ನವದೆಹಲಿ: ದೇಶದಲ್ಲಿ ಲೋಕಸಭೆ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರ ಕೊನೆಯ ಬಜೆಟ್ ಮಂಡಿಸಿದ್ದು, ಮತ ಗಳಿಕೆಯತ್ತ ಹೆಚ್ಚಿನ ಗಮನ ಹರಿಸಲಾಗಿದೆ.
ರೈತರು ಮತ್ತು ಬಡವರು, ಮಹಿಳೆಯರು ಮತ್ತು ಯುವಕರ ಮತ ಸೆಳೆಯುವುದಕ್ಕಾಗಿ ಯತ್ನಿಸಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitaraman) ಮಧ್ಯಂತರ ಬಜೆಟ್‌ನಲ್ಲಿ (Union Budget 2024) ಪ್ರವಾಸೋದ್ಯಮ, ವಸತಿ ಹಾಗೂ ನವೀಕರಿಸಬಹುದಾದ ಇಂಧನ ಅಳವಡಿಕೆ ಹೆಚ್ಚಿಸುವ ಕ್ರಮಗಳನ್ನು ಘೋಷಿಸಿದ್ದಾರೆ.
ಮುಂದಿನ ಐದು ವರ್ಷಗಳು ಅಭೂತಪೂರ್ವ ಅಭಿವೃದ್ಧಿಯ ವರ್ಷಗಳು. 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸಲು ಸುವರ್ಣ ಕ್ಷಣಗಳು ಎಂದು ಅವರು ಹೇಳಿದ್ದಾರೆ.
ಕೃಷಿ
ತೈಲ ಬೀಜಗಳ ಮೇಲೆ ಸ್ವಾವಲಂಬನೆ ಹೆಚ್ಚಿಸುವುದರ ಜೊತೆಗೆ ಆಧುನಿಕ ಸಂಗ್ರಹಣೆ ಮತ್ತು ಪೂರೈಕೆ ಸರಪಳಿಗಳು ಸೇರಿದಂತೆ ಖಾಸಗಿ ಮತ್ತು ಸಾರ್ವಜನಿಕ ಹೂಡಿಕೆಗಳನ್ನು ಉತ್ತೇಜಿಸಲು ಯೋಜಿಸಲಾಗುತ್ತಿದೆ.
ಮಧ್ಯಮ ವರ್ಗ
ಬಾಡಿಗೆ ಮನೆಗಳು, ಕೊಳೆಗೇರಿಗಳು ಅಥವಾ ಅನಧಿಕೃತ ಕಾಲೊನಿಗಳಲ್ಲಿ ವಾಸಿಸುವ ಮಧ್ಯಮ ವರ್ಗದವರಿಗೆ ಸ್ವಂತ ಮನೆ ಖರೀದಿಸಲು ಅಥವಾ ನಿರ್ಮಿಸಲು ಹಣಕಾಸಿನ ನೆರವಿಗೆ ಸರ್ಕಾರ ಬದ್ಧವಾಗಿದೆ.
ಪ್ರವಾಸೋದ್ಯಮ
ಪ್ರವಾಸಿ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಮತ್ತು ಜಾಗತಿಕ ಮಟ್ಟದಲ್ಲಿ ಆಕರ್ಷಿಸಲು ಸರ್ಕಾರವು ರಾಜ್ಯಗಳನ್ನು ಉತ್ತೇಜನ ನೀಡಿದೆ. ಪ್ರವಾಸೋದ್ಯಮಕ್ಕಾಗಿ ರಾಜ್ಯಗಳಿಗೆ ದೀರ್ಘಾವಧಿಯ ಬಡ್ಡಿರಹಿತ ಸಾಲ ನೀಡಲಾಗುವುದು ಎಂದು ಘೋಷಿಸಲಾಗಿದೆ.
ಎಲೆಕ್ಟ್ರಿಕ್ ವಾಹನಗಳು
ಸಾರ್ವಜನಿಕ ಚಾರ್ಜಿಂಗ್ ಇನ್ಫ್ರಾವನ್ನು ಅಭಿವೃದ್ಧಿಪಡಿಸುವುದು ಹಾಗೂ ವಿದ್ಯುತ್ ಸಾರಿಗೆ ವ್ಯಾಪಕವಾಗಿ ಅಳವಡಿಸಿಕೊಳ್ಳುವುದು ಸೇರಿದಂತೆ ಹಲವು ವಿಷಯ ಕೇಂದ್ರೀಕರಿಸಿದೆ. ಎಲೆಕ್ಟ್ರಿಕ್ ವಾಹನಗಳ ಮೂಲಕ ಪರಿಸರ ವ್ಯವಸ್ಥೆಯನ್ನು ವಿಸ್ತರಿಸಲು ಮತ್ತು ಬಲಪಡಿಸಲು ಸರ್ಕಾರ ಯೋಜಿಸುತ್ತಿದೆ. ಮಾರ್ಚ್‌ನಲ್ಲಿ ಕೊನೆಗೊಳ್ಳುವ 1.2 ಬಿಲಿಯನ್ ಡಾಲರ್ ಸಬ್ಸಿಡಿ ಕಾರ್ಯಕ್ರಮ
ಆಭರಣ ವ್ಯಾಪಾರಿಗಳು
ಸರ್ಕಾರವು ಚಿನ್ನದ ಮೇಲಿನ ಶೇ. 15ರಷ್ಟು ಆಮದು ತೆರಿಗೆ ಇಳಿಸುವ ಕುರಿತು ಯಾವುದೇ ಪ್ರಸ್ತಾಪ ಮಾಡಿಲ್ಲ. ಹೀಗಾಗಿ ಚಿನ್ನದ ಕಂಪನಿಗಳ ಶೇರು ಮೌಲ್ಯ ಕುಸಿತವಾಗಿವೆ.