“ ಒಮಿಕ್ರಾನ್ ವ್ಯಾಪವಾಗಿ ಹರಡುತ್ತೆ ,ಆದ್ರೂ ಮಾರಕವಲ್ಲ, ಆತಂಕ ಪಡುವ ಅವಶ್ಯಕತೆಯಿಲ್ಲ”..!
ವಿಶ್ವಾದ್ಯಂತ ಜನರನ್ನ ಬಹುವಾಗಿ ಕಾಡ್ತಿರುವ ಒಮಿಕ್ರಾನ್ ತಳಿ ಬಗ್ಗೆ ಜನರಲ್ಲಿ ಆತಂಕ ಹೆಚ್ಚಾಗಿದೆ.. ಒಮಿಕ್ರಾನ್ ನಿಂದ ಜನ ಭಯಭೀತರಾಗಿದ್ದಾರೆ.. ಈ ನಡುವೆ ಈ ಬಗ್ಗೆ ಒಂದು ಸಮಾಧಾನಕರ ಸಂಗತಿ ತಿಳಿಸಿ ಎಚ್ಚರಿಕೆಯನ್ನೂ ನೀಡಿದೆ WHO..
ಹೌದು.. ಕೊರೊನಾ ರೂಪಾಂತರ ತಳಿ ಒಮಿಕ್ರಾನ್ ಅಷ್ಟೊಂದು ಮಾರಕವಲ್ಲ.. ಆದ್ರೆ ಜನಸಮುದಾಯದಲ್ಲಿ ಅತಿ ವೇಗವಾಗಿ ಹರಡುತ್ತದೆ… ಆದ್ರೂ ಮಾರಕವಲ್ಲ, ಹೆಚ್ಚು ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ( WHO) ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.
ರಾಷ್ಟ್ರೀಯ ಮಾಧ್ಯಮದ ಜೊತೆಗೆ ಮಾತನಾಡಿರುವ ಅವರು ಒಮಿಕ್ರಾನ್ ಅಲೆ ವ್ಯಾಪಕವಾಗಿ ಹರಡಬಹುದು. ಇದರಿಂದ ಅನೇಕರು ಬಳಲಬಹುದು. ಆದರೆ ಬಹುತೇಕರು ಮನೆಯಲ್ಲಿಯೇ ಚಿಕಿತ್ಸೆ ಮಾಡಿಕೊಳ್ಳಬಹುದು. ಹೀಗಿದ್ದರೂ ಇದನ್ನು ನಿರ್ಲಕ್ಷಿಸುವ ಹಾಗಿಲ್ಲ ಕೆಲ ಪ್ರಕರಣಗಳಲ್ಲಿ ಮಾತ್ರ ವೈದ್ಯರ ತಪಾಸಣೆ ಅಗತ್ಯ’ ಎಂದು ಹೇಳಿದ್ದಾರೆ.