ಎಬಿಡಿ ಔಟಾದಾಗ ಮರಿ ಎಬಿಡಿ ಸಿಟ್ಟಿನಿಂದ ಮಾಡಿದ್ದೇನು… ವಿಡಿಯೋ ವೈರಲ್…!
ರಾಯಲ್ ಚಾಲೆಂಜರ್ಸ್ ಬೆಂಗಳೂರು.. ಐಪಿಎಲ್ ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ. ಆರ್ ಸಿಬಿ ತಂಡ ಹೀನಾಯವಾಗಿ ಸೋಲಲಿ.. ಅಥವಾ ಭರ್ಜರಿಯಾಗಿ ಗೆಲ್ಲಲಿ..
ಇಲ್ಲಿಯವರೆಗೆ ಕಪ್ ಗೆದ್ದಿಲ್ಲದಿದ್ರೂ ಅಭಿಮಾನಿಗಳ ಅಭಿಮಾನ ಮಾತ್ರ ಒಂಚೂರು ಕಮ್ಮಿಯಾಗಿಲ್ಲ. ಸಾಮಾಜಿಕ ಜಾಲ ತಾಣದಲ್ಲಿ ಅತೀ ಹೆಚ್ಚು ಟ್ರೋಲ್ ಆಗುತ್ತಿರುವ ತಂಡ ಕೂಡ ಆರ್ ಸಿಬಿ. ಆರ್ ಸಿಬಿ ತಂಡದ ಹವಾನೇ ಅಂತಹುದ್ದು..
ಹೌದು, 14ನೇ ಆವೃತ್ತಿಯ 39ನೇ ಪಂದ್ಯದಲ್ಲಿ ಮುಂಬೈ ವಿರುದ್ಧ ಆರ್ ಸಿಬಿ ಭರ್ಜರಿಯಾಗಿಯೇ ಜಯ ದಾಖಲಿಸಿದೆ.
ಹರ್ಷಲ್ ಪಟೇಲ್ ಅವರ ಹ್ಯಾಟ್ರಿಕ್ ವಿಕೆಟ್, ಚಾಹಲ್ ಅದ್ಭುತ ಬೌಲಿಂಗ್, ಮ್ಯಾಕ್ಸ್ ವೆಲ್ ಆಲ್ ರೌಂಡ್ ಆಟ, ನಾಯಕ ಕೊಹ್ಲಿಯ ಬಿರುಸಿನ ಬ್ಯಾಟಿಂಗ್ ಮೂಲಕ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿದಾಗ ಆರ್ ಸಿಬಿ ಅಭಿಮಾನಿಗಳ ಸಂತಸಕ್ಕೆ ಪಾರವೇ ಇಲ್ಲ.
ಇನ್ನು ತಂಡದ ನಾಯಕ ವಿರಾಟ್ ಕೊಹ್ಲಿಯ ಖುಷಿಯನ್ನಂತೂ ಹೇಳುವುದೇ ಬೇಡ. ಯುದ್ಧವನ್ನೇ ಗೆದ್ದಷ್ಟು ಸಂಭ್ರಮ, ಖುಷಿ ವಿರಾಟ್ ಕೊಹ್ಲಿ ಮುಖದಲ್ಲಿತ್ತು.
ಇನ್ನು ಈ ಪಂದ್ಯದಲ್ಲಿ ಆರ್ ಸಿಬಿ ತಂಡದ ಸ್ಟಾರ್ ಆಟಗಾರ ಎಬಿಡಿ ವಿಲಿಯರ್ಸ್ ಮಗನ ವಿಡಿಯೋ ಈಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿದೆ.
ಅಷ್ಟೇ ಅಲ್ಲ ಎಬಿಡಿ ಈ ಪಂದ್ಯದಲ್ಲಿ ಕೇವಲ 11 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡಿದ್ದರು. ಜಸ್ಪ್ರಿತ್ ಬೂಮ್ರಾ ಎಸೆತದಲ್ಲಿ ಎಬಿಡಿ ಅವರು ವಿಕೆಟ್ ಕೀಪರ್ ಕ್ವಿಂಟನ್ ಡಿಕಾಕ್ ಅವರಿಗೆ ಕ್ಯಾಚ್ ನೀಡಿದ್ದರು.
ಆಗ ಪೆವಿಲಿಯನ್ ನಲ್ಲಿ ತನ್ನ ಅಮ್ಮನೊಂದಿಗೆ ಪಂದ್ಯ ನೋಡುತ್ತಿದ್ದ ಎಬಿಡಿ ಮಗ ಸಿಟ್ಟಿನಿಂದ ಕೈಯನ್ನು ಪೆವಿಲಿಯನ್ ನಲ್ಲಿದ್ದ ಸ್ಟೀಲ್ ರಾಡ್ ಗೆ ಹೊಡೆದಿದ್ದಾನೆ.
ಪಾಪ ಎಳೆಯ ಮಗು.. ಅಪ್ಪ ಔಟ್ ಆಗಿರುವ ಸಿಟ್ಟಿಗೆ ರೋಷದಲ್ಲೇ ಸ್ಟೀಲ್ ರಾಡ್ ಗೆ ಹೊಡೆದಾಗ ಕೈಗೆ ನೋವು ಮಾಡಿಕೊಂಡಿದ್ದಾನೆ.
ತಕ್ಷಣವೇ ನೋವಿನಿಂದ ಚೀರಾಡುವ ಎಬಿಡಿ ಮಗನ ವಿಡಿಯೋ ನೋಡಿ ಆರ್ ಸಿಬಿ ಅಭಿಮಾನಿಗಳು.. ಸೋತ್ರೇ ಬಿಡಲ್ಲ.. ಇನ್ನು ಗೆದ್ರೆ ಬಿಡ್ತೀವಾ ಅಂತ ಹೇಳುತ್ತಿದ್ದಾರೆ.