ಸ್ಟ್ರೇಂತ್ ಮತ್ತು ವೀಕ್ ನೆಸ್ ನಡುವಿನ ಫೈಟ್ ಚೆನ್ನಾಗಿತ್ತು – ಟ್ರೆಂಟ್ ಬೌಲ್ಟ್ ಬಗ್ಗೆ ರೋಹಿತ್ ಶರ್ಮಾ ಬಣ್ಣನೆ..!
ನ್ಯೂಜಿಲೆಂಡ್ ನ ವೇಗಿ ಟ್ರೆಂಟ್ ಬೌಲ್ಟ್ ಮತ್ತು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಾರೆ.
ಐಪಿಎಲ್ ನಲ್ಲಿ ಟ್ರೆಂಟ್ ಬೌಲ್ಟ್ ಗೆ ರೋಹಿತ್ ಶರ್ಮಾ ನಾಯಕನಾಗಿರುತ್ತಾರೆ. ಒಂದೇ ತಂಡದ ಪರ ಆಡುವಾಗ ಪರಸ್ಪರ ಮಾತಾಡಿಕೊಂಡು ಗೇಮ್ ಪ್ಲಾನ್ ಮಾಡಿಕೊಂಡಿರುತ್ತಾರೆ.
ಆದ್ರೆ ರಾಷ್ಟ್ರೀಯ ತಂಡದ ಪರ ಆಡುವಾಗ ಮಾತ್ರ ಬದ್ಧ ವೈರಿಗಳಂತೆ ಆಡುತ್ತಿರುತ್ತಾರೆ.
ಇದೀಗ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ರೋಹಿತ್ ಶರ್ಮಾ ಅವರನ್ನು ಪ್ಲಾನ್ ಮಾಡ್ಕೊಂಡೇ ಟ್ರೆಂಟ್ ಬೌಲ್ಟ್ ಅವರು ಔಟ್ ಮಾಡಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ರೋಹಿತ್ ಶರ್ಮಾ, ಟ್ರೆಂಟ್ ಬೌಲ್ಟ್ ಗೆ ನನ್ನ ವೀಕ್ ನೆಸ್ ಗೊತ್ತು. ನನಗೆ ಆತನ ಸಾಮಥ್ಯ ಗೊತ್ತು.
ನಮ್ಮ ನಡುವಿನ ಪೈಪೋಟಿ ಒಳ್ಳೆಯ ರೀತಿಯಲ್ಲಿದೆ. ನಾನು ಯಾವಾಗಲೂ ಬ್ಲಫ್ ಅಂತ ಹೇಳುತ್ತಿರುತ್ತೇನೆ.
ಅದನ್ನೇ ಆತ ಮಾಡಿದ್ದ. ಆತನ ಬೌನ್ಸರ್ ಎಸೆತವನ್ನು ಅರಿತುಕೊಳ್ಳುವಲ್ಲಿ ವಿಫಲನಾದೆ. ಆತನ ಎಸೆತದಲ್ಲಿ ಅಷ್ಟೊಂದು ವೇಗವಿರಲಿಲ್ಲ. ಹೀಗಾಗಿ ಔಟಾದೆ ಎಂದು ಹೇಳಿದ್ದಾರೆ.
ರೋಹಿತ್ ಶರ್ಮಾ ಅವರು ಆಕರ್ಷಕ 48 ರನ್ ದಾಖಲಿಸಿದ್ದರು. ಅಲ್ಲದೆ ಸೂರ್ಯಕುಮಾರ್ ಯಾದವ್ ಜೊತೆ ಸೇರಿಕೊಂಡು ಎರಡನೇ ವಿಕೆಟ್ ಗೆ 59 ರನ್ ಕಲೆ ಹಾಕಿದ್ದರು.
ಇದಕ್ಕು ಮೊದಲು ಕೆ.ಎಲ್. ರಾಹುಲ್ ಮತ್ತು ರೋಹಿತ್ ಶರ್ಮಾ 5.1 ಓವರ್ ಗಳಲ್ಲಿ 50 ರನ್ ಕಲೆ ಹಾಕಿದ್ದರು. ರಾಹುಲ್ 15 ರನ್ ಗಳಿಸಿ ಔಟಾಗಿದ್ರು.
ಸೂರ್ಯಕುಮಾರ್ ಯಾದವ್ ಸ್ಪೋಟಕ ಬ್ಯಾಟಿಂಗ್ ಮೂಲಕ 72 ರನ್ ಸಿಡಿಸಿದ್ದರು.
ಅಂತಿಮವಾಗಿ ಪಂದ್ಯದ ಕೊನೆಯ ಓವರ್ ನ 4ನೇ ಎಸೆತವನ್ನು ರಿಷಬ್ ಪಂತ್ ಬೌಂಡರಿಗಟ್ಟುವ ಮೂಲಕ ತಂಡದ ಗೆಲುವಿನ ರನ್ ದಾಖಲಿಸಿದ್ರು.
ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಮೂರು ಟಿ-20 ಪಂದ್ಯಗಳ ಸರಣಿಯಲ್ಲಿ 1-9ಯಿಂದ ಮುನ್ನಡೆ ಸಾಧಿಸಿದೆ.