H D Kote: ಗ್ರಾಮಕ್ಕೆ ನುಗ್ಗಿ ದಾಂಧಲೇ ನಡಿಸಿದ ಗಜರಾಜ – ಜನರಲ್ಲಿ ಆತಂಕ
ಅಹಾರ ಅರಸಿ ಕಾಡಿನಿಂದ ನಾಡಿಗೆಬಂದಿದ್ ಒಂಟಿ ಸಲಗವೊಂದು ಗ್ರಾಮಕ್ಕೆ ನುಗ್ಗಿ ದಾಂಧಲೇ ನಡೆಸಿ ಜನರಲ್ಲಿ ಆತಂಕ ಹುಟ್ಟಿಸಿರುವ ಘಟನೆ ಹೆಚ ಡಿ ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ನಡೆದಿದೆ.
ವಸತಿ ಪ್ರದೇಶದಲ್ಲಿ ಕಾಡಾನೆ ಸಂಚಾರ ನಡೆಸಿ ಹಲವು ಮನೆಗಳು ಸೇರಿದಂತೆ ಎತ್ತಿನ ಗಾಡಿಯನ್ನು ಜಖಂಗೊಳಿಸಿದೆ. ಒಂಟಿ ಸಲಗದ ಸಂಚಾರ ಕಂಡು ಭಯಭೀತರಾದ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ರು.
ಇನ್ನ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಆನೆಯನ್ನು ಹಿಮ್ಮೆಟ್ಟಿಸಲು ಗಾಳಿಯಲ್ಲಿ ಗುಂಡು ಹಾರಿಸಿ, ಪಟಾಕಿ ಸಿಡಿಸಿದ್ರು. ಹಲವು ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ಆನೆ ಕಾಡು ಸೇರಿದ್ದು, ಒಂಟಿ ಸಲಗದ ಆರ್ಭಟದಿಂದ ಆತಂಕಕ್ಕೆ ಒಳಗಾಗಿದ್ದ ಬೂದನೂರು ಗ್ರಾಮಸ್ಥರು ನಿರಾಳರಾಗಿದ್ದಾರೆ.