ವಿಂಬಲ್ಡನ್ 2021 – ಮಿಕ್ಸೆಡ್ ಡಬಲ್ಸ್ ನಲ್ಲಿ ರೋಹಣ್ ಬೋಪಣ್ಣ – ಸಾನಿಯಾ ಮಿರ್ಜಾಗೆ ಸೋಲು
ವಿಂಬಲ್ಡನ್ ಟೆನಿಸ್ ಟೂರ್ನಿಯ ಮಿಕ್ಸೆಡ್ ಡಬಲ್ಸ್ ನಲ್ಲಿ ಭಾರತದ ರೋಹಣ್ ಬೋಪಣ್ಣ ಮತ್ತು ಸಾನಿಯಾ ಮಿರ್ಜಾ ಅವರ ಹೋರಾಟ ಅಂತ್ಯಗೊಂಡಿದೆ.
ಮೂರನೇ ಸುತ್ತಿನ ಪಂದ್ಯದಲ್ಲಿ ರೋಹಣ್ ಬೋಪಣ್ಣ ಅದ್ಭುತ ಆಟವನ್ನಾಡಿದ್ರು.
ಅದ್ರೆ ಸಾನಿಯಾ ಮಿರ್ಜಾ ನಿರೀಕ್ಷಿತ ಆಟವನ್ನು ಆಡಲಿಲ್ಲ. ತನ್ನ ನೈಜ ಆಟವನ್ನಾಡಲು ಸಾನಿಯಾ ಮಿರ್ಜಾ ವಿಫಲರಾದ್ರು. ಹೀಗಾಗಿ ಸಾನಿಯಾ ಮಿರ್ಜಾ ಮತ್ತು ರೋಹಣ್ ಬೋಪಣ್ಣ ಅವರು 6-3, 3-6, 11-9ರಿಂದ 14ನೇ ಶ್ರೇಯಾಂಕಿತ ಜೀನ್ ಜುಲೇನ್ ಮತ್ತು ಆಂಡ್ರೇಜಾ ಕೆಲ್ಪಕ್ ವಿರುದ್ಧ ಸೋಲು ಅನುಭವಿಸಿದ್ರು.
ಈ ಸೋಲಿನೊಂದಿಗೆ ಈ ಬಾರಿಯ ವಿಂಬಲ್ಡನ್ ಟೂರ್ನಿಯಲ್ಲಿ ಭಾರತದ ಹೋರಾಟ ಕೊನೆಗೊಂಡಿದೆ. ಸಾನಿಯಾ ಮಿರ್ಜಾ ಅವರು ಮುಂಬರುವ ಟೋಕಿಯೋ ಒಲಿಂಪಿಕ್ಸ್ ನ ಗೇಮ್ಸ್ ನ ಮಹಿಳಾ ಡಬಲ್ಸ್ ನಲ್ಲಿ ಅಂಕಿತಾ ರೈನಾ ಜೊತೆಗೂಡಿ ಸಾನಿಯಾ ಮಿರ್ಜಾ ಆಡಲಿದ್ದಾರೆ.








