ವಿರಾಟ್ ಬೆನ್ನು ನೋವು ನಿಜಾನಾ..?
ವಿರಾಟ್ ಬಿಟ್ಟುಕೊಟ್ಟಿದ್ದು ಯಾಕೆ..?
ವಿರಾಟ್ ರಾಜೀನಾಮೆಗೆ ಹಿಂದೆ ದಾದಾ..?
ಇಂಡಿಯನ್ ಕ್ರಿಕೆಟ್ ನಲ್ಲಿ ಕೆಲವು ಪ್ರಶ್ನೆಗಳಿಗೆ ಎಂದಿಗೂ ಉತ್ತರ ಸಿಗುವುದಿಲ್ಲ. ಮುಖ್ಯವಾಗಿ ಕ್ಯಾಪ್ಟನ್ಸಿಗೆ ರಾಜೀನಾಮೆ ನೀಡುವ ವಿಚಾರದಲ್ಲಿ ಉದ್ಭವವಾಗುವ ಪ್ರಶ್ನೆಗಳಿಗೆ ಈವರೆಗೂ ಉತ್ತರ ಸಿಕ್ಕಿಲ್ಲ. ಅದು ಎಂ.ಎಸ್. ಧೋನಿ ವಿಚಾರವಾಗಿರಲಿ, ಈಗಿನ ವಿರಾಟ್ ವಿಚಾರವಾಗಿರಲಿ.. ಇವರು ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದು ಯಾಕೆ ಅನ್ನೋ ಪ್ರಶ್ನೆಗೆ ನಿರ್ದಿಷ್ಟ ಉತ್ತರ ಸಿಕ್ಕಿಲ್ಲ.
2015ರಲ್ಲಿ ಎಂಎಸ್ ಧೋನಿ ಸರಣಿಯ ಮಧ್ಯೆದಲ್ಲಿ ಕ್ಯಾಪ್ಟನ್ಸಿಗೆ ಗುಡ್ ಬೈ ಹೇಳಿದ್ರು. ಸರಣಿಯ ಮಧ್ಯೆದಲ್ಲಿಯೇ ಧೋನಿ ನಾಯಕತ್ವಕ್ಕೆ ಗುಡ್ ಬೈ ಹೇಳೋದಕ್ಕೆ ಕಾರಣವೇನು ಅನ್ನೋದಕ್ಕೆ ಈವರೆಗೂ ಉತ್ತರ ಸಿಕ್ಕಿಲ್ಲ. ಧೋನಿ ವಿದಾಯದ ಹಿಂದೆ ರವಿಶಾಸ್ತ್ರಿ ಇದ್ದಾರೆ ಅನ್ನೋ ಮಾತುಗಳಿವೆ. ಆದ್ರೆ ಅಧಿಕೃತವಲ್ಲ.
ಇನ್ನು ಈಗ ವಿರಾಟ್ ಕೊಹ್ಲಿ ವಿಚಾರಕ್ಕೆ ಬಂದರೂ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದುಕೊಳ್ಳುತ್ತಿವೆ. ಆದ್ರೆ ವಿರಾಟ್ ವಿದಾಯದ ಬಗ್ಗೆ ಮೂರು ಅಂಶಗಳು ಇದೀಗ ಮುನ್ನಲೆಗೆ ಬಂದಿವೆ. ವಿರಾಟ್ ಕೊಹ್ಲಿ ಜೋಹಾನ್ಸ್ ಬರ್ಗ್ ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಿಂದ ದೂರ ಇರಲು ನಿಜವಾಗಿಯೂ ಬೆನ್ನುನೋವೇ ಕಾರಣನಾ..? ಅನ್ನೋ ಒಂದು. ದಕ್ಷಿಣ ಆಫ್ರಿಕಾ ಸರಣಿಗೂ ಮುನ್ನಾ ವಿರಾಟ್ ಕೊಹ್ಲಿ ಪ್ರೆಸ್ ಮೀಟ್ ನಂತರ ದಾದಾ ಕೊಹ್ಲಿಗೆ ಶೋಕಾಸ್ ನೋಟೀಸ್ ನೀಡಲು ಮುಂದಾಗಿದ್ದರು ಎನ್ನೋದು ಎರಡನೇಯದು.
ಕೊನೆಯದಾಗಿ ವಿರಾಟ್ ಕೊಹ್ಲಿ ಸ್ವತಃ ಅವರೇ ಟೆಸ್ಟ್ ಕ್ಯಾಪ್ಟನ್ಸಿಯಿಂದ ಕೆಳಗಿಳಿಯದಿದ್ದರೇ ಬಿಸಿಸಿಐ ಬಿಗ್ ಬಾಸ್ ಗಳೇ ಅವರನ್ನ ಕ್ಯಾಪ್ಟನ್ಸಿಯಿಂದ ವಜಾ ಮಾಡುತ್ತಿದ್ದರಂತೆ. ಈ ಮೂರು ವಿಚಾರಗಳು ಸದ್ಯ ಕ್ರೀಡಾ ಲೋಕದಲ್ಲಿ ಹರಿದಾಡುತ್ತಿವೆ.
ಈಗ ಒಂದೊಂದು ವಿಷಯದ ಬಗ್ಗೆ ಚರ್ಚಿಸೋದಾದರೇ ವಿರಾಟ್ ಕೊಹ್ಲಿಗೆ ನಿಜವಾಗಿಯೂ ಬೆನ್ನು ನೋಸುವ ಕಾಣಿಸಿಕೊಂಡಿತ್ತಾ..? ಯಾಕಂದರೇ ಮೊದಲ ಟೆಸ್ಟ್ ಬಳಿಕ ವಿರಾಟ್ ಕೊಹ್ಲಿ, ಫುಲ್ ಜೋಷ್ ನಲ್ಲಿದ್ದರು. ನೆಟ್ಸ್ ನಲ್ಲಿ ಬೆವರಿಸಿದ್ರು. ಈ ವಿಡಿಯೋಗಳನ್ನು ಅವರು ಹಂಚಿಕೊಂಡಿದ್ದರು. ಇತ್ತ ವಿರಾಟ್ ಕೊಹ್ಲಿ ಪ್ರೆಸ್ ಮೀಟ್ ಬಗ್ಗೆ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ಮಾತನಾಡಿ ವಿರಾಟ್ ವಿರುದ್ಧ ಪರೋಕ್ಷವಾಗಿ ಮಾತಿನ ಚಾಟಿ ಬೀಸಿದ್ದರು. ಇದರಿಂದ ಸಾಮಾನ್ಯವಾಗಿಯೇ ವಿರಾಟ್ ಕೊಹ್ಲಿ ಬೇಸರಗೊಂಡಿದ್ದರು. ಸರಣಿ ಮಧ್ಯೆದಲ್ಲಿ ಈ ರೀತಿ ಮಾತನಾಡುವುದು ಎಷ್ಟು ಸರಿ,,,? ಎಂದು ಇದನ್ನು ಪ್ರಶ್ನಿಸುವಂತೆ ಬೆನ್ನು ನೋವಿನ ಸಮಸ್ಯೆ ಹೇಳಿ ವಿರಾಟ್ ಮ್ಯಾಚ್ ನಿಂದ ದೂರ ಉಳಿದು ಪ್ರೋಟೆಸ್ಟ್ ಮಾಡಿದ್ದರು ಎಂದು ಕೆಲ ವೆಬ್ ಸೈಟ್ ಗಳಲ್ಲಿ ವರದಿಯಾಗಿದೆ.
ಇದಲ್ಲದೇ ಸೌರವ್ ಗಂಗೂಲಿ ವಿರಾಟ್ ಕೊಹ್ಲಿಗೆ ಶೋಕಾಸ್ ನೋಟಿಸ್ ನೀಡಲು ಮುಂದಾಗಿದ್ದು, ಕೂಡ ವಿರಾಟ್ ಕೊಹ್ಲಿಗೆ ಬೇಸರವನ್ನುಂಟು ಮಾಡಿತ್ತು. ಮುಖ್ಯವಾಗಿ ಮೂರು ಮಾದರಿಯ ಕ್ರಿಕೆಟ್ ಗೆ ಒಬ್ಬರೇ ನಾಯಕರಿರಬೇಕು ಅನ್ನೋ ವಾದವೂ ಬಿಸಿಸಿಐನಲ್ಲಿ ಚರ್ಚೆಗೆ ಬಂದಿತ್ತು. ಹೀಗಾಗಿಯೇ ವಿರಾಟ್ ಕೊಹ್ಲಿಯನ್ನು ಟೆಸ್ಟ್ ನಾಯಕತ್ವದಿಂದ ಕೆಳಗಿಳಿಸಲು ಬಿಸಿಸಿಐ ಪ್ಲಾನ್ ಮಾಡಿತ್ತಂತೆ. ಇದನ್ನ ತಿಳಿದೇ ವಿರಾಟ್ ಕೊಹ್ಲಿ ಕೂಡ ಒಬ್ಬ ಸಾಮಾನ್ಯ ಬ್ಯಾಟರ್ ಆಗಿರಲು ಇಷ್ಟ ಪಟ್ಟು ಸ್ವಇಚ್ಛೆಯಿಂದ ಟೆಸ್ಟ್ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ರು ಎಂದು ಹೇಳಲಾಗುತ್ತಿದೆ.
ಆದ್ರೆ ಈ ಮೂರು ಅಂಶಗಳಲ್ಲಿ ಯಾವುದು ಸತ್ಯ, ಯಾವುದೇ ಮಿಥ್ಯ ಅನ್ನೋದು ಯಾರಿಗೂ ಗೊತ್ತಿಲ್ಲ.









