ವಿಂಬಲ್ಡನ್ 2021- ಕ್ವಾರ್ಟರ್ ಫೈನಲ್ ಗೆ ಎಂಟ್ರಿಯಾದ ಬಾರ್ಟಿ, ಕೆರ್ಬಾರ್, ಜಾಬ್ಯುರ್..!
ವಿಂಬಲ್ಡನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ನಲ್ಲಿ ಆಸ್ಟ್ರೇಲಿಯಾದ ಆಶ್ಲೇಘ್ ಬಾರ್ಟಿ ಅವರು ಇದೇ ಮೊದಲ ಬಾರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದುಕೊಂಡಿರುವ ಆಶ್ಲೇಘ್ ಬಾರ್ಟಿ ಅವರಿಗೆ ಆಲ್ ಇಂಗ್ಲೆಂಡ್ ಟೆನಿಸ್ ಕ್ಲಬ್ ಅಂಗಣ ಅದೃಷ್ಟದ ತಾಣವಾಗಿರಲಿಲ್ಲ. 2012ರಿಂದ ವಿಂಬಲ್ಡನ್ ಟೂರ್ನಿಯಲ್ಲಿ ಸ್ಪರ್ಧಿಸುತ್ತಿರುವ ಆಶ್ಲೇಘ್ ಬಾರ್ಟಿ ಅವರು ಇದೇ ಮೊದಲ ಬಾರಿ ಎಂಟರ ಘಟ್ಟ ತಲುಪಿದ್ದಾರೆ.
ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಶ್ಲೇಘ್ ಬಾರ್ಟಿ ಅವರು 7-5, 6-3ರಿಂದ ಚೆಕ್ ರಿಪಬ್ಲಿಕ್ ನ ಬಾರ್ಬೊರಾ ಕ್ರೆಜಿಸಿಕೊವಾ ಅವರನ್ನು ಪರಾಭವಗೊಳಿಸಿದ್ರು.
ಮಹಿಳೆಯರ ಇನ್ನೊಂದು ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜರ್ಮನಿಯ ಆಂಜಲಿಕೊ ಕೆರ್ಬಾರ್ ಅವರು 6-4, 6-4ರಿಂದ ಅಮೆರಿಕಾದ ಯುವ ಆಟಗಾರ್ತಿ ಕೊಕೊ ಗೌಫ್ ಅವರನ್ನು ಸೋಲಿಸಿದ್ರು. ಕೆರ್ಬಾರ್ ಅವರ ಅನುಭವದ ಆಟದ ಮುಂದೆ ಕೊಕೊ ಗೌಫ್ ಅವರ ಆಟ ನಡೆಯಲಿಲ್ಲ.
ಹಾಗೇ ಮತ್ತೊಂದು ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎರಡನೇ ಶ್ರೇಯಾಂಕಿತೆ ಆರ್ಯಾನಾ ಸಬಾಲೆಂಕಾ ಅವರು 6-3, 4-6 6-3ರಿಂದ ಎಲೆನಾ ರೈಬಾಂಕಿನಾ ಅವರನ್ನು ಸೋಲಿಸಿದ್ರು. ಸಬಾಲೆಂಕಾ ಕೂಡ ಇದೇ ಮೊದಲ ಬಾರಿ ವಿಂಬಲ್ಡನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ್ದಾರೆ.
ಮತ್ತೊಂದು ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟುನೆಷಿಯಾದ ಒನ್ಸ್ ಜಾಬ್ಯುರ್ ಅವರು 5 -7, 6-1, 6-1ರಿಂದ ಐಗಾ ಸ್ವಿಟೆಕ್ ಅವರನ್ನು ಮಣಿಸಿದ್ರು. ಈ ಮೂಲಕ ವಿಂಬಲ್ಡನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಮೊದಲ ಅರಬ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.