ಜಹಂಗೀರ್ ಹಿಂಸಾಚಾರ – ಕೋರ್ಟ್ ಆದೇಶದ ಹೊರತಾಗಿಯೂ ನಡೆದ ತೆರವು ಕಾರ್ಯಾಚರಣೆ
1 min read
ಜಹಂಗೀರ್ ಹಿಂಸಾಚಾರ – ಕೋರ್ಟ್ ಆದೇಶದ ಹೊರತಾಗಿಯೂ ನಡೆದ ತೆರವು ಕಾರ್ಯಾಚರಣೆ
ಜಹಂಗೀರ್ ಹಿಂಸಾಚಾರ ಪ್ರಕರಣದ ನಂತರ ನವದೆಹಲಿಯ ಜಹಂಗೀರ್ ಪುರಿಯಲ್ಲಿ ಎನ್ ಡಿಎಂಸಿ ನಡೆಸಿದ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಸುಪ್ರೀಂ ಕೋರ್ಟ್ ನ ಆದೇಶದ ಹೊರತಾಗಿಯೂ ಮುಂದುವರೆದಿತ್ತು.
ಸುಪ್ರೀಂ ಕೋರ್ಟ್ ತೆರವು ಕಾರ್ಯಾಚರಣೆಗೆ ತಡೆ ನೀಡಿದ 1.5 ಗಂಟೆಗಳ ಬಳಿಕ ಎನ್ ಡಿಎಂ ಸಿ ತೆರವು ಕಾರ್ಯಾಚರಣೆ ಸ್ಥಗಿತಗೊಂಡಿತು.
ಸುಪ್ರೀಂ ಕೋರ್ಟ್ ಆದೇಶದ ಲಿಖಿತ ಪ್ರತಿ ಸಿಗದ ಕಾರಣಕ್ಕಾಗಿ ಕಾರ್ಯಾಚರಣೆಯನ್ನು 1.5 ಗಂಟೆಗಳ ಬಳಿಕ ಸ್ಥಗಿತಗೊಳಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಕೋರ್ಟ್ ಆದೇಶದ ಲಿಖಿತ ಪ್ರತಿ ಲಭ್ಯವಾದ ಬೆನ್ನಲ್ಲೇ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಳೆಯ ವರೆಗೆ ಯಥಾ ಸ್ಥಿತಿ ಕಾಯ್ದುಕೊಳ್ಳುವಂತೆ ಕೋರ್ಟ್ ಆದೇಶಿಸಿತ್ತು.
ಏಪ್ರಿಲ್ 16 ರಂದು ಹನುಮ ಜಯಂತಿಯಂದು ನಡೆದ ಮೆರವಣಿಗೆಯಲ್ಲಿ ಜಹಾಂಗೀರಪುರಿಯಲ್ಲಿಯೇ ಕಲ್ಲು ತೂರಾಟ ನಡೆದಿತ್ತು. ಅಂದಿನಿಂದ 20ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ. ನಂತರದ ಬೆಳವಣಿಗೆಯಲ್ಲಿ ಎಂಸಿಡಿ ಜಹಾಂಗೀರ್‌ಪುರಿಯಲ್ಲಿರುವ ಅಕ್ರಮ ಅತಿಕ್ರಮ ಕಟ್ಟಡಗಳನ್ನ ನೆಲಸಮ ಮಾಡಲು ನಿರ್ಧಾರ ತೆಗೆದುಕೊಂಡಿತ್ತು. ಇಂದು ಕಾರ್ಯವನ್ನ ಪ್ರಾರಂಭಿಸಿತ್ತು. ಬುಲ್ಡೋಜರ್‌ಗಳು ಸಹ ದೊಡ್ಡ ಪ್ರಮಾಣದಲ್ಲಿ ಅಕ್ರಮ ಕಟ್ಟಡವನ್ನ ನೆಲಸಮ ಮಾಡಿವೆ. . ಅಷ್ಟರಲ್ಲಿ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ತಡೆ ನೀಡಿದ್ದಾರೆ.