ಮೈಸೂರು: ಕೋಣನೂರು , ಚುಂಚನಹಳ್ಳಿ ಕಿರು ಅರಣ್ಯ ಪ್ರದೇಶದಲ್ಲಿ ಮತ್ತೆ ಬೆಂಕಿ ಅನಾಹುತ..!
ಮೈಸೂರು: 2 ತಿಂಗಳಲ್ಲಿ ಸತತ ಆರನೇ ಬಾರಿಗೆ ನಂಜನಗೂಡು ತಾಲೂಕಿನ ಕೋಣನೂರು , ಚುಂಚನಹಳ್ಳಿ ಕಿರು ಅರಣ್ಯ ಪ್ರದೇಶದಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಅಗ್ನಿ ಅವಘಡದಲ್ಲಿ ಹತ್ತಾರು ಎಕರೆ ಅರಣ್ಯ ಪ್ರದೇಶ ಸಂಪೂರ್ಣ ಭಸ್ಮವಾಗಿದ್ದು, ಪ್ರಾಣಿ ಪಕ್ಷಿಗಳು ಪರಾದಾಡುತ್ತಿವೆ.
ಕೋಣನೂರು ಗ್ರಾಮದ ಹೊರವಲಯದಲ್ಲಿರುವ ಕಟ್ಟೆ ಮಹದೇಶ್ವರ ದೇವಸ್ಥಾನದ ಬಳಿಯ ಹಳ್ಳವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಬಳಿಕ ವ್ಯಾಪಕವಾಗಿ ಹಬ್ಬಿದೆ. ಬೆಂಕಿಯಿಂದ ತಪ್ಪಿಸಿಕೊಳ್ಳಲು ಜಿಂಕೆಗಳು ಮತ್ತು ಕೃಷ್ಣ ಮೃಗಗಳ ಪರದಾಡುತ್ತಿವೆ. ಅರಣ್ಯ ಪ್ರದೇಶದಲ್ಲಿದ್ದ ನೀಲಗಿರಿ, ಬೇವು, ಗಂಧದ ಮರಗಳು ಸಹ ಸಂಪೂರ್ಣ ಬೆಂಕಿಗಾಹುತಿಯಾಗಿವೆ. ಇನ್ನೂ ಸ್ಥಳಕ್ಕೆ ತಡವಾಗಿ ಬಂದ ಅರಣ್ಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಅಗ್ನಿಶಾಮಕದಳ ವಾಹಗಳು ಆಗಮಿಸಿದ್ದು, ಸಿಬ್ಬಂದಿ ಬೆಂಕಿನಂದಿಸುವ ಪ್ರಯತ್ನ ನಡೆಸಿದ್ದಾರೆ.
ನೂತನ ಆರ್ಥಿಕ ವರ್ಷದಲ್ಲೇ 400 ಅಂಕ ಜಿಗಿದ ಸೆನ್ಸೆಕ್ಸ್..!
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ : ಮತಗಟ್ಟೆಯಲ್ಲಿ CRPF ಯೋಧನ ಶವ ಪತ್ತೆ..!