ADVERTISEMENT
Wednesday, May 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಎಣ್ಣೆ ಮಿನಿಸ್ಟ್ರಿಗೆ `ಕಿಕ್’ಔಟ್: 8 ಶಾಸಕರಿಗೆ ಮಂತ್ರಿ ಭಾಗ್ಯ..ತಡರಾತ್ರಿ ಪಟ್ಟಿ ಫೈನಲ್..?

Kariyappa N by Kariyappa N
January 13, 2021
in Newsbeat, Politics, Samagra karnataka, ರಾಜ್ಯ
Share on FacebookShare on TwitterShare on WhatsappShare on Telegram

Related posts

ಎರಡು ಕ್ಷೇತ್ರಗಳಲ್ಲಿ ವಿಜಯ್ ಗೆಲುವು

ಎರಡು ಕ್ಷೇತ್ರಗಳಲ್ಲಿ ವಿಜಯ್ ಗೆಲುವು

May 5, 2026
ಮೋದಿ ಆಗಮನಕ್ಕೆ ಮಮತಾ ಸಾಮ್ರಾಜ್ಯ ಪತನ: ಬಿಜೆಪಿ ಟೀಕೆ

ಮೋದಿ ಆಗಮನಕ್ಕೆ ಮಮತಾ ಸಾಮ್ರಾಜ್ಯ ಪತನ: ಬಿಜೆಪಿ ಟೀಕೆ

May 5, 2026

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರನೆ ಇಂದು ಸಂಜೆ 3.50ಕ್ಕೆ ನಿಗಧಿಯಾಗಿದ್ದು, ರಾಜಭವನದ ಗಾಜಿನ ಮನೆಯಲ್ಲಿ ನಡೆಯಲಿದೆ.

ಪಂಡಿತ್ ದೈವಜ್ಞ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು  8548998564

ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564

bsy
ಇಂದಿನ ಮುಖ್ಯಮಂತ್ರಿಗಳ ಶೆಡ್ಯೂಲ್‍ನಲ್ಲಿ ಸಂಜೆ 3.50ಕ್ಕೆ ಸಂಪುಟಕ್ಕೆ ಸೇರ್ಪಡೆಯಾಗಲಿರುವ ನೂತನ ಸಚಿವರಿಗೆ ಪ್ರಮಾಣ ವಚನ ಮತ್ತು ಗೋಪ್ಯತೆ ಬೋಧನಾ ಎಂದು ನಮೂದಿಸಲಾಗಿದೆ. ಇದರೊಂದಿಗೆ ಸಚಿವ ಸಂಪುಟ ವಿಸ್ತರಣೆಗೆ ಎದುರಾಗಿದ್ದ ಎಲ್ಲಾ ಅಡ್ಡಿ ಆತಂಕಗಳು ನಿವಾರಣೆಯಾಗಿವೆ. ಆದರೆ, ಸಿಎಂ ಯಡಿಯೂರಪ್ಪ ಅವರ ಸಂಪುಟದಲ್ಲಿ ಯಾರು ಸೇರ್ಪಡೆಯಾಗಲಿದ್ದಾರೆ ಎಂಬುದು ಎಂಬ ಕುತೂಹಲಕ್ಕೆ ತೆರೆ ಬಿದ್ದಿಲ್ಲ.

ತಡರಾತ್ರಿ ನೂತನ ಸಚಿವ ಪಟ್ಟಿ ಬಿಡುಗಡೆ..!
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಂಪುಟ ಸೇರಲಿರುವ ಶಾಸಕರ ಪಟ್ಟಿ ರಾತ್ರಿಯಾದರೂ ಬಿಡುಗಡೆಯಾಗಲಿಲ್ಲ. ಸಂಪುಟ ಸೇರಲಿರುವ ಶಾಸಕರಿಗೆ ಖುದ್ದು ಮುಖ್ಯಮಂತ್ರಿಗಳೇ ದೂರವಾಣಿ ಕರೆ ಮಾಡಿ ಬೆಂಗಳೂರಿಗೆ ಬರುವಂತೆ ಆಹ್ವಾನ ನೀಡಿದ್ದಾರೆ.
ಇದರಲ್ಲಿ ಶಾಸಕ ಉಮೇಶ್ ಕತ್ತಿಗೆ ಮುಖ್ಯಮಂತ್ರಿಗಳು ಖುದ್ದು ಕರೆ ಮಾಡಿರುವುದು ಖಚಿತವಾಗಿದೆ. ಉಳಿದಂತೆ ವಲಸೆ ಶಾಸಕರಲ್ಲಿ ಮುನಿರತ್ನ, ಎಂಟಿಬಿ ನಾಗರಾಜ್, ಆರ್.ಶಂಕರ್ ಸಂಪುಟ ಸೇರುವುದು ಪಕ್ಕಾ ಆಗಿದೆ.
ಇದರ ಜತೆಗೆ ಬಿಜೆಪಿಯ 5 ಶಾಸಕರಿಗೆ ಸಂಪುಟ ಸೇರುವ ಅವಕಾಶ ಸಿಗುವ ಸಾಧ್ಯತೆ ಇದೆ. ಅಬಕಾರಿ ಸಚಿವ ಹೆಚ್.ನಾಗೇಶ್‍ರನ್ನು ಸಂಪುಟದಿಂದ ಕೈಬಿಟ್ಟು, ಮೂಲ ಬಿಜೆಪಿಯ ಐವರು ಶಾಸಕರನ್ನು ಯಡಿಯೂರಪ್ಪ ಅವರು ಕ್ಯಾಬಿನೆಟ್‍ಗೆ ಸೇರಿಸಿಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ತಡರಾತ್ರಿವರೆಗೂ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಶಾಸಕರು ಸಿಎಂ ಯಡಿಯೂರಪ್ಪ ಹಾಗೂ ಹೈಕಮಾಂಡ್ ಮೇಲೆ ಒತ್ತಡ ಹೇರಿ ಲಾಬಿ ಮಾಡುತ್ತಿದ್ದಾರೆ. ಸಂಜೆ ಹೊತ್ತಿಗೆ ಪಟ್ಟಿ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಹೇಳಿಕೆ ನೀಡಿದ್ದರೂ ಈ ರಾತ್ರಿ 11 ಗಂಟೆಯಾದರೂ ಸಚಿವರ ಪಟ್ಟಿ ಬಿಡುಗಡೆಯಾಗಲಿಲ್ಲ. ಹೀಗಾಗಿ ತಡರಾತ್ರಿ ಅಥವಾ ಬೆಳಗ್ಗೆ ನೂತನ ಸಚಿವರ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಂಪುಟ ಸೇರುವ ಸಂಭಾವ್ಯ ಸಚಿವರ ಪಟ್ಟಿ…
ವಲಸೆ ಕೋಟಾ
1. ಮುನಿರತ್ನ-ಆರ್.ಆರ್ ನಗರ
2. ಎಂಟಿಬಿ ನಾಗರಾಜ್-ಎಂಎಲ್‍ಸಿ
3. ಆರ್.ಶಂಕರ್-ಎಂಎಲ್‍ಸಿ

ಮೂಲ ಬಿಜೆಪಿ ಕೋಟಾ
1. ಉಮೇಶ್ ಕತ್ತಿ-ಹುಕ್ಕೇರಿ
2. ಮುರುಗೇಶ್ ನಿರಾಣಿ-ಬೀಳಗಿ
3. ಎಸ್ ಅಂಗಾರ-ಸುಳ್ಯ
4. ಅರವಿಂದ ಲಿಂಬಾವಳಿ/ ಹಾಲಪ್ಪ ಆಚಾರ್
5. ಸಿ.ಪಿ ಯೋಗೇಶ್ವರ್-ಎಂಎಲ್‍ಸಿ
ಆಪರೇಷನ್ ಕಮಲ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಎಂಎಲ್‍ಸಿ ಸಿ.ಪಿ ಯೋಗೇಶ್ವರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಾಗಿ ಸಿಎಂ ಯಡಿಯೂರಪ್ಪ ತಿಂಗಳ ಹಿಂದೆಯೇ ಬಹಿರಂಗ ಹೇಳಿಕೆ ನೀಡಿದ್ದರು. ಆದರೂ, ಸಿ.ಪಿ ಯೋಗೇಶ್ವರ್‍ಗೆ ಸಚಿವ ಸ್ಥಾನ ನೀಡುವ ವಿಚಾರದಲ್ಲಿ ಹಗ್ಗ-ಜಗ್ಗಾಟ ನಡೆದಿರುವ ಹಿನ್ನೆಲೆಯಲ್ಲಿ ಶಾಸಕ ಮುನಿರತ್ನ ಸಂಜೆಯಿಂದ ಯಡಿಯೂರಪ್ಪ ಅವರ ಅಧಿಕೃತ ನಿವಾಸ ಕಾವೇರಿಯಲ್ಲೇ ತಡರಾತ್ರಿವರೆಗೂ ಬೀಡುಬಿಟ್ಟಿದ್ದರು.
ಇನ್ನು ಅರವಿಂದ ಲಿಂಬಾವಳಿ ಹಾಗೂ ಹಾಲಪ್ಪ ಆಚಾರ್ ನಡುವೆ ಪೈಪೋಟಿ ನಡೆದಿದ್ದು, ಹೈಕಮಾಂಡ್ ಯಾರಿಗೆ ಮಣೆ ಹಾಕಲಿದೆ ಎಂದು ಕುತೂಹಲಕ್ಕೆ ಕಾರಣವಾಗಿದೆ.

ಕಿಕ್‍ಔಟ್ ಆಗ್ತಾರಾ ಎಣ್ಣೆ ಮಿನಿಸ್ಟ್ರು..!
ಮದ್ಯ ಮಾರಾಟ ವಿಚಾರದಲ್ಲಿ ಸಚಿವರಾದಂದಿನಿಂದ ವಿವಾದದ ಹೇಳಿಕೆ ಹಾಗೂ ಆತುರದ ನಿರ್ಧಾರ ನೀಡುತ್ತಾ ಸರ್ಕಾರವನ್ನು ಇರಿಸು-ಮುರಿಸು ಮಾಡುತ್ತಿದ್ದ ಅಬಕಾರಿ ಸಚಿವ ಹೆಚ್.ನಾಗೇಶ್ ಅವರನ್ನು ಸಂಪುಟದಿಂದ ಕೈಬಿಡುವುದು ದಟ್ಟವಾಗಿದೆ.

minsiter
ತಮ್ಮನ್ನು ಸಂಪುಟದಿಂದ ಕೈಬಿಡುತ್ತಾರೆಂಬ ಸುದ್ದಿ ತಿಳಿಯುತ್ತಲೇ `ನನ್ನಿಂದಾಗಿಯೇ ಮೈತ್ರಿ ಸರ್ಕಾರ ಉರುಳಿ ಬಿಜೆಪಿ ಸರ್ಕಾರ ಬಂದಿದೆ’ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿ ನಾಗೇಶ್ ಯಡವಟ್ಟು ಮಾಡಿಕೊಂಡಿದ್ದರು.

ಎಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.

ಮಂಗಳವಾರ ಬೆಳಿಗ್ಗೆಯೇ ಸಿಎಂ ಯಡಿಯೂರಪ್ಪ ನಿವಾಸಕ್ಕೆ ದೌಡಾಯಿಸಿದ್ದ ಅಬಕಾರಿ ಸಚಿವ ನಾಗೇಶ್ ನಿರಾಸೆಯಿಂದಲೇ ಹೊರಬಂದಿದ್ದರು. ಮಾಧ್ಯಮಗಳಿಗೆ ಪ್ರತಿಕ್ರಿಯೆಯನ್ನೂ ನೀಡದೇ ಕೋಪದಿಂದಲೇ ಸಿಎಂ ಮನೆಯಿಂದ ಹೊರನಡೆದಿದ್ದರು. ಹೀಗಾಗಿ ನಾಗೇಶ್ ಅವರನ್ನು ಸಂಪುಟದಿಂದ ಕೈಬಿಟ್ಟು ಅರವಿಂದ ಲಿಂಬಾವಳಿ ಅಥವಾ ಹಾಲಪ್ಪ ಆಚಾರ್ ಅವರನ್ನು ಸೇರಿಸಿಕೊಳ್ಳಲು ತಡರಾತ್ರಿವರೆಗೂ ಸುದೀರ್ಘ ಚರ್ಚೆ ನಡೆದಿದೆ. ಕೊನೆ ಗಳಿಗೆಯಲ್ಲಿ ಏನು ಬೇಕಾದರೂ ಬದಲಾವಣೆ ಆಗಬಹುದಾದ ಸಾಧ್ಯತೆ ಹಿನ್ನೆಲೆಯಲ್ಲಿ ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚಿಸಿದೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: BJPBS YeddyurappaCabinet Expansionrajbhavan
ShareTweetSendShare
Join us on:

Related Posts

ಎರಡು ಕ್ಷೇತ್ರಗಳಲ್ಲಿ ವಿಜಯ್ ಗೆಲುವು

ಎರಡು ಕ್ಷೇತ್ರಗಳಲ್ಲಿ ವಿಜಯ್ ಗೆಲುವು

by Shwetha
May 5, 2026
0

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ-ರಾಜಕಾರಣಿ ವಿಜಯ್ ಭಾರೀ ಸಂಚಲನ ಸೃಷ್ಟಿಸಿದ್ದಾರೆ. ಅವರು ಸ್ಪರ್ಧಿಸಿದ ಎರಡು ಕ್ಷೇತ್ರಗಳಾದ ಪೆರಂಬೂರು ಮತ್ತು ತಿರುಚಿ ಈಸ್ಟ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಪೆರಂಬೂರಿನಲ್ಲಿ...

ಮೋದಿ ಆಗಮನಕ್ಕೆ ಮಮತಾ ಸಾಮ್ರಾಜ್ಯ ಪತನ: ಬಿಜೆಪಿ ಟೀಕೆ

ಮೋದಿ ಆಗಮನಕ್ಕೆ ಮಮತಾ ಸಾಮ್ರಾಜ್ಯ ಪತನ: ಬಿಜೆಪಿ ಟೀಕೆ

by Shwetha
May 5, 2026
0

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಗೆಲುವಿನ ಹಿನ್ನೆಲೆ ಭಾರತೀಯ ಜನತಾ ಪಾರ್ಟಿ (BJP) ಪ್ರತಿಕ್ರಿಯೆ ನೀಡಿದೆ. ತೆಲಂಗಾಣ ಬಿಜೆಪಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, ನರೇಂದ್ರ...

ಸಿದ್ದರಾಮಯ್ಯ V/S ಡಿ ಕೆ ಶಿವಕುಮಾರ್ ಹಗ್ಗಜಗ್ಗಾಟಕ್ಕೆ ತಾರ್ಕಿಕ ಅಂತ್ಯ ಹಾಡುತ್ತಾ ಹೈಕಮಾಂಡ್?

ಸಂಪುಟ ಸರ್ಕಸ್ : ಹಳಬರಿಗೆ ಕೊಕ್ ಹೊಸಬರಿಗೆ ಚಾನ್ಸ್ ಕಾಂಗ್ರೆಸ್ ನಾಯಕರ ಎದೆಯಲ್ಲಿ ಢವಢವ ಶುರು ಯಾರು IN ಯಾರು OUT !?

by Shwetha
May 5, 2026
0

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಈಗ ಭಾರಿ ಸಂಚಲನ ಸೃಷ್ಟಿಯಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಮೂರು ವರ್ಷ ತುಂಬುತ್ತಿರುವ ಬೆನ್ನಲ್ಲೇ ಅಧಿಕಾರ ಹಂಚಿಕೆಯ ಸೂತ್ರ ಮತ್ತೆ ಮುನ್ನೆಲೆಗೆ...

ಬಂಗಾಳದಲ್ಲಿ ಕೇಸರಿ ಸುನಾಮಿ: ಮೋದಿಯ ಝಲ್ಮುರಿ ರುಚಿಗೆ ದೀದಿ ಪಡೆ ಕಂಗಾಲು, ಜಾರ್ಗ್ರಾಮ್‌ನ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಜಯ

ಬಂಗಾಳದಲ್ಲಿ ಕೇಸರಿ ಸುನಾಮಿ: ಮೋದಿಯ ಝಲ್ಮುರಿ ರುಚಿಗೆ ದೀದಿ ಪಡೆ ಕಂಗಾಲು, ಜಾರ್ಗ್ರಾಮ್‌ನ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಜಯ

by Shwetha
May 5, 2026
0

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ದಶಕಗಳ ಕಾಲ ತನ್ನದೇ ಆದ ಭದ್ರಕೋಟೆ ಹೊಂದಿದ್ದ ತೃಣಮೂಲ ಕಾಂಗ್ರೆಸ್‌ಗೆ ಬಿಜೆಪಿ ಪ್ರಬಲ ಪೆಟ್ಟು ನೀಡಿದ್ದು,...

ನಿಜವಾಯ್ತು PK ಭವಿಷ್ಯ.. ವಿಜಯ್ ಗೆಲುವು ವಿಡಿಯೋ ವೈರಲ್!

ನಿಜವಾಯ್ತು PK ಭವಿಷ್ಯ.. ವಿಜಯ್ ಗೆಲುವು ವಿಡಿಯೋ ವೈರಲ್!

by Shwetha
May 5, 2026
0

ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ (PK) ನೀಡಿದ್ದ ಭವಿಷ್ಯವಾಣಿ ಇದೀಗ ನಿಜವಾಗಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ವಿಜಯ್ ನೇತೃತ್ವದ ಟಿವಿಕೆ (TVK) ಭರ್ಜರಿ ಗೆಲುವು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram