ರಾಯಚೂರಿಗೆ ವೈಟ್ ಫಂಗಸ್ ಲಗ್ಗೆ : 6 ಜನರಲ್ಲಿ ಫಂಗಸ್ ಪತ್ತೆ

1 min read
white-fungus

ರಾಯಚೂರಿಗೆ ವೈಟ್ ಫಂಗಸ್ ಲಗ್ಗೆ : 6 ಜನರಲ್ಲಿ ಫಂಗಸ್ ಪತ್ತೆ

ರಾಯಚೂರು : ಬ್ಲ್ಯಾಕ್ ಫಂಗಸ್ ಬೆನ್ನಲ್ಲೆ ಜಿಲ್ಲೆಗೆ ವೈಟ್ ಫಂಗಸ್ ಎಂಟ್ರಿ ಕೊಟ್ಟಿದೆ. ಕಳೆದ 15 ದಿನಗಳಲ್ಲಿ 6 ಜನರಲ್ಲಿ ವೈಟ್ ಫಂಗಸ್ ಪತ್ತೆಯಾಗಿದೆ.

ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ನಿಂದ ಗುಣಮುಖರಾದವರಲ್ಲಿ ವೈಟ್ ಫಂಗಸ್ ಪತ್ತೆಯಾಗುತ್ತಿದೆ.

ಎಂಡೋಸ್ಕೋಪಿ ತಜ್ಞ ಡಾ.ಮಂಜುನಾಥ್ ರಿಂದ ಅವರು ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಸೋಂಕಿತರು ಮನೆಯಲ್ಲೇ ಚೇತರಿಸಿಕೊಳ್ಳುತ್ತಿದ್ದಾರೆ.

white-fungus

ಇನ್ನು ವೈಟ್ ಫಂಗಸ್ ಬಗ್ಗೆ ಹೆದರಿಕೊಳ್ಳುವ ಅಗತ್ಯವಿಲ್ಲ.14 ದಿನ ಔಷಧಿ ಕೊಡಲಾಗುತ್ತದೆ, 7 ದಿನಗಳಲ್ಲಿ ಸೋಂಕಿತರು ಗುಣಮುಖರಾಗುತ್ತಾರೆ.

ವೈಟ್ ಫಂಗಸ್ ರಕ್ತಕ್ಕೆ ಸೇರಿದರೆ ಮಾರಣಾಂತಿಕವಾಗುವ ಸಾಧ್ಯತೆಯಿದೆ ಅಷ್ಟೆ. 100 ಜನರಿಗೆ ಸ್ಟಿರೈಡ್ ಕೊಟ್ಟರೆ ಒಬ್ಬರಲ್ಲಿ ಈ ವೈಟ್ ಫಂಗಸ್ ಕಾಣಿಸಿಕೊಳ್ಳುತ್ತದೆ ಎಂದು ಡಾ.ಮಂಜುನಾಥ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd