ಚಿಕ್ಕಮಗಳೂರು: ಯುವಕನೊಬ್ಬ ಸೆಲ್ಫಿ ಗೀಳಿಗೆ ಪ್ರಾಣವನ್ನೇ ಕಳೆದುಕೊಂಡಿರುವ ಘಟನೆ ನಡೆದಿದೆ.
ತರೀಕೆರೆಯ (Tarikere) ಹೆಬ್ಬೆ ಜಲಪಾತದ (Hebbe Falls) ಹತ್ತಿರ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕಾಲು ಜಾರಿ ಬಿದ್ದು ಯುವಕ ಸಾವನ್ನಪ್ಪಿದ್ದಾನೆ. ಸಾವನ್ನಪ್ಪಿದ ವ್ಯಕ್ತಿಯನ್ನು ಹೈದರಾಬಾದ್ (Hyderabad) ಮೂಲದ ಶ್ರವಣ್ (25) ಎಂದು ಗುರುತಿಸಲಾಗಿದೆ. ಮೃತ ಶ್ರವಣ್ ತನ್ನ ಸ್ನೇಹಿತನ ಜೊತೆ ಪ್ರವಾಸಕ್ಕೆಂದು ತೆರಳಿದ್ದ. ಈ ವೇಳೆ ಹೆಬ್ಬೆ ಜಲಪಾತದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಕಾಲು ಜಾರಿ ನೀರಿನೊಳಕ್ಕೆ ಬಿದ್ದಿದ್ದಾನೆ.
ಕೂಡಲೇ ಆತನ ಸ್ನೇಹಿತ ಹಾಗೂ ಇತರೆ ಪ್ರವಾಸಿಗರು ಆತನನ್ನ ಮೇಲಕ್ಕೆತ್ತಿದ್ದಾರೆ. ಚಿಕಿತ್ಸೆಗಾಗಿ ತರಿಕೆರೆ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ, ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದರಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.