T20 Worldcup: ವಿಶ್ವಕಪ್ ನಲ್ಲಿ ಓಪನಿಂಗ್ ಬರ್ತಾರಾ ವಿರಾಟ್ ಕೊಹ್ಲಿ..
ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ಪ್ರಾರಂಭವಾಗುವ T20 ವಿಶ್ವಕಪ್ 2022 ರ ಮೊದಲು, ಟೀಮ್ ಇಂಡಿಯಾ ತನ್ನ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದೆ. ಇದಕ್ಕೂ ಮೊದಲು ಟೀಂ ಇಂಡಿಯಾ ಸೆಪ್ಟೆಂಬರ್ 20 ಮಂಗಳವಾರದಿಂದ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನ ಆಡಲಿದೆ.
ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ತಂಡದ ನಾಯಕ ರೋಹಿತ್ ಶರ್ಮಾ ಮಾಧ್ಯಮದವರ ಪ್ರಶ್ನೆಗೆ ಉತ್ತತರಿಸಿದರು. ಏಷ್ಯಾಕಪ್ ನಲ್ಲಿ ಫಾರ್ಮ ಕಂಡುಕೊಂಡಿರುವ ವಿರಾಟ್ ಕೊಹ್ಲಿ ವರ್ಲ್ಡ್ ಕಪ್ ನಲ್ಲಿ ಓಪನಿಂಗ ಬ್ಯಾಟ್ಸಮನ್ ಆಗಿ ಬರಬಹುದ ಎಂದು ಮಾದ್ಯಮದವರು ರೋಹಿತ್ ಅವರನ್ನ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ವಿರಾಟ ಈ ರೀತಿ ಉತ್ತರ ನೀಡಿದ್ದಾರೆ.
ತಂಡದ ಮೊದಲ ಅಭ್ಯಾಸ ಅವಧಿಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರನ್ನು ವಿರಾಟ್ ಕೊಹ್ಲಿ ಮೆಗಾ ಇವೆಂಟ್ನಲ್ಲಿ ಓಪನಿಂಗ್ ಬರಬಹುದೇ ಎಂದು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ರೋಹಿತ್, “ಟಿ20 ವಿಶ್ವಕಪ್ಗೆ ವಿರಾಟ್ ಕೊಹ್ಲಿ ಖಂಡಿತವಾಗಿಯೂ ನಮಗೆ ಆರಂಭಿಕ ಆಯ್ಕೆಯಾಗಿದೆ ಮತ್ತು ನಾವು ಅದನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳುತ್ತೇವೆ. ಆದರೆ ನಾವು ಮೂರನೇ ಆರಂಭಿಕರನ್ನ ಆಯ್ಕೆ ಮಾಡಿಲ್ಲ. ಅವರು ತಮ್ಮ ಫ್ರಾಂಚೈಸಿ RCB ಗಾಗಿ ಒಪನಿಂಗ್ ಅಲ್ಲಿ ಬರುತ್ತಾರೆ. ಆದ್ದರಿಂದ ಇದು ಖಂಡಿತವಾಗಿಯೂ ನಮಗೆ ಒಂದು ಆಯ್ಕೆಯಾಗಿದೆ.”
ಆದರೂ ಟಿ20 ವಿಶ್ವಕಪ್ನಲ್ಲಿ ಕೆಎಲ್ ರಾಹುಲ್ ಅವರೊಂದಿಗೆ ಓಪನಿಂಗ್ ಮಾಡುವ ಕುರಿತು ಖಚಿತಪಡಿಸಿದ್ದಾರೆ. “ಕೆಎಲ್ ರಾಹುಲ್ ಟಿ 20 ವಿಶ್ವಕಪ್ನಲ್ಲಿ ಓಪನಿಂಗ್ ಆಟಗಾರನಾಗಿ ಬರಲಿದ್ದಾರೆ” ಎಂದು ತಿಳಿಸಿದ್ದಾರೆ.
ಏಷ್ಯಾ ಕಪ್ನಲ್ಲಿ ಕೆಎಲ್ ರಾಹುಲ್ ಹೇಳಿಕೊಳ್ಳುವಂತಹ ಆಟ ಹಾಡಿರಲಿಲ್ಲ. ಅವರ ಬ್ಯಾಟ್ ಬಹುತೇಕ ಮೌನವಾಗಿತ್ತು ಮತ್ತು ಅವರ ಸ್ಟ್ರೈಕ್ರೇಟ್ ಕೂಡ 120 ರ ಆಸುಪಾಸಿನಲ್ಲಿತ್ತು.