Wild Elephant Attack : ಕಡಬದಲ್ಲಿ ಕಾಡಾನೆ ದಾಳಿಗೆ ಇಬ್ಬರ ಬಲಿ
ಕಡಬದಲ್ಲಿ ಕಾಡಾನೆ ದಾಳಿ : ಇಬ್ಬರ ಸಾವು
21 ವರ್ಷದ ರಂಜಿತಾ , ರಮೇಶ್ ರೈ ಮೃತರು
ದಕ್ಷಿಣ ಕನ್ನಡದ ರೆಂಜಿಲಾಡಿ ಗ್ರಾಮದಲ್ಲಿ ಘಟನೆ
ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ
ರಾಜ್ಯದಲ್ಲಿ ಹೆಚ್ಚುತ್ತಲೇ ಇರುವ ಚಿರತೆ , ಹುಲಿ , ಆನೆ ಹಾವಳಿ
ರಾಜ್ಯದಲ್ಲಿ ದಿನೇ ದಿನೇ ಕಾಡಾನೆ , ಹುಲಿ , ಚಿರತೆಗಳ ಹಾವಳಿ ಹೆಚ್ಚಾಗ್ತಲೇ ಇದೆ.. ಅಲ್ಲಲ್ಲಿ ಕೆಲವರು ಈಗಾಗಲೇ ಜೀವ ಕಳೆದುಕೊಂಡಿದ್ದಾರೆ..
ಇದೀಗ ಕಾಡಾನೆ ದಾಳಿಗೆ ಮತ್ತೆ ಇಬ್ಬರು ಬಲಿಯಾಗಿದ್ದಾರೆ..
ಏಕಾಎಕಿ ಕಾಡಾನೆ ದಾಳಿ ನಡೆಸಿದ ಪರಿಣಾಮ ಿಬ್ಬರು ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡದ ಕಡಬದ ರೆಂಜಿಲಾಡಿ ಗ್ರಾಮದ ನೈಲ ಎಂಬಲ್ಲಿ ನಡೆದಿದೆ.
ಸೋಮವಾರ ಬೆಳಿಗ್ಗೆ 6.30ರ ವೇಳೆಗೆ ಕಾಡಾನೆ ದಾಳಿ ನಡೆಸಿದ್ದು ಯುವತಿ ಸಹಿತ ಇಬ್ಬರು ಮೃತಪಟ್ಟಿದ್ದಾರೆ.
ಪೇರಡ್ಕ ಹಾಲು ಸೊಸೈಟಿಯಲ್ಲಿ ಸಿಬ್ಬಂದಿಯಾಗಿರುವ 21 ವರ್ಷದ ರಂಜಿತಾ ಎಂಬಾಕೆ ಸೋಮವಾರ ಮನೆಯಿಂದ ಹಾಲು ಡೈರಿಗೆ ಕಾಡಂಚಿನ ದಾರಿಯಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ಕಾಣಿಸಿಕೊಂಡಿದ್ದು , ಯುವತಿ ಮೇಲೆ ಏಕಾಏಕಿ ದಾಳಿ ನಡೆಸಿದೆ.
ಬೆಚ್ಚಿ ಬಿದ್ದ ಯುವತಿ ಕೂಗಾಡಿದ್ದು , ಕಿರುಚಾಟ ಕೇಳಿ ಸ್ಥಳೀಯ ನಿವಾಸಿ ರಮೇಶ್ ರೈ ಆಕೆಯ ಸಹಾಯಕ್ಕೆ ಧಾವಿಸಿದ್ದಾರೆ.. ಆದ್ರೆ ಕಾಡಾನೆ ಅವರ ಮೇಲೂ ಕೂಡ ದಾಳಿ ಮಾಡಿದೆ..
ರಮೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.. ಗಂಭೀರವಾಗಿ ಗಾಯಗೊಂಡಿದ್ದ ರಂಜಿತಾ ನೆಲ್ಯಾಡಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
Wild Elephant Attack in kadaba , do died







