ಚಿಲ್ಲರೆ ಹಣದುಬ್ಬರ ಶೇ.7ಕ್ಕೆ ಏರಿಕೆ
ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದಾಗಿ ಜುಲೈನಲ್ಲಿ ಶೇ. 6.71 ರಷ್ಟಿದ್ದ ಚಿಲ್ಲರೆ ಹಣದುಬ್ಬರ ಆಗಸ್ಟ್ ನಲ್ಲಿ ಶೇ. 7ಕ್ಕೆ ಏರಿಕೆಯಾಗಿದೆ. ಮೂರು ತಿಂಗಳ ಕುಸಿತದ ನಂತರ, ಚಿಲ್ಲರೆ ಹಣದುಬ್ಬರವು ಆಗಸ್ಟ್ ತಿಂಗಳಿನಲ್ಲಿ ಮತ್ತೊಮ್ಮೆ 7 ಶೇಕಡಾಕ್ಕೆ ಏರಿಕೆಯಾಗಿರುವುದನ್ನ ಸರ್ಕಾರದ ಅಂಕಿ ಅಂಶಗಳು ಸೋಮವಾರ ತಿಳಿಸಿವೆ.
ಗ್ರಾಹಕರ ಬೆಲೆ ಸೂಚ್ಯಂಕ (consumer price index) ಆಧಾರಿತ ಹಣದುಬ್ಬರವು ಸತತ ಎಂಟನೇ ತಿಂಗಳಿಗೆ ರಿಸರ್ವ್ ಬ್ಯಾಂಕ್ನ ಆರಾಮದಾಯಕ ಮಟ್ಟವಾದ ಶೇಕಡಾ 6 ಕ್ಕಿಂತ ಹೆಚ್ಚಿದೆ. ಮಾಹಿತಿಯ ಪ್ರಕಾರ, ಆಹಾರದ ಪದಾರ್ಥಗಳ ಬೆಲೆ ಏರಿಕೆಯಿಂದಾಗಿ ಜುಲೈನಲ್ಲಿ ಶೇ. 6.69 ರಷ್ಟಿದ್ದ ಹಣದುಬ್ಬರ ಆಗಸ್ಟ್ನಲ್ಲಿ ಶೇ.7.62 ರಷ್ಟಾಗಿದೆ.
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಶೇ.3.11 ರಷ್ಟಿತ್ತು. ಆಹಾರ ಪದಾರ್ಥಗಳ ಬೆಲೆಯಲ್ಲಿ ಅಷ್ಟಾಗಿ ಹೆಚ್ಚಳವಾಗದ ಹಿನ್ನೆಲೆಯಲ್ಲಿ ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ. 6.71 ರಷ್ಟಿತ್ತು. ಆದರೆ, ಮತ್ತೆ ಆಗಸ್ಟ್ ನಲ್ಲಿ ಮತ್ತೆ ಏರಿಕೆಯಾಗಿದೆ.