ಬುಲ್ಲಿ ಬಾಯಿ ಆ್ಯಪ್ ಪ್ರಕರಣ – ನಾಲ್ಕನೇ ಆರೋಪಿ ಬಂಧನ

1 min read

ಬುಲ್ಲಿ ಬಾಯಿ ಆ್ಯಪ್ ಪ್ರಕರಣ – ನಾಲ್ಕನೇ ಆರೋಪಿ ಬಂಧನ

ಬುಲ್ಲಿ ಬಾಯಿ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮತ್ತೊಬ್ಬ ಆರೋಪಿಯನ್ನ ಬಂಧಿಸಿಲಾಗಿದೆ.  ಅಸ್ಸಾಂನ ಜೋರ್ಹತ್‌ನ ಎರಡನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ನೂರಾರು ಮುಸ್ಲಿಂ ಮಹಿಳೆಯರನ್ನು ‘ಹರಾಜಿಗೆ’ ಪಟ್ಟಿ ಮಾಡಿದ್ದ ಬುಲ್ಲಿ ಬಾಯಿ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದಿಸಲಾಗಿದೆ.  ಒಟ್ಟು ನಾಲ್ವರು ಆರೋಪಿಗಳು ಅರೆಸ್ಟ್ ಮಾಡಿದ್ದು, ನಾಲ್ವರೂ ವಿದ್ಯಾರ್ಥಿಗಳು 20 ವರ್ಷದೊಳಗಿನವರಾಗಿದ್ದಾರೆ.

  1. ಗುರುವಾರ ಬಂಧಿತರಾದ ನೀರಜ್ ಬಿಷ್ಣೋಯ್ ಅವರು ಪ್ರಕರಣದ ಪ್ರಮುಖ ಸಂಚುಕೋರರಾಗಿದ್ದಾರೆ. ಭೋಪಾಲ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಜೋರ್ಹತ್‌ನ ನಿವಾಸಿ ಬಿಷ್ಣೋಯ್ ಅವರು ಗಿಟ್‌ಹಬ್‌ನಲ್ಲಿ “ಬುಲ್ಲಿ ಬಾಯಿ” ಅಪ್ಲಿಕೇಶನ್‌ನ ಸೃಷ್ಟಿಕರ್ತರಾಗಿದ್ದಾರೆ ಮತ್ತು “ಬುಲ್ಲಿ ಬಾಯಿ” ನ ಮುಖ್ಯ ಟ್ವಿಟರ್ ಖಾತೆದಾರರಾಗಿದ್ದಾರೆ. ಬಿಷ್ಣೋಯ್ ಮಧ್ಯಪ್ರದೇಶದ ರಾಜಧಾನಿ ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎರಡನೇ ವರ್ಷದ ಬಿ.ಟೆಕ್ ವಿದ್ಯಾರ್ಥಿ.
  2. ಉತ್ತರಾಖಂಡದಿಂದ ಬಂಧಿತರಾಗಿರುವ 19 ವರ್ಷದ ಯುವತಿ ಶ್ವೇತಾ ಸಿಂಗ್ ಪ್ರಕರಣದ ಮತ್ತೊಬ್ಬ ಮಾಸ್ಟರ್ ಮೈಂಡ್ ಎಂದು ಹೇಳಲಾಗಿದೆ. ತನ್ನ 12 ನೇ ತರಗತಿಯ ನಂತರ ಅವಳು ಎಂಜಿನಿಯರಿಂಗ್ ಕೋರ್ಸ್ ಅನ್ನು ಮುಂದುವರಿಸಲು ಯೋಜಿಸುತ್ತಿದ್ದಾಳೆ ಎಂದು ವರದಿಗಳು ತಿಳಿಸಿವೆ. ಅವಳು ಇತ್ತೀಚೆಗೆ ಕೋವಿಡ್‌ನಿಂದ ತನ್ನ ತಂದೆಯನ್ನು ಕಳೆದುಕೊಂಡಿದ್ದಳು.
  3. ಬೆಂಗಳೂರಿನಿಂದ 21 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ವಿಶಾಲ್ ಕುಮಾರ್ ಝಾ ಅವರನ್ನು ಬಂಧಿಸಲಾಗಿತ್ತು. ತಮ್ಮ ಕಕ್ಷಿದಾರರನ್ನು ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದೆ ಎಂದು ವಿಶಾಲ್ ಕುಮಾರ್ ಪರ ವಕೀಲರು ಹೇಳಿದ್ದಾರೆ.
  4. ಮತ್ತೊಬ್ಬ ಸಂಚುಕೋರ ಮಯಾಂಕ್ ರಾವಲ್ (21)ನನ್ನು ಉತ್ತರಾಖಂಡದಿಂದ ಬಂಧಿಸಲಾಗಿದೆ. ಆತ ದೆಹಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದು, ಜಾಕಿರ್ ಹುಸೇನ್ ಕಾಲೇಜಿನಲ್ಲಿ ರಸಾಯನಶಾಸ್ತ್ರದ ಅಧ್ಯಯನ ಮಾಡುತ್ತಿದ್ದಾನೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd