ವಿಂಬಲ್ಡನ್ 2021- ಕ್ವಾರ್ಟರ್ ಫೈನಲ್ ಪ್ರವೇಶಿಸಿದ ನೊವಾಕ್ ಜಾಕೊವಿಕ್

1 min read

ವಿಂಬಲ್ಡನ್ 2021- ಕ್ವಾರ್ಟರ್ ಫೈನಲ್ ಪ್ರವೇಶಿಸಿದ ನೊವಾಕ್ ಜಾಕೊವಿಕ್

Wimbledon 2021 saakshatv Novak Djokovic2021ರ ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ನಲ್ಲಿ ವಿಶ್ವದ ನಂಬರ್ ವನ್ ಆಟಗಾರ ಸರ್ಬಿಯಾ ನೊವಾಕ್ ಜಾಕೊವಿಕ್ ಅವರು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಆಲ್ ಇಂಗ್ಲೆಂಡ್ ಕ್ಲಬ್ ನ ಹುಲ್ಲು ಹಾಸಿನ ಅಂಗಣದಲ್ಲಿ ನಡೆದ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನೊವಾಕ್ ಜಾಕೊವಿಕ್ ಅವರು 6-2, 6-4, 6-2ರಿಂದ ಚಿಲಿಯ ಕ್ರಿಸ್ಟಿಯಾನ್ ಗಾರಿನ್ ಅವರನ್ನು ನೇರ ಸೆಟ್ ಗಳಿಂದ ಸೋಲಿಸಿದ್ರು. ಈ ಗೆಲುವಿನೊಂದಿಗೆ ಜಾಕೊವಿಕ್ ಅವರು 50ನೇ ಗ್ರ್ಯಾಂಡ್ ಸ್ಲ್ಯಾಂ ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ್ದಾರೆ. ಕ್ವಾರ್ಟರ್ ಫೈನಲ್ ನಲ್ಲಿ ನೊವಾಕ್ ಜಾಕೊವಿಕ್ ಮತ್ತು ಐದನೇ ಶ್ರೇಯಾಂಕಿತ ರಷ್ಯಾದ ಆಂಡ್ರೆ ರುಬ್ಲೇವ್ ಕಾದಾಟ ನಡೆಸಲಿದ್ದಾರೆ.
ಪ್ರೀ ಕ್ವಾರ್ಟರ್ ಫೈನಲ್ ನ ಇನ್ನೊಂದು ಪಂದ್ಯದಲ್ಲಿ ಕೆನಡಾದ ಡೆನಿಸ್ ಶಪೊವಾಲ್ಲೊವ್ ಅವರು 6-1, 6-3, 7-5ರಿಂದ ಎಂಟನೇ ಶ್ರೇಯಾಂಕಿತ ರಾಬರ್ಟ್ ಬೌಟಿಸ್ಟಾ ಅವರನ್ನು ಸೋಲಿಸಿದ್ರು.
ಹಾಗೇ ರಷ್ಯಾದ ಕರೇನ್ ಖಚ್ನೊವಾ ಅರವು 3-6, 6-4, 6-3, 5-7, 10-8ರಿಂದ ಅಮೆರಿಕಾದ ಸೆಬಾಸ್ಟಿಯನ್ ಕಾರ್ಡಾ ಅವರನ್ನು ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಇನ್ನೊಂದೆಡೆ ಇಟಲಿಯ ಮ್ಯಾಟೊ ಬೆರರ್ಟಿನಿ ಅವರು ಕೂಡ 6-4, 6-3, 6-1ರಿಂದ ಐವಾ ಇವಾಸ್ಕಾ ಅವರನ್ನು ಪರಾಭವಗೊಳಿಸಿದ್ರು. ಇದರೊಂದಿಗೆ ಇಟಲಿಯ ಆಟಗಾರನೊಬ್ಬ 23 ವರ್ಷಗಳ ಬಳಿಕ ವಿಂಬಲ್ಡನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದಂತಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd