Arshdeep Singh | ಅರ್ಷ್ ದೀಪ್ ಸಿಂಗ್ ಗೆ ಏನಾಗಿದೆ ?
ಇಂದೋರ್ ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ 20 ಪಂದ್ಯಕ್ಕಾಗಿ ಟೀಂ ಇಂಡಿಯಾದಲ್ಲಿ ಮೂರು ಬದಲಾವಣೆಗಳನ್ನು ಮಾಡಲಾಗಿತ್ತು.
ಈ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್, ಯುವ ವೇಗಿ ಅರ್ಷ್ ದೀಪ್ ಸಿಂಗ್ ಅವರಿಗೆ ರೆಸ್ಟ್ ನೀಡಿಲಾಗಿತ್ತು.
ಟಾಸ್ ಸಮಯದಲ್ಲಿ ರೋಹಿತ್ ಶರ್ಮಾ ಮಾತನಾಡಿ, ನಾವು ಮೊದಲು ಫೀಲ್ಡಿಂಗ್ ಮಾಡುತ್ತೇವೆ. ಇಂದೋರ್ ಹೈ ಸ್ಕೋರಿಂಗ್ ಗ್ರೌಂಡ್.
ಇನ್ನು ಈ ಮ್ಯಾಚ್ ಗಾಗಿ ನಾವು ಮೂರು ಬದಲಾವಣೆಗಳನ್ನು ಮಾಡಿದ್ದೇವೆ.

ವಿರಾಟ್, ರಾಹುಲ್ ಗೆ ವಿಶ್ರಾಂತಿಗೆ ನೀಡಲಾಗಿದೆ. ಈ ಮ್ಯಾಚ್ ನಲ್ಲಿ ಅರ್ಷ್ ದೀಪ್ ಸಿಂಗ್ ಅವರಿಗೆ ರೆಸ್ಟ್ ನೀಡಲಾಗಿದೆ.
ಅರ್ಷ್ ದೀಪ್ ಸಿಂಗ್ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಆದ್ರೆ ಅವರ ಗಾಯ ಗಂಭೀರವಾದದ್ದು ಅಲ್ಲ.
ಕೇವಲ ಮುನ್ನೆಚ್ಚರಿಕಾ ಕ್ರಮವಾಗಿ ಮಾತ್ರ ಅರ್ಷ್ ದೀಪ್ ಸಿಂಗ್ ವಿಶ್ರಾಂತಿ ನೀಡಲಾಗಿದೆ.
ಈ ಮೂವರ ಬದಲಿಗೆ ಅಯ್ಯರ್, ಉಮೇಶ್, ಸಿರಾಜ್ ಗೆ ಅವಕಾಶ ನೀಡಲಾಗಿತ್ತು.
ಆದ್ರೆ ಈ ಪಂದ್ಯದಲ್ಲಿ ಈ ಮೂವರು ನಿರೀಕ್ಷಿತಮಟ್ಟದ ಪ್ರದರ್ಶನ ನೀಡಲಿಲ್ಲ.
ಬೌಲಿಂಗ್ ನಲ್ಲಿ ಉಮೇಶ್ ಸಾಧಾರಣ ಪ್ರದರ್ಶನ ನೀಡಿದ್ರೆ, ಸಿರಾಜ್ ಮೊದಲ ಎರಡು ಓವರ್ ಗಳಲ್ಲಿ ದುಬಾರಿಯಾದರು. ಅಯ್ಯರ್ ಬ್ಯಾಟಿಂಗ್ ನಲ್ಲಿ ಮಿಂಚಲಿಲ್ಲ.