ವಿಂಬಲ್ಡನ್ ಟೂರ್ನಿ-ಸುಲಭ ಜಯದೊಂದಿಗೆ ಮೂರನೇ ಸುತ್ತು ಪ್ರವೇಶಿಸಿದ ನೊವಾಕ್ ಜಾಕೊವಿಕ್
ವಿಶ್ವ ನಂಬರ್ ವನ್ ಆಟಗಾರ ಸರ್ಬಿಯಾದ ನೊವಾಕ್ ಜಾಕೊವಿಕ್ ಅವರು ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ನಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ.
ಎರಡನೇ ಸುತ್ತಿನ ಪಂದ್ಯದಲ್ಲಿ ನೊವಾಕ್ ಜಾಕೊವಿಕ್ ಅವರು 6-3, 6-3, 6-3ರಿಂದ ದಕ್ಷಿಣ ಆಫ್ರಿಕಾದ ಕೆವಿನ್ ಆಂಡರ್ಸನ್ ಅವರನ್ನು ನೇರ ಸೆಟ್ ಗಳಿಂದ ಮಣಿಸಿದ್ರು.
ಎರಡು ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಟೂರ್ನಿಯಲ್ಲಿ ರನ್ನರ್ ಅಪ್ ಗೆದ್ದಿದ್ದ ಕೇವಿನ್ ಆಂಡರ್ಸನ್ ಅವರು 2018ರ ವಿಂಬಲ್ಡನ್ ಫೈನಲ್ ನಲ್ಲಿ ನೊವಾಕ್ ಜಾಕೊವಿಕ್ ಅವರಿಗೆ ಸವಾಲು ಹಾಕಿದ್ದರು. ಆದ್ರೆ ಈ ಬಾರಿ ಎರಡನೇ ಸುತ್ತಿನಲ್ಲಿ ಇವರಿಬ್ಬರು ಹೋರಾಟ ನಡೆಸಿದ್ರು. ನೊವಾಕ್ ಜಾಕೊವಿಕ್ ಪಂದ್ಯದ ಯಾವುದೇ ಹಂತದಲ್ಲೂ ಕೇವಿನ್ ಆಂಡರ್ಸನ್ ಅವರಿಗೆ ಮೇಲುಗೈ ಸಾಧಿಸಲು ಅವಕಾಶವನ್ನೇ ನೀಡಲಿಲ್ಲ. 20ನೇ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ನೊವಾಕ್ ಜಾಕೊವಿಕ್, ಫೆಡರರ್ ಮತ್ತು ನಡಾಲ್ ಅವರ ದಾಖಲೆಯನ್ನು ಸಮಗೊಳಿಸುವತ್ತ ಚಿತ್ತವನ್ನಿಟ್ಟಿದ್ದಾರೆ.
ಸ್ಥಗಿತಗೊಂಡಿದ್ದ ಪುರುಷರ ಸಿಂಗಲ್ಸ್ ಪಂದ್ಯದ ಮೊದಲ ಸುತ್ತಿನಲ್ಲಿ ಆಸ್ಟ್ರೇಲಿಯಾ ನಿಕ್ ಕೈರ್ಗಿಸೊ ಅವರು 6-4, 4-6, 3-6, 6-1, 9-7ರಿಂದ ಯುಗೊ ಹಾಂಬರ್ಟ್ ಅವರನ್ನು ಪರಾಭವಗೊಳಿಸಿ ಎರಡನೇ ಸುತ್ತು ಪ್ರವೇಶಿಸಿದ್ರು.
ಇನ್ನು ಏಳನೇ ಶ್ರೇಯಾಂಕಿತ ಇಟಲಿಯ ಮಾಟೆಯೊ ಬಾರ್ಟಿನಿ ಅವರು 6-4, 3-6, 6-4, 6-0ಯಿಂದ ಅರ್ಜೆಂಟಿನಾದ ಗ್ಯುಡೊ ಪೆಲ್ಲಾ ಅವರನ್ನು ಸೋಲಿಸಿ ಮುಂದಿನ ಹಂತ ತಲುಪಿದ್ದಾರೆ.