ಕತ್ತಲಾದ ಮೇಲೆ ಕಸ ಗುಡಿಸಬಾರದು ಅಂತಾರೆ ಯಾಕೆ..? ವೈಜ್ಞಾನಿಕ ಕಾರಣ ಏನ್ ಗೊತ್ತಾ..?

1 min read

ಕತ್ತಲಾದ ಮೇಲೆ ಕಸ ಗುಡಿಸಬಾರದು ಅಂತಾರೆ ಯಾಕೆ..? ವೈಜ್ಞಾನಿಕ ಕಾರಣ ಏನ್ ಗೊತ್ತಾ..?

ಭಾರತ ಹಾಗೂ ಪ್ರಮುಖ ಕೆಲ ದೇಶಗಳಲ್ಲಿ ಸಾಕಷ್ಟು ಸಂಪ್ರದಾಯ ನೀತಿ ನಿಯಮಾಳಿಗಳನ್ನ ಪಾಲಿಸಿಕೊಂಡು ಬಂದಿದೇವೆ. ಅದನ್ನ ಬಲವಾಗಿ ನಂಬುತ್ತೇವೆ ಕೂಡ. ಅದ್ರಲ್ಲಿ ಒಂದು ಕತ್ತಲಾದ ಮೇಲೆ ಕಸ ಗುಡಿಸಬಾರದು. ಕಾರಣ ನಮ್ಮ ಮನೆಗೆ ಲಕ್ಷ್ಮಿ ಆಗಮನವಾಗುವುದಿಲ್ಲ. ಲಕ್ಷ್ಮಿ ಹೊರಹೋಗುತ್ತಾಳೆ. ಅದು ಒಳ್ಳೆಯದಲ್ಲ. ದರಿದ್ರ ಹೀಗೆಲ್ಲಾ ಇವೆ. ಆದ್ರೆ ನಿಜಕ್ಕೂ ಇದರ ಹಿಂದಿನ ವೈಜ್ಞಾನಿಕ ಕಾರಣಗಳು ಹಲವು ಇವೆ. ಒಂದೊಂದು ರೀತಿ ಯೋಚನೆ ಮಾಡಿದಾಗ ಒಂದೊಂದು ಕಾರಣ ಸಿಗುತ್ವೆ.

ಕಾರಣಗಳು

ಲಕ್ಷ್ಮಿಯನ್ನ ನಾವು ಹಣ , ಒಡವೆ ರೀತಿಯಲ್ಲಿ ಕಾಣ್ತೇವೆ. ಸಹಜವಾಗಿ ಕತ್ತಲಾದ ಬಳಿಕ ಅಕಸ್ಮಾತ್ ಆಗಿ ಕಸ ಗುಡಿಸಿದಾಗ ಒಡವೆ ಅಥವ ದುಡ್ಡು ಬಿದ್ದಿದ್ದರೂ ಕಾಣಿಸುವುದಿಲ್ಲ ಕಸದ ಜೊತೆಗೆ ಹೊರಟು ಹೋಗುತ್ತೆ ಅನ್ನೋದು ನಿಜವಾದ ಕಾರಣ… ಹೀಗಾಗಿ ಕಸ ಗುಡಿಸಬಾರದು ಲಕ್ಷ್ಮಿ ಹೊರಟು ಹೋಗ್ತಾಳೆ ಎನ್ನುತ್ತಾರೆ. ಈಗಿನ ಕಥೆ ಬೇರೆ. ಈಗೆಲ್ಲಾ ಲೈಟ್ಸ್ ಇವೆ. ಆದ್ರೆ ತುಂಬಾ ಹಳೆಯ ಕಾಲದಲ್ಲಿ ದೀಪಗಳಿಂದ ಅಷ್ಟು ಪ್ರಕಾಶಮಾನ ಬೆಳಕು ಸಿಗುತ್ತಿರಲಿಲ್ಲ.. ಈ ರೂಡಿ ಆಗಿನಿಂದಲೇ ಇದ್ದು, ಈಗ ಸಂಪ್ರದಾಯಮಾಗಿದೆ ಅಷ್ಟೇ..

ಮತ್ತೆ ಆಗೆಲ್ಲಾ ಗ್ರಾನೈಟ್ಸ್ ಆಗಲಿ, ಟೈಲ್ಸ್, ಮಾರ್ಬಲ್ಸ್, ಸಿಮೆಂಟ್ ನೆಲಗಳು ಇರುತ್ತಿರಲಿಲ್ಲ. ಬಹುತೇಕ ಮಣ್ಣೆನ ಮನೆಗಳೇ ಇರುತ್ತಿದ್ದ ಕಾರಣ ರಾತ್ರಿ ವೇಳೆ ಕತ್ತಲಲ್ಲಿ ಕಸ ಗುಡಿಸೋವಾಗ, ಇಲಿಗಳು, ಹಾವುಗಳು ವಿಷಕಾರಿ ಜಂತುಗಳು ಕಚ್ಚಬಹುದಾದ ಭೀತಿಯೂ ಇತ್ತು. ಹೀಗಾಗಿ ಮನೆಯ ಅಂಗಳ ಅಥವ ಮನೆಯೊಳಗೆ ಕತ್ತಲಾದ ಬಳಿಕ ಕಸ ಗುಡಿಸಬಾರದು ಎಂದು ಹೇಳಲಾರಂಭಿಸಿದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd