ವಿಂಬಲ್ಡನ್ 2021- ಗಾರ್ಬಿನೆ ಮುಗುರುಝಾ ಹೋರಾಟ ಅಂತ್ಯ.. ಪ್ರೀ ಕ್ವಾರ್ಟರ್ ತಲುಪಿದ ಐಗಾ ಸ್ವಿಟೇಕ್, ಸಬಾಲೆಂಕಾ

1 min read
Iga Swiatek wimbledon 2021 saakshatv

ವಿಂಬಲ್ಡನ್ 2021- ಗಾರ್ಬಿನೆ ಮುಗುರುಝಾ ಹೋರಾಟ ಅಂತ್ಯ.. ಪ್ರೀ ಕ್ವಾರ್ಟರ್ ತಲುಪಿದ ಐಗಾ ಸ್ವಿಟೇಕ್, ಸಬಾಲೆಂಕಾ

 Ons Jabeur  wimbledon 2021 saakshatvವಿಂಬಲ್ಡನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ಮಾಜಿ ಚಾಂಪಿಯನ್ ಗಾರ್ಬಿನೆ ಮುಗುರುಝಾ ಅವರು ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಮೂರನೇ ಸುತ್ತಿನಲ್ಲೇ ತನ್ನ ಹೋರಾಟವನ್ನು ಅಂತ್ಯಗೊಳಿಸಿರುವ ಮುಗುರುಝಾ ಭಾರೀ ನಿರಾಸೆ ಅನುಭವಿಸಿದ್ದಾರೆ.
ಮೊದಲ ಸೆಟ್ ನಲ್ಲಿ ಪ್ರಯಾಸದ ಜಯ ಸಾಧಿಸಿದ್ದ ಮುಗುರುಝಾ ಅವರು ತನೆಷಿಯಾದ ಜಾಬ್ಯುರ್ ಅವರ ಅಬ್ಬರ ಆಟದಕ್ಕೆ ತಬ್ಬಿಬ್ಬುಗೊಂಡ್ರು.
ಅಂತಿಮವಾಗಿ ಗಾರ್ಬಿನೆ ಮುಗುರುಝಾ ಅವರು 7-5, 3-6, 2-6ರಿಂದ ಜಾಬ್ಯುರ್ ಅವರಿಗೆ ತಲೆಬಾಗಿದ್ರು. ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಾಬ್ಯುರ್ ಅವರು 2020ರ ಫ್ರೆಂಚ್ ಓಪನ್ ಚಾಂಪಿಯನ್ ಐಗಾ ಸ್ವಿಟೆಕ್ ವಿರುದ್ಧ ಆಡಲಿದ್ದಾರೆ.
Aryna Sabalenka wimbledon 2021 saakshatvಮಹಿಳೆಯರ ಇನ್ನೊಂದು ಸಿಂಗಲ್ಸ್ ನಲ್ಲಿ ಪೊಲೆಂಡ್ ನ ಐಗಾ ಸ್ವಿಟೆಕ್ ಅವರು 6-1, 6-0ಯಿಂದ ರೊಮಾನಿಯಾದ ಕಾಮೆಲಿಯಾ ಬೆಗ್ಯು ಅವರನ್ನು ಸೋಲಿಸಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ರು.
ಹಾಗೇ ರಷ್ಯಾದ ಲುಡ್ಮಿಲ್ಲಾ ಸಾಮ್ಸೊನೊವ ಅವರು 6-2, 2-6, 6-4ರಿಂದ ಅಮೆರಿಕಾದ ಸ್ಲೊಯಾನ್ ಸ್ಟೇಫೆನ್ಸ್ ಅವರನ್ನು ಸೋಲಿಸಿ ನಾಲ್ಕನೇ ಸುತ್ತು ಪ್ರವೇಶಿಸಿದ್ರು.
ಇನ್ನು ಎರಡನೇ ಶ್ರೇಯಾಂಕಿತೆ ಆರ್ಯಾನ್ ಸಬಾಲೆಂಕಾ 6-0, 6-3ರಿಂದ ಕೊಲಂಬಿಯಾದ ಮರಿಯಾ ಕ್ಯಾಮಿಲಿ ವಿರುದ್ಧ ಸುಲಭವಾಗಿ ಗೆಲುವು ದಾಖಲಿಸಿ ನಾಲ್ಕನೇ ಸುತ್ತು ತಲುಪಿದ್ದಾರೆ.
ಮೂರನೇ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಚೆಕ್ ಗಣರಾಜ್ಯದ ಕಾರೊಲಿನಾ ಪ್ಲಿಸ್ಕೋವಾ 6-3, 6-3ರಿಂದ ಚೆಕ್ ಗಣರಾಜ್ಯದ ಟೆರೆಝಾ ಮಾರ್ಟಿನ್ ಕೊವಾ ಅವರನ್ನು ಮಣಿಸಿದ್ರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd