ಅಯ್ಯೋ ಪಾಪ ಕಿವೀಸ್ ಗೆ ಯಾಕೆ ಕಪ್ ಗೆಲ್ಲದಿರುವ ಶಾಪ..?

1 min read
kyle-jamieson saaksha tv

ಅಯ್ಯೋ ಪಾಪಾ ಕಿವೀಸ್ ಗೆ ಯಾಕೆ ಕಪ್ ಗೆಲ್ಲದಿರುವ ಶಾಪ..? Kiwi’s saaksha tv

ನ್ಯೂಜಿಲೆಂಡ್ ವಿಶ್ವಕ್ರಿಕೆಟ್ನಲ್ಲಿ ಎಲ್ಲರೂ ಪ್ರೀತಿಸುವ ತಂಡ. ಗೆಲುವು ಇರಲಿ, ಸೋಲೇ ಇರಲಿ ಅದಕ್ಕೆ ಹೆಚ್ಚು ಮಹತ್ವ ಕೊಡದೆ ಕೇವಲ ಟೀಮ್ ಸ್ಪಿರಿಟ್ ಮತ್ತು ಕ್ರೀಡಾಸ್ಪೂರ್ತಿಯನ್ನು ಎತ್ತಿಹಿಡಿಯುವ ತಂಡವಿದು.

ಯಾವುದೇ ಅಬ್ಬರವಿಲ್ಲ, ಯಾವುದೇ ಚೀರಾಟವಿಲ್ಲ, ಜೊತೆಗ ಕಾಂಟ್ರವರ್ಸಿಯೂ ಇಲ್ಲ. ಆದರೂ ಈ ತಂಡ ಐಸಿಸಿ ಟೂರ್ನಿಯಲ್ಲಿ ಅದರಲ್ಲೂ ನಿಗದಿತ ಓವರುಗಳ ಮಾದರಿಯಲ್ಲಿ ಒಂದೇ ಒಂದು ಟ್ರೋಫಿ ಗೆದ್ದಿಲ್ಲ.

2015- ಏಕದಿನ ವಿಶ್ವಕಪ್ ಫೈನಲ್ ಸೋಲು
ನ್ಯೂಜಿಲೆಂಡ್ ಪಾಲಿಗೆ ಇದು ಮೊತ್ತ ಮೊದಲ ವಿಶ್ವಕಪ್ ಫೈನಲ್ ಪ್ರವೇಶವಾಗಿತ್ತು. ಆದರೂ ನ್ಯೂಜಿಲಂಡ್ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ದೊಡ್ಡ ಅಂತರದಿಂದ ಸೋತಿತ್ತು. ಲೀಗ್ ಹಾಗೂ ಸೆಮಿಫೈನಲ್ನಲ್ಲಿ ಘಟಾನುಘಟಿ ತಂಡಗಳನ್ನು ಮಗುಚಿ ಹಾಕಿದರೂ ಆಸ್ಟ್ರೇಲಿಯಾ ವಿರುದ್ಧ ಮಂಡಿಯೂರಿತ್ತು.

2019- ಏಕದಿನ ವಿಶ್ವಕಪ್ ಫೈನಲ್ ಸೋಲು
ಇದು ನಿಜಕ್ಕೂ ಹಾರ್ಟ್ ಬ್ರೇಕಿಂಗ್ ಫೈನಲ್. ನ್ಯೂಜಿಲೆಂಡ್ ಈ ಪಂದ್ಯದಲ್ಲಿ ಎಲ್ಲವನ್ನೂ ಸರಿಯಾಗಿ ಮಾಡಿತ್ತು. ಆದರೆ ಅದೃಷ್ಟ ಮಾತ್ರ ಕೈ ಹಿಡಿಯಲಿಲ್ಲ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ಟೈ ಮಾಡಿಕೊಂಡಿತ್ತು. ಸೂಪರ್ ಓವರ್ನಲ್ಲೂ ಮ್ಯಾಚ್ ಟೈ. ಆದರೆ ಬೌಂಡರಿ ಕೌಂಟ್ ವಿಚಾರದಲ್ಲಿ ನ್ಯೂಜಿಲೆಂಡ್ ಹಿಂದೆ ಬಿತ್ತು. ಇಂಗ್ಲೆಂಡ್ ಚಾಂಪಿಯನ್ ಆಯಿತು.

Kiwi's saaksha tv

2021- ಟಿ20 ವಿಶ್ವಕಪ್ ಫೈನಲ್ ಸೋಲು
ಈಗ ಟಿ20 ವಿಶ್ವಕಪ್ನ ಫೈನಲ್ ಸೋಲು. ಇಲ್ಲೂ ನ್ಯೂಜಿಲೆಂಡ್ ಆಸ್ಟ್ರೇಲಿಯಾಕ್ಕಿಂತ ಬಲಿಷ್ಠ ಮತ್ತು ಫೆವರೀಟ್ ಆಗಿತ್ತು. ಆದರೆ ಕಿವೀಸ್ ಲೆಕ್ಕಾಚಾರ ನಡೆಯಲಿಲ್ಲ. ಸೋಲು ತಪ್ಪಲಿಲ್ಲ. ರನ್ನರ್ ಅಪ್ ಸ್ಥಾನವೇ ಗಟ್ಟಿಯಾಯಿತು.

ಐಸಿಸಿ ಟೆಸ್ಟ್ ಚಾಂಪಿಯನ್ ಆಗಿರುವ ನ್ಯೂಜಿಲೆಂಡ್ ಏಕದಿನ ಕ್ರಿಕೆಟ್ನಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಮ್ಮೆ ಪ್ರಶಸ್ತಿ ಗೆದ್ದಿತ್ತು. ಇದು ಬಿಟ್ಟರೆ ನ್ಯೂಜಿಲೆಂಡ್ ಐಸಿಸಿಯ ದೊಡ್ಡ ಪ್ರಶಸ್ತಿ ಗೆದ್ದಿಲ್ಲ. ಆದರೆ ಸಾಧನೆ ಮಾತ್ರ ದೊಡ್ಡದಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd