Friday, March 31, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Saaksha Special Life Style

ಯೋಗ ಗುರು ಸ್ವಾಮಿ ಶಿವಾನಂದರ 125 ವರ್ಷ ದೀರ್ಘಾಯುಷ್ಯದ ಗುಟ್ಟು….

Naveen Kumar B C by Naveen Kumar B C
March 23, 2022
in Life Style, ಜೀವನಶೈಲಿ
Share on FacebookShare on TwitterShare on WhatsappShare on Telegram

ಯೋಗ ಗುರು ಸ್ವಾಮಿ ಶಿವಾನಂದರ 125 ವರ್ಷ ದೀರ್ಘಾಯುಷ್ಯದ ಗುಟ್ಟು….

ನಾವು ಕೂಡ ನಿಮ್ಮಂತೆ 123 ವರ್ಷಗಳವರೆಗೆ ಬದುಕಬಹುದೇ? ಎರಡು ವರ್ಷಗಳ ಹಿಂದೆ ಸಾಕ್ಷ್ಯಚಿತ್ರದ ಚಿತ್ರೀಕರಣಕ್ಕಾಗಿ  ಸ್ವಾಮಿ ಶಿವಾನಂದರನ್ನ ಬೇಟಿಯಾದಾಗ ಕೇಳಲಾದ ಪ್ರಶ್ನೆಯಿದು.  “ಇಲ್ಲ, ಎಂದಿಗೂ ಇಲ್ಲ “ಇದು ಕಲಿಯುಗ್ … ಎಲ್ಲಾ ದುರಾಸೆಗಳು!” ಎಂದು ಸಮಚಿತ್ತದಿಂದ ಪ್ರತಿಕ್ರಿಯಿಸಿದರು. 125 ವರ್ಷ ವಯಸ್ಸಿನಲ್ಲಿ, ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿಯನ್ನ ಪಡೆದ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದಾರೆ… ಸ್ವಾಮಿ ಶಿವಾನಂದರು.

Related posts

health chest

Lifestyle : ಆರೋಗ್ಯಕರ ಜೀವನಶೈಲಿಯ ಪ್ರಯೋಜನಗಳು…!!

March 14, 2023
lifestyle

Good Lifestyle : ಜೀವನಶೈಲಿ ಬದಲಾವಣೆ ಏಕೆ ಮುಖ್ಯ..??

March 13, 2023

125 ವರ್ಷ ವಯಸ್ಸಿನ ಸ್ವಾಮಿ ಶಿವಾನಂದ ಅವರು ಪದ್ಮಶ್ರೀಯನ್ನು ಸ್ವೀಕರಿಸಲು ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‌ನೊಳಗೆ ಬರಿಗಾಲಿನಲ್ಲಿ ಬಂದಾಗ ಸಭಾಂಗಣ ಚಪ್ಪಾಳೆ ಮೂಲಕ ಕರಾಡತನ ಮಾಡಿತು. ಪ್ರಶಸ್ತಿ ಸ್ವೀಕರಿಸುವ ಮುನ್ನ ಅವರು ಪ್ರಧಾನಿ ಮತ್ತು ರಾಷ್ಟ್ರಪತಿಗಳ ಮುಂದೆ ಮಂಡಿಯೂರಿ ನಮಸ್ಕರಿಸಿದರು. 125 ವರ್ಷ ವಯಸ್ಸಿನಲ್ಲಿ ಅವರ ಈ ನಡುವಳಿಕೆ ನೆರದಿದ್ದವರ ಹೃದಯವನ್ನ ಬೆಚ್ಚಗಾಗಿಸಿತು.  ಈ ನಡೆಗೆ ಪ್ರತ್ಯುತ್ತರವಾಗಿ, ಪ್ರಧಾನಿ ಮೋದಿ ಕೂಡ  ನೆಲವನ್ನು ಮುಟ್ಟಿ ನಮಸ್ಕರಿಸಿದರು. ಈ ವೀಡಿಯೋ ಕ್ಲಿಪ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

125 ವರ್ಷ ವಯಸ್ಸಿನ ಯೋಗ ಗುರು ಸ್ವಾಮಿ ಶಿವಾನಂದರ ದೀರ್ಘಾಯುಷ್ಯದ ಸೀಕ್ರೇಟ್ ಏನು ಎನ್ನುವ ಕುತೂಹಲ ನಿಮಗೆಲ್ಲ ಕಾಡಿರುತ್ತೆ ಅದಕ್ಕೆ ಉತ್ತರವನ್ನ ನಾವು ಕೊಡ್ತೀವಿ.

ನೋ ಸೆಕ್ಸ್ ನೋ ಸ್ಪೈಸಿ ಫುಡ್

ಸ್ವಾಮಿ ಶಿವಾನಂದ ಜೀವನ ಶೈಲಿಯೇ ಕಠಿಣಕರವಾದದ್ದು. ಅವರೇ ಹೇಳಿಕೊಂಡಿರುವ ಪ್ರಕಾರ ಅವರ ದೀರ್ಘ ಜೀವನದ ಪ್ರಮುಖ ಗುಟ್ಟು  “ ಲೈಂಗಿಕತೆ ಇಲ್ಲದ ನಿಷ್ಕಲ್ಮಶ ಜೀವನ  ಮಸಾಲೆ ಇಲ್ಲದ ಆಹಾರ ಮತ್ತು ದಿನನಿತ್ಯ ಯೋಗಾಭ್ಯಾಸ. ತನ್ನ ಸುದೀರ್ಘ ಜೀವನಕ್ಕಾಗಿ, ಸನ್ಯಾಸಿ ಮೂರು ವಿಷಯಗಳಿಗೆ ಮನ್ನಣೆ ನೀಡುತ್ತಾನೆ – ಯೋಗ, ಶಿಸ್ತು ಮತ್ತು ಬ್ರಹ್ಮಚರ್ಯ.

ಸ್ವಾಮಿ ಶಿವಾನಂದರು 8 ಆಗಸ್ಟ್ 1896 ರಂದು ಬ್ರಿಟಿಷ್ ಇಂಡಿಯಾದ ಬಂಗಾಳ ಪ್ರೆಸಿಡೆನ್ಸಿಯ ಸಿಲ್ಹೆಟ್ ಜಿಲ್ಲೆಯಲ್ಲಿ (ಈಗ ಬಾಂಗ್ಲಾದೇಶದಲ್ಲಿದೆ) ತೀವ್ರ ಬಡತನದ ಕುಟುಂಬದಲ್ಲಿ ಜನಿಸಿದರು. ಅವರ ಜೀವನವು ಸುಮಾರು 3 ಶತಮಾನಗಳನ್ನು ವ್ಯಾಪಿಸಿದೆ.

ಅವರು ಆರು ವರ್ಷದವರಿದ್ದಾಗ  ಅವರ ತಂದೆ, ತಾಯಿ ಮತ್ತು ಸಹೋದರಿ ಮೂರು ತಿಂಗಳೊಳಗೆ ಸಾವನ್ನಪ್ಪಿಬಿಡುತ್ತಾರೆ.  ಒಬ್ಬಂಟಿಯಾದ ಶಿವಾನಂದರು ಕಾಶಿಗೆ ಪ್ರಯಾಣ ಬೆಳೆಸುತ್ತಾರೆ.  ಗುರು ಓಂಕಾರಾನಂದರ ಬಳಿ ತರಬೇತಿಯನ್ನು ಪಡೆದು ಯೋಗವನ್ನು ಕರಗತ ಮಾಡಿಕೊಳ್ತಾರೆ. ಕಾಶಿಯ ಘಾಟ್‌ಗಳಲ್ಲಿ ಸೇವೆ ಸಲ್ಲಿಸಲು ಶುರು ಮಾಡ್ತಾರೆ.   ಇಂದಿಗೂ, ಅವರು ನಿಯಮಿತ ವ್ಯಾಯಾಮ ಮತ್ತು ಯೋಗಾಸನಗಳಿಂದ ಉತ್ತಮ ಆರೋಗ್ಯವನ್ನ ಕಾಪಾಡಿಕೊಂಡಿದ್ದಾರೆ.

“ನಾನು ಅತ್ಯಂತ ಸರಳ ಮತ್ತು ಶಿಸ್ತಿನ ಜೀವನವನ್ನು ನಡೆಸುತ್ತೇನೆ. ನಾನು ಎಣ್ಣೆ ಮತ್ತು ಮಸಾಲೆಗಳಿಲ್ಲದೆ ಬೇಯಿಸಿದ ಆಹಾರವನ್ನು ಮಾತ್ರ ತಿನ್ನುತ್ತೇನೆ.  ಅಕ್ಕಿ ಮತ್ತು ಬೇಯಿಸಿದ ದಾಲ್ ಅನ್ನು ಒಂದೆರಡು ಹಸಿರು ಮೆಣಸಿನಕಾಯಿಗಳೊಂದಿಗೆ ತಿನ್ನುತ್ತೇನೆ, ”ಎಂದು  ಮಾಧ್ಯಮಗಳೊಡನೆ ಮಾತನಾಡುವಾಗ ತಿಳಿಸಿದರು.

ವಸಾಹತುಶಾಹಿ ಯುಗದಲ್ಲಿ ಜನಿಸಿದ ಗುರುಗಳು ಸರಳ ಜೀವನವನ್ನೆ ಮುಂದುವರೆಸುತ್ತಿದ್ದಾರೆ. ಆಧುನಿಕ ಜೀವನದ ಬದಲಾವಣೆ ಕುರಿತು ಯಾವುದೇ ಒಲವು ಬೆಳಸಿಕೊಂಡಿಲ್ಲ.

ಶಿವಾನಂದರು ನೆಲದ ಮೇಲೆ ಚಾಪೆಯ ಮೇಲೆ ಮಲಗುತ್ತಾರೆ,  ಮರದ ಚಪ್ಪಡಿಯನ್ನು ತಲೆದಿಂಬಾಗಿ ಬಳಸುತ್ತಾರೆ. “ನಾನು ಹಾಲು ಅಥವಾ ಹಣ್ಣುಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸುತ್ತೇನೆ ಏಕೆಂದರೆ ಇವು ಅಲಂಕಾರಿಕ ಆಹಾರಗಳು ಎಂದು ಅವರು ಹೇಳಿದ್ದಾರೆ.

ಕಡು ಬಡತನವನ್ನು ಅನುಭವಿಸಿದ ಶಿವಾನಂದರು ಮಾನವೀಯತೆಯ ಸೇವೆಯನ್ನ ಧ್ಯೇಯವಾಗಿ ತೆಗೆದುಕೊಂಡಿದ್ದಾರೆ. ಅವರು ವಾರಣಾಶಿಯ ಘಾಟ್‌ಗಳಲ್ಲಿ ಯೋಗವನ್ನು ಕಲಿಸುತ್ತಾರೆ.  ಬಡವರು ಮತ್ತು ನಿರ್ಗತಿಕರಿಗೆ ಆಹಾರ ನೀಡುತ್ತಾರೆ. ಮತ್ತು ಕುಷ್ಠರೋಗದಿಂದ ಬಳಲುತ್ತಿರುವ ಸುಮಾರು 600 ಭಿಕ್ಷುಕರಿಗೆ ಊಟ ಮತ್ತು ಇತರ ವಸ್ತುಗಳನ್ನು ವ್ಯವಸ್ಥೆ ಮಾಡುವ ಮೂಲಕ ಅವರ ಉಳಿವಿಗಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Who is Swami Sivananda, the oldest Padma Shri recipient?

Tags: Padma ShriSwami Sivananda
ShareTweetSendShare
Join us on:

Related Posts

health chest

Lifestyle : ಆರೋಗ್ಯಕರ ಜೀವನಶೈಲಿಯ ಪ್ರಯೋಜನಗಳು…!!

by Namratha Rao
March 14, 2023
0

Lifestyle : ಆರೋಗ್ಯಕರ ಜೀವನಶೈಲಿಯ ಪ್ರಯೋಜನಗಳು...!! ಆರೋಗ್ಯಕರ ಜೀವನಶೈಲಿಯನ್ನು ಪ್ರಾರಂಭಿಸುವುದು ಪೌಷ್ಟಿಕ ಆಹಾರಗಳನ್ನು ತಿನ್ನುವುದು, ನಿಯಮಿತ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಮತ್ತು ನಿಮ್ಮ ಮಾನಸಿಕ ಆರೋಗ್ಯಕ್ಕೆ ಆದ್ಯತೆ...

lifestyle

Good Lifestyle : ಜೀವನಶೈಲಿ ಬದಲಾವಣೆ ಏಕೆ ಮುಖ್ಯ..??

by Namratha Rao
March 13, 2023
0

Good Lifestyle : ಜೀವನಶೈಲಿ ಬದಲಾವಣೆ ಏಕೆ ಮುಖ್ಯ..?? ಆರೋಗ್ಯಕರ ಜೀವನಶೈಲಿಯತ್ತ ನಿಮ್ಮ ಪ್ರಯಾಣವು ಸಣ್ಣ ಬದಲಾವಣೆಗಳೊಂದಿಗೆ ಪ್ರಾರಂಭವಾಗುತ್ತದೆ.. ನಿಮ್ಮ ಜೀವನಶೈಲಿ ಉತ್ತಮವಾದಾಗ ನೀವು ಸಕಾರಾತ್ಮಕವಾಗಿ ಯೋಚಿಸುವುದನ್ನ...

mental stress ,. healthy lifestyle , saakshatv

Lifestyle : ಒತ್ತಡವನ್ನು ನಿಯಂತ್ರಿಸಿಕೊಳ್ಳುವುದರಿಂದ ಈ ರೋಗಗಳಿಂದ ಮುಕ್ತರಾಗಬಹುದು..!!

by Namratha Rao
March 12, 2023
0

Lifestyle : ಒತ್ತಡವನ್ನು ನಿಯಂತ್ರಿಸಿಕೊಳ್ಳುವುದರಿಂದ ಈ ರೋಗಗಳಿಂದ ಮುಕ್ತರಾಗಬಹುದು..!! ದೀರ್ಘಕಾಲದ ಒತ್ತಡವು ನಿಮ್ಮ ದೇಹವನ್ನು ಸಾರ್ವಕಾಲಿಕ ಹೋರಾಟದಲ್ಲಿ ಇರಿಸುತ್ತದೆ. ಇದು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ವ್ಯತಿರಿಕ್ತ...

Saakshatv Happy womens day 2021

Women’s Day : ಮಹತ್ವ, ಆಚರಣೆ ಮತ್ತು ನೀವು ತಿಳಿದುಕೊಳ್ಳಬೇಕಾದ ವಿಚಾರಗಳು..!!

by Namratha Rao
March 8, 2023
0

Women's Day : ಮಹತ್ವ, ಆಚರಣೆ ಮತ್ತು ನೀವು ತಿಳಿದುಕೊಳ್ಳಬೇಕಾದ ವಿಚಾರಗಳು..!! ಪ್ರತಿ ವರ್ಷ, ಮಾರ್ಚ್ ಮಹಿಳಾ ಇತಿಹಾಸ ತಿಂಗಳನ್ನು ಗುರುತಿಸುತ್ತದೆ - ಇತಿಹಾಸ ಮತ್ತು ಸಮಕಾಲೀನ...

healthy food , healthy lifestyle

Healthy Lifestyle : ಆರೋಗ್ಯಕರ ಜೀವನಕ್ಕಾಗಿ ನಾಷ್ಟು ಸೇವಿಸಬೇಕು..?

by Namratha Rao
March 6, 2023
0

Healthy Lifestyle :  ಆರೋಗ್ಯಕರ ಜೀವನಕ್ಕಾಗಿ ನಾಷ್ಟು  ಸೇವಿಸಬೇಕು..? ನೀವು ಪ್ರತಿದಿನ ಎಷ್ಟು ಸೇವಿಸಬೇಕು ಎಂಬುದು ನಿಮ್ಮ ತೂಕ, ಲಿಂಗ, ವಯಸ್ಸು, ಚಯಾಪಚಯ ಮತ್ತು ನೀವು ಎಷ್ಟು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Astrology : ಕುಕ್ಕೆ ಸುಬ್ರಹ್ಮಣ್ಯದಲ್ಲಿದೆ ಒಂದು ಅಪರೂಪದ ಗುಹೆ! ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ

Astrology : ಕುಕ್ಕೆ ಸುಬ್ರಹ್ಮಣ್ಯದಲ್ಲಿದೆ ಒಂದು ಅಪರೂಪದ ಗುಹೆ! ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ

March 30, 2023
RAMANA-AVATHARA_

Ramana Avatara : ‘ರಾಮನ ಅವತಾರ’ದಲ್ಲಿ ಕವಲುದಾರಿ ರಿಷಿ….ಯುವ ನಿರ್ದೇಶಕನ ಜೊತೆ ಕೈ ಜೋಡಿಸಿದ ಆಪರೇಷನ್ ಅಲಮೇಲಮ್ಮ ಹೀರೋ….

March 30, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram