ಅಯೋಧ್ಯೆ : ಇದೇ ತಿಂಗಳ 5 ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದೆ. ಶಿಲಾನ್ಯಾಸ ಕಾರ್ಯಕ್ರಮಕ್ಕೆ ಹಳದಿ ಹಿನ್ನೆಲೆ ಬಣ್ಣವನ್ನು ಹೊಂದಿರುವ ಆಮಂತ್ರಣ ಪತ್ರವನ್ನು ಟ್ರಸ್ಟ್ ಸಿದ್ಧಪಡಿಸಿದ್ದು, ರಾಮಜನ್ಮ ಭೂಮಿ ಆಸ್ತಿ ಹಕ್ಕು ಪ್ರಕರಣಕ್ಕೆ ಸಂಬಂಧಿಸಿದಂತೆ ತಕರಾರು ಅರ್ಜಿ ಹಾಕಿದ್ದ ಇಕ್ಬಾಲ್ ಅನ್ಸಾರಿ ಅವರಿಗೆ ಆಹ್ವಾನ ಪತ್ರಿಕೆಯ ಮೊದಲ ಪ್ರತಿ ಸಿಕ್ಕಿದೆ.
ಈ ಬಗ್ಗೆ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣ ಭೂಮಿ ಪೂಜೆ ಮೊದಲ ಆಹ್ವಾನ ನನಗೆ ಸಿಕ್ಕಿದ್ದು ಶ್ರೀರಾಮನ ಇಚ್ಛೆ. ರಾಮಮಂದಿರ ನಿರ್ಮಾಣದಿಂದ ಹೊಸ ಇತಿಹಾಸ ಸೃಷ್ಠಿಯಾಗಲಿದ್ದು, ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ಸಿಗುವ ಭರವಸೆ ಇದೆ. ಶಾಂತಿ, ಸೌಹಾರ್ದತೆಯಿಂದ ಬಾಳಲು ಈ ಮಂದಿರ ನೆರವಾಗಲಿದೆ ಎಂದು ಇಕ್ಬಾಲ್ ಪ್ರತಿಕ್ರಿಯಿಸಿದ್ದಾರೆ.