ಶಿವರಾತ್ರಿ ಹಬ್ಬ ಹುಟ್ಟಿದ್ದೇಗೆ..? ಏನನ್ನು ಅರ್ಪಿಸಿದರೆ ಪರಶಿವ ಒಲಿಯುತ್ತಾನೆ?

1 min read

ಶಿವರಾತ್ರಿ ಹಬ್ಬ ಹುಟ್ಟಿದ್ದೇಗೆ? ಏನನ್ನು ಅರ್ಪಿಸಿದರೆ ಪರಶಿವ ಒಲಿಯುತ್ತಾನೆ?

ಶಿವ ಶಿವ ಎಂದರೆ ಭಯವಿಲ್ಲ..ಶಿವನಾಮಕೆ ಸಾಟಿ ಬೇರಿಲ್ಲ ಎಂದು ಶಿವಭಕ್ತರು ಹಾಡುವುದು ಸುಮ್ಮನೇ ಅಲ್ಲ. ಶಿವ ನಮ್ಮನ್ನೆಲ್ಲ ಪೊರೆವ ದೈವ. ಶಿವನೇ ಎಲ್ಲ ಕಾಲಕ್ಕೂ ನಮಗೆ ಅಭಯ ಹಸ್ತ ಚಾಚುವ ಶಕ್ತಿ. ತನ್ನನ್ನು ತಪಸ್ಸು ಮಾಡುವ ಎಲ್ಲಾ ಭಕ್ತರಿಗೂ ಹಿಂದೆಮುಂದೆ ನೋಡದೆ ವರ ಕೊಡುವವ ನಮ್ಮ ಶಂಕರ.

ಶಿವರಾತ್ರಿ ಪರಶಿವ ಹುಟ್ಟಿದ ದಿನ ಎಂದು ಹಲವು ವಿದ್ವಾಂಸರು ಹೇಳುತ್ತಾರೆ. ಇನ್ನು ಕೆಲವರು ಶಿವ ಪಾರ್ವತಿಯ ವಿವಾಹವಾದ ದಿನವೇ ಶಿವರಾತ್ರಿ ಎನ್ನುತ್ತಾರೆ. ಹಾಗಾದರೆ ಶಿವರಾತ್ರಿ ಹಬ್ಬ ಹುಟ್ಟಿದ್ದೇಗೆ? ಅಂದೇ ಏಕೆ ಶಿವನ ಆರಾಧನೆಗೆ ಹೆಚ್ಚು ಪ್ರಾಮುಖ್ಯತೆಯಿದೆ? ನಾಡಿದ್ದು (ಮಾರ್ಚ್ 11) ರಂದೇ ಇರುವ ಶಿವರಾತ್ರಿ ಈ ಎಲ್ಲ ಪ್ರಶ್ನೆಗಳಿಗೆ ಖ್ಯಾತ ವೈದಿಕ ಜ್ಯೋತಿಷಿಗಳಾದ ಜ್ಞಾನೇಶ್ವರ್ ರಾವ್ ಗುರೂಜಿ ಸರಳವಾಗಿ ಉತ್ತರಿಸಿದ್ದಾರೆ.

ಶ್ರೀ ಕ್ಷೇತ್ರ ದುರ್ಗಾಪರಮೇಶ್ವರೀ ಕಟೀಲು ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಶಿವರಾತ್ರಿಯ ಜಾಗರಣೆ ಆ ದಿನ ಶಿವನು ಲೋಕ ಕಲ್ಯಾಣಕ್ಕಾಗಿ ವಿಷವನ್ನು ಆಪೋಶನ ಮಾಡಿದ ದಿನ. ಹಿಂದೆ ದೇವಾಸುರರು ಅಮೃತ ಪಡೆಯಲು ಕ್ಷೀರಸಾಗರ ಮಥನಕ್ಕೆ ಮುಂದಾದರು. ಮಂದರಪರ್ವತ ಕಡಗೋಲಾಯಿತು. ವಾಸುಕಿ ಹಗ್ಗವಾಯಿತು. ಮಥನಕಾರ್ಯ ರಭಸವಾಗಿ ನಡೆದಾಗ ಸರ್ಪವಾದ ವಾಸುಕಿಯ ಬಾಯಿಂದ ವಿಷ ಜ್ವಾಲೆ ಹೊರಬಂದು ಕ್ಷೀರ ಸಾಗರವನ್ನು ವ್ಯಾಪಿಸಿತು. ಅದರ ಬಾಧೆಗೆ ಎಲ್ಲರೂ ಓಡಿ ಹೋದಾಗ ಶಿವನು ತನ್ನ ಅಂಗೈಯಲ್ಲಿ ವಿಷವನ್ನು ಶೇಖರಿಸಿ ಕುಡಿದನು. ಕೂಡಲೇ ಪಾರ್ವತಿ ಮಾತೆ ಶಿವನ ಕಂಠ ಒತ್ತಿ ಹಿಡಿಯಲು ವಿಷವು ಅಲ್ಲಿಯೇ ನಿಂತಿತಂತೆ. ಅಲ್ಲಿಂದ ಶಿವನು ವಿಷಕಂಠ ಅಥವಾ ನೀಲಕಂಠ ಎನಿಸಿದನು. ಆ ದಿನವೇ ಮಾಘ ಕೃಷ್ಣ ಚತುರ್ದಶಿ. ಅಂದಿನಿಂದ ಪ್ರತಿ ವರ್ಷ ಶಿವರಾತ್ರಿಯ ಆಚರಣೆ ಪ್ರಾರಂಭವಾಯಿತು.

ಶಿವರಾತ್ರಿಯ ಜಾಗರಣೆಯಲ್ಲಿ ವಿಜ್ಞಾನವಿದೆ. ವಿಷವನ್ನು ಕುಡಿದರೆ ಅಥವಾ ವಿಷ ಜಂತುಗಳು ಕಚ್ಚಿದರೆ 24 ಗಂಟೆ ಅವರನ್ನು ನಿದ್ರಿಸಲು ಬಿಡುವುದಿಲ್ಲ. ಕಾರಣ ವಿಷವು ದೇಹದಾದ್ಯಂತ ವ್ಯಾಪಿಸಬಾರದು ಎಂದು. ನಿದ್ರಿಸಿದರೆ ವಿಷ ವ್ಯಾಪಿಸಿ ರೋಗಿಯ ಸ್ಥಿತಿ ಚಿಂತಾಜನಕ ಆಗುತ್ತದೆ. ವಿಷ ಶರೀರದಲ್ಲಿ ತಾಪ ಹೆಚ್ಚು ಮಾಡುವುದರಿಂದ ಅದರ ಶಮನಕ್ಕಾಗಿ ಎಳನೀರು, ಹಣ್ಣುಗಳು, ಪಾನಕ ಕೊಡುತ್ತಾರೆ. ಲೋಕ ಕಲ್ಯಾಣಕ್ಕಾಗಿ ನಂಜನುಂಡ ನಂಜುಂಡನನ್ನು ಸ್ಮರಿಸಿ ಸ್ತುತಿಸುವ ಆ ದಿನವೇ ಶಿವರಾತ್ರಿ ಎಂಬ ನಂಬಿಕೆಗಳು ಇವೆ.

Saakshatv astrology Shivaratri

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದಿಂದ ಶಾಸ್ತ್ರೋವಾಗಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ದೂರವಾಣಿ ಸಂಖ್ಯೆ:-call/WhatsApp 85489 98564

ಶಿವರಾತ್ರಿಯಂದು ಶಿವನಿಗೆ ಏನನ್ನು ಅರ್ಪಿಸಬೇಕು?

ಇದೇ ಮಾರ್ಚ್ 11 ರಂದು ಶಿವರಾತ್ರಿಯನ್ನು ಆಚರಿಸುತ್ತೇವೆ. ಶಿವನ ಭಕ್ತರು ದೇಶಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿದ್ದಾರೆ. ಶಿವನನ್ನು ಹಲವು ಹೆಸರಿನಿಂದಲೂ ಕರೆಯಲಾಗುತ್ತದೆ ಶಂಕರ, ಮಂಜುನಾಥ, ವಿಶ್ವನಾಥ, ಭೋಲೆನಾಥ್‌ ಎಂದು ಕರೆಯುತ್ತಾರೆ. ಶಿವರಾತ್ರಿಯ ದಿನ ಶಿವನಿಗೆ ಏನೆಲ್ಲಾ ಅರ್ಪಿಸಿದರೆ ಇಷ್ಟಾರ್ಥ ಪೂರೈಕೆಯಾಗುತ್ತದೆ ಎಂಬ ಮಾಹಿತಿಗಳು ಇಲ್ಲಿವೆ.

ಕರ್ಪೂರ : ಶಿವನಿಗೆ ಕರ್ಪೂರದ ಸುವಾಸನೆ ತುಂಬಾನೆ ಇಷ್ಟ, ಇದರಿಂದ ವಾತಾವರಣ ಶುದ್ಧ ಹಾಗೂ ಪವಿತ್ರವಾಗುತ್ತದೆ. ಪೂಜೆಯ ಸಮಯದಲ್ಲಿ ಇದನ್ನ ಬಳಕೆ ಮಾಡಿದರೆ ಶಿವ ಬೇಗನೆ ಪ್ರಸನ್ನನಾಗುತ್ತಾನೆ.

ನೀರು : ಶಿವನ ಮೇಲೆ ನೀರಿನ ಅಭಿಷೇಕ ಮಾಡುವ ಮಹತ್ವವು ಸಮುದ್ರ ಮಂಥನದ ಕತೆಯೊಂದಿಗೆ ಸೇರಿಕೊಂಡಿದೆ. ವಿಷ ಸೇವನೆ ಮಾಡಿದ ನಂತರ ಶಿವನ ಕಂಠ ನೀಲಿಯಾಗಿತ್ತು. ಆ ಬಿಸಿಯನ್ನ ಕಡಿಮೆ ಮಾಡಲು ದೇವಿ -ದೇವತೆಯರು ಶಿವನಿಗೆ ನೀರನ್ನು ಅರ್ಪಿಸಿದರು.

ಬಿಲ್ವಪತ್ರೆ : ಶಿವನ ಮೂರು ಕಣ್ಣಿನ ಪ್ರತೀಕ ಬಿಲ್ವಪತ್ರೆ. ಆದುದರಿಂದ ಶಿವನಿಗೆ ಬಿಲ್ವಪತ್ರೆಯನ್ನ ಅರ್ಪಿಸಿದರೆ ಉತ್ತಮ.

ಎಕ್ಕದ ಹೂವು : ಶಿವನಿಗೆ ಎಕ್ಕದ ಹೂವು ಅರ್ಪಿಸುವುದು ಎಂದರೆ ಚಿನ್ನ ದಾನ ಮಾಡಿದಷ್ಟು ಶ್ರೇಷ್ಠವಾಗಿದೆ. ಅಷ್ಟೇ ಪುಣ್ಯ ಇದರಿಂದಲೂ ಸಿಗುತ್ತದೆ.

ದತ್ತೂರ : ಶಿವ ಕೈಲಾಸ ಪರ್ವತದಲ್ಲಿ ವಾಸ ಮಾಡುತ್ತಾನೆ ಎಂದು ಹೇಳಲಾಗುತ್ತದೆ. ಆ ಚಳಿಯ ಜಾಗದಲ್ಲಿ ಉತ್ತಮ ಆಹಾರ ಮತ್ತು ಔಷಧಿ ಅತ್ಯಗತ್ಯವಾಗಿದೆ. ಅಂತಹ ಔಷಧೀಯ ಶಕ್ತಿ ದತ್ತೂರದಲ್ಲಿದೆ. ಆದುದರಿಂದ ಇದನ್ನ ಶಿವನಿಗೆ ಅರ್ಪಿಸುವುದು ಉತ್ತಮ ಎನ್ನಲಾಗುತ್ತದೆ.

ಅಕ್ಕಿ : ಅಕ್ಕಿಯನ್ನ ಅಕ್ಷತೆ ಎಂದು ಕರೆಯಲಾಗುತ್ತದೆ. ಇದರ ಬಣ್ಣ ಬೆಳ್ಳಗಿರುತ್ತದೆ. ಅಕ್ಷತೆ ಇರದೆ ಇದ್ದರೆ ಶಿವನ ಪೂಜೆ ಪೂರ್ಣಗೊಳ್ಳುವುದಿಲ್ಲ.

ಶಿವರಾತ್ರಿ ಜಾಗರಣೆಗೆ ಇದೆ ತುಂಬಾ ಮಹತ್ವ

ಉಪವಾಸ ಹಸಿವಾದರಷ್ಟೇ ಆಹಾರಕ್ಕಿರುವ ಬೆಲೆ ಏನೆಂಬುದು ತಿಳಿಯುವದು.

ಹಸಿವು ಸಹಜವಾದ ಜೀವನ ಕ್ರಿಯೆ. ಶರೀರಕ್ಕೆ ಅವಶ್ಯಕವಾದ ಶಕ್ತಿ ನೀಡುವ ಇಂಧನವೇ ಆಹಾರ. ಇದು ಮುಗಿಯುತ್ತಿದ್ದರೆ ವಾಹನ ಎಂತಹ ಸಂಕೇತ ಸೂಚಿಸುತ್ತದೋ ಅದೇ ಪದ್ಧತಿಯಲ್ಲಿ ಹೊಟ್ಟೆಯಲ್ಲಿ ಖಾಲಿ ಆದಾಗ ಆಹಾರಕ್ಕಾಗಿ ಹಸಿವು ಸಂಕೇತಗಳು ಬರುತ್ತವೆ.

ಹೊಟ್ಟೆಯನ್ನು ಖಾಲಿ ಇಡಬೇಡಿರೆಂದು ದೊಡ್ಡವರು ಹೇಳುತ್ತಾರೆ. ಆಹಾರದ ಬಗ್ಗೆ ಇಷ್ಟೊಂದು ಎಚ್ಚರಿಕೆಗಳನ್ನು ಹೇಳಿದ ದೊಡ್ಡವರೇ ಉಪವಾಸ ದೀಕ್ಷೆಯ ಅಗತ್ಯದ ಬಗ್ಗೆ ಹೇಳಿದ್ದಾರೆ. ಒಂದು ವರ್ಷದ ಕಾಲದಲ್ಲಿ ಯಾವ ಯಾವ ಸಮಯದಲ್ಲಿ ಹೇಗೆ ಉಪವಾಸವಿರಬೇಕೆಂಬುದನ್ನು ವಿವರಿಸಿದ್ದಾರೆ.

Saakshatv astrology Shivaratri

ಎಲ್ಲವೂ ಲಭ್ಯವಿದ್ದರೂ, ಯಾವುದನ್ನೂ ಮುಟ್ಟದೇ ಕೂರುವ ಉಪವಾಸ ದೀಕ್ಷೆ ಸಾಕಷ್ಟು ಶಕ್ತಿಯುತವಾದದ್ದು. ಇದರಿಂದ ಯಾವುದನ್ನಾದರೂ ಸಾಧಿಸಬಹುದು ಎಂದು ಆಧ್ಯಾತ್ಮಿಕ ಗ್ರಂಥಗಳು ಹೇಳುತ್ತಿದೆ. ಭಗವಂತನ ಸಾಕ್ಷಾತ್ಕಾರಕ್ಕಾಗಿ ಋಷಿ ಮುನಿಗಳು, ಆಹಾರ, ನೀರು ತ್ಯಜಿಸಿ ತಪಸ್ಸು ಮಾಡಿದ್ದಾರೆಂದು ಹಲವು ಗ್ರಂಥಗಳಲ್ಲಿ ಇದೆ. ಆ ಶಕ್ತಿಗೆ ಮೂರು ಲೋಕಗಳೂ ನಡುಗಿ ತ್ರಿಮೂರ್ತಿಗಳು ಪ್ರತ್ಯಕ್ಷರಾಗುತ್ತಿದ್ದರು ಎಂದು ಪುರಾಣ ಕಥೆಗಳು ಹೇಳುತ್ತವೆ. ಹೀಗಾಗಿ ಶಿವರಾತ್ರಿಯಂದು ಶ್ರದ್ಧಾ ಭಕ್ತಿಯಿಂದ ಆಚರಿಸೋಣ..ಶಿವಕೃಪೆಗೆ ಪ್ರಾಪ್ತರಾಗೋಣ.
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ತರಹದ ಸಮಸ್ಯೆಗಳನ್ನು ನಿವಾರಿಸಲು ಹೇಳಿರುವ ಧಾರ್ಮಿಕ ಆಚರಣೆಗಳು ಅಥವಾ ಕಾರ್ಯಕ್ರಮಗಳನ್ನು ಶಾಸ್ತ್ರೋಕ್ತವಾಗಿ ಮತ್ತು ಉತ್ತಮ ರೀತಿಯಲ್ಲಿ ಕಟೀಲು ಕ್ಷೇತ್ರದಲ್ಲಿ ಮಾಡಿಕೊಡಲಾಗುವುದು.

1. ಪ್ರೇತ ಶಾಪ ವಿಮೋಚನೆ
2. ನಾರಾಯಣ ಬಲಿ
3. ತೃಪಿಂಡಿ ಶ್ರಾದ್ಧ
4. ಆಶ್ಲೇಷ ಬಲಿ
5. ಸರ್ಪ ಸಂಸ್ಕಾರ
6. ಮೃತ್ಯಂಜಯ ಶಾಂತಿ

ಹೀಗೆ ಇತರೇ ಎಲ್ಲ ತರಹದ ಧಾರ್ಮಿಕ ಕಾರ್ಯಕ್ರಮಗ ಳನ್ನು ಶಾಸ್ತ್ರೋಕ್ತವಾಗಿ ಮತ್ತು ವಿವರಣೆ ಸಹಿತವಾಗಿ ಮಾಡಿಸಿ ಕೊಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd