿದ್ದಾರೆ.








