ವಿಂಬಲ್ಡನ್ 2021- ಗಾಯಗೊಂಡ ಆಡ್ರಿಯಾನ್.. ರೋಜರ್ ಫೆಡರರ್ ಗೆ ಪ್ರಯಾಸದ ಗೆಲುವು
ವಿಂಬಲ್ಡನ್ ಟೂರ್ನಿಯ ಪುರುಷರ ಸಿಂಗಲ್ಸ್ ನಲ್ಲಿ ಟೆನಿಸ್ ಮಾಸ್ಟರ್ ರೋಜರ್ ಫೇಡರರ್ ಅವರು ಮುನ್ನಡೆ ಸಾಧಿಸಿದ್ದಾರೆ.
ಮೊದಲ ಸುತ್ತಿನ ಪಂದ್ಯದಲ್ಲಿ ರೋಜರ್ ಫೆಡರರ್ ಅವರಿಗೆ ಫ್ರಾನ್ಸ್ ನ ಆಡ್ರಿಯಾನ್ ಮನಾರಿನೊ ಅವರು ತೀಪ್ರ ಪೈಪೋಟಿ ಒಡ್ಡಿದ್ದರು. ಆದ್ರೆ ನಾಲ್ಕನೇ ಸೆಟ್ ನಲ್ಲಿ ಆಡ್ರಿಯಾನ್ ಅವರು ಗಾಯದಿಂದಾಗಿ ಪಂದ್ಯದಿಂದ ಹೊರನಡೆದ್ರು. ಈ ಮೂಲಕ ಫೆಡರರ್ ಅವರು ಎರಡನೇ ಸುತ್ತು ಪ್ರವೇಶಿಸಿದ್ರು.
ಎಂಟು ಬಾರಿ ವಿಂಬಲ್ಡನ್ ಚಾಂಪಿಯನ್ ಆಗಿರುವ ಫೆಡರರ್ ಅವರು ಮೊದಲ ಸೆಟ್ ಅನ್ನು 6-4ರಿಂದ ಗೆದ್ದುಕೊಂಡ್ರು. ಆದ್ರೆ ಎರಡನೇ ಸೆಟ್ ನಲ್ಲಿ 6-7 ಮತ್ತು ಮೂರನೇ ಸೆಟ್ ನಲ್ಲಿ 3-6ರಿಂದ ಹಿನ್ನಡೆ ಅನುಭವಿಸಿದ್ದರು. ನಾಲ್ಕನೇ ಸೆಟ್ ನಲ್ಲಿ 6-2ರಿಂದ ಫೆಡರರ್ ಮುನ್ನಡೆ ಸಾಧಿಸಿದ್ದರು. ಆಗ ಆಡ್ರಿಯಾನ್ ಅವರು ಗಾಯಗೊಂಡು ಟೂರ್ನಿಯಿಂದಲೇ ಹೊರನಡೆದ್ರು.
ರೋಜರ್ ಫೆಡರರ್ ಅವರು ಸದ್ಯ 20 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ವಿಂಬಲ್ಡನ್ ನಲ್ಲಿ 9ನೇ ಬಾರಿ ಪ್ರಶಸ್ತಿ ಗೆದ್ದು ಹೊಸ ದಾಖಲೆ ಬರೆಯುವ ಉತ್ಸಾಹದಲ್ಲಿದ್ದಾರೆ.
ಪುರುಷರ ಇನ್ನೊಂದು ಸಿಂಗಲ್ಸ್ ನಲ್ಲಿ ನಾಲ್ಕನೇ ಶ್ರೇಯಾಂಕಿತ ಅಲೆಕ್ಸಾಂಡರ್ ಝಿವೆರ್ವ್ ಅವರು 6-3, 6-4, 6-1ರಿಂದ ಡಚ್ ನ ಗ್ರೀಕ್ಸ್ ಪೂರ್ ಅವರನ್ನು ಸೋಲಿಸಿದ್ರು.
ಇನ್ನೊಂದು ಸಿಂಗಲ್ಸ್ ನಲ್ಲಿ ಎರಡನೇ ಶ್ರೇಯಾಂಕಿತ ರಷ್ಯಾದ ಡೇನಿಯಲ್ ಮೆಡ್ವೆಡೇವ್ ಅವರು 6-4, 6-1, 4-6, 7-6ರಿಂದ ಜರ್ಮನಿಯ ಜಾನ್ ಲೆನಾರ್ಡ್ ಸ್ಟಫ್ ಅವರನ್ನು ಪರಾಭವಗೊಳಿಸಿದ್ರು.